ಪೋಲಿಸರು ಬಂದಾಗ ಓಡಿ ಹೋಗ್ತಿನಿ, ಅವರ ಹೋದ ನಂತರ ಊಟಾ ಹುಡಕ್ತಿನಿ.
"ನನಗೆ ಕೊರೊನಾ ಸಾಯಸ್ತಿರಲಿಲ್ಲಾ, ಆದರೆ ಹಸಿವು ಸಾಯಸ್ತಿತ್ತು."
ನನಗಂತೂ ವಯಸ್ಸಾಗಿದೆ ಮನೆಯಲ್ಲಿ ನಾನಿರೊದು ಮಗನಿಗೆ ಇಷ್ಟವಿಲ್ಲಾ, ಮಗ ಸೊಸೆಯರಿಗೆ ನಾನೆಂದರೆ ಅಸೂಯೆ, ಅನಿಷ್ಟ. ಮಗಳ ಮನೆಗೆ ಹೋದರೆ ಅಳಿಯ ಹಂಗಿಸಿ ಏನೇನೊ ಮಾತಾಡ್ತಾನೆ. ತುಂಬಾ ಗೌರವದಿಂದ ಸ್ವಾಭಿಮಾನಿಯಾಗಿ ಬದುಕಿದ ನನಗೆ ಬದುಕು ಇಷ್ಟೊಂದು ದುರ್ಭರ ಪರಸ್ಥಿತಿಗೆ ತಂದು ನಿಲ್ಲಿಸಿದೆ.
ದುಡಿಯುವ ವಯಸ್ಸಲ್ಲಿ ಸಂಸಾರ, ಮಕ್ಕಳು ಎಂದು ಕತ್ತೆ ದುಡಿದಾಗೆ ದುಡಿದೆ. ಮನೆಯಲ್ಲಿ ಕಾಲ ಕಳೆಯುವದಕ್ಕಿಂತ ಕಾಯಕದಲ್ಲೆ ಜಾಸ್ತಿ ಕಾಲಕಳೆದಾಯ್ತು.
ಮಕ್ಕಳು ದೊಡ್ಡವರಾಗಿ ಉನ್ನತ ಸ್ಥಾನದಲ್ಲಿ ಬೆಳೆದಾಗ ನನ್ನನ್ನು ರಾಜನಂತೆ ನೋಡಿಕೊಳ್ತಾರೆ. ಆವಾಗ ನಾನು ಮೊಮ್ಮಕ್ಕಳ ಜೊತೆ ಹಾಯಾಗಿ ಕಾಲ ಕಳೆಯಬಹುದೆಂಬ ಅತ್ಯಂತ ಸಂತುಷ್ಟ ಕನಸು ಕಂಡೆ. ಮಗಳನ್ನ ಒಳ್ಳೆಯ ಶ್ರೀಮಂತ ಮನೆತನದ ಶಿರಸ್ತೆದಾರ ಹುದ್ದೆಯಲ್ಲಿರುವ ವರನಿಗೆ ಅವನು ಕೇಳಿದ ಬಕ್ಷಿಸು ನೀಡಿ ಭರ್ಜರಿ ಮದುವೆ ಮಾಡಿದೆ. ಮಗನನ್ನು ಲಾಯರ್ ಓದಿಸಿದೆ ಆತ ಊರಿಗೆ ದೊಡ್ಡ ಲಾಯರಾದ.
ಆದರೆ ಕಾಲ ನನ್ನನ್ನು ಹಿಂದೆಳೆದು ಕೊನೆಯ ಸ್ಥಾನದಲ್ಲಿ ನಿಲ್ಲಿಸಿತು. ನನ್ನಾಕೆಯದೆ ಅದೃಷ್ಟ ಕಷ್ಟವನ್ನು ಅನುಭವಿಸುವ ಮುಂಚೆಯ ಅಸುನಿಗಿದಳು. ಇನ್ನೂ ನಾನು ಮೊಮ್ಮಕ್ಕಳೊಂದಿಗೆ ಸುಖಿ ಕಾಲ ಕಳೆಯಬೇಕೆಂದು ಹುಚ್ಚು ಕನಸುಕಂಡೆ. ಆದರೆ ಸೊಸೆಗೆ ನಾನು ಮನೆಯಲ್ಲಿರುವದು ಸ್ವಲ್ಪವೂ ಹಿಡಿಸದು, ಮಗ ಸಹಿಸಲಾಗದ ಪದಗಳಿಂದ ನಿಂದಿಸತೊಡಗಿದ. ಕೆಲಸ ಮಾಡುವಾಗ ನನಗೊಂದು ಮನೆ ಇತ್ತು. ಆದರೆ ಶ್ರೀಮಂತಿಕೆ ಜಾಸ್ತಿಯಾದಂತೆ ನಾನೆ ಇನ್ನೊಬ್ಬರ ಮನೆಯಲ್ಲಿ ಬಿಟ್ಟಿ ಊಟಕ್ಕೆ ಬಿದ್ದಿದೆನೆಂಬ ಭಾವ ಹೆಚ್ಚಾಯ್ತು. ಊರಿಗೆ ನ್ಯಾಯವದಗಿಸುವ ನ್ಯಾಯವಾದಿ ತಂದೆಗೆ ಅನ್ಯಾಯ ಮಾಡಿದ, ಊರಿಗೆ ಉಪಕಾರ ಮಾಡುವ ಶಿರಸ್ತೆದಾರ ಅಳಿಯ ಮಾವನನ್ನು ಹಿಯಾಳಿಸಿದ.
ಒಂದಿನಾ ಈ ಕಷ್ಟಕ್ಕಿಂತ ಭಿಕ್ಷೆ ಬೇಡಿಯಾದರೂ ನೆಮ್ಮದಿಯಿಂದ ಇರಬೇಕೆಂದು ಮನೆಬಿಟ್ಟು ಅವರ ಕಣ್ಣಿಗೆ ಕಾಣಬಾರದೆಂಬ ಆಸೆಯಿಂದ ಆರು ತಿಂಗಳಾಯ್ತು ದೂರದ ಈ ಊರಿಗೆ ಬಂದು. ಒಂದು ಹೋಟೆಲಿನಲ್ಲಿ ಕ್ಲಿನರ್ ಆಗಿ ಕೆಲಸ ಮಾಡತಿದ್ದೆನೆ. ಮೂರು ಹೊತ್ತು ಊಟಾ, ನೆಮ್ಮದಿಯ ಸೂರು, ಯಾರು ಹಂಗಿಸೊರಿಲ್ಲಾ. ನನಗೆ ಈಗ ವಾರ ವಾರ ಸಂಬಳ.
ಆದರೆ ಕೊರೊನಾ ಎಂಬ ಮಹಾಮಾರಿಗೆ ಎಲ್ಲಾ ಕಡೆ ಲಾಕಡೌನ ಆಗಿದೆ. ನಮ್ಮ ಹೋಟೆಲ್ ಕೂಡಾ ಮುಚ್ಚಿದರು. ಯಜಮಾನ "ನಿಮ್ಮ ಊರಿಗೆ ಹೋಗಿ" ಎಂದು ಒಂದಿಷ್ಟು ದುಡ್ಡು ಕೊಟ್ಟು ಹೋದರು. ಆದರೆ ನಾನು ಹೊಗುವುದಾದರು ಎಲ್ಲಿಗೆ ? ಯೌವನದವರು ಕಾಲ್ನಡಿಗೆಯಲ್ಲೆ ಹೋದರು, ಆದರೆ ನಾನು ಹೇಗೆ ಹೋಗಲಿ. ಎರಡು ದಿನಾ ಅಲ್ಲೆ ಹೊಟೆಲ್ ಸಂದಿಯಲ್ಲಿ ಮಲಗಿದೆ. ಆದರೆ ಮೂರನೇ ದಿನ ಹೊಟ್ಟೆ ಚುರಗುಟ್ಟಲಾರಂಭಿಸಿತ್ತು. ಯಾರಾದರೂ ಊಟ ಕೊಡುವರೆಂಬ ಭರವಸೆಯೊಂದಿಗೆ ತಿರುಗಾಡಿದೆ. ಆದರೆ ಒಂದು ದಿನಕ್ಕೆ ಒಂದೊತ್ತು ಊಟ ಸಿಗುವದು ಕಷ್ಟವಾಯ್ತು. ಹಾಗೆ ಹುಡುಕಿ ಹೋರಟಾಗ ಪೊಲಿಸರು ಬಂದರೆ ಮತ್ತೆ ಓಡಿಹೊಗಿ ಸಂದಿ ಸೇರುತ್ತಿದ್ದೆ. ಅವರು ಹೋದಾಗ ಮತ್ತೆ ಊಟ ಹುಡುಕುತ್ತಿದ್ದೆ. ಒಂದಿಷ್ಟು ದಿನಗಳಾದ ಮೇಲೆ ಕೆಲವು ದಾನಿಗಳು ಬಂದರು. ಊಟ ಕೊಡುತ್ತಿದ್ದರು ಆದರೆ ಊಟ ಕೈಯಲ್ಲಿಟ್ಟು ಪೋಟೊ ಹೊಡೆದುಕೊಂಡಾದ ಮೇಲೆ. ಸ್ವಾಭಿಮಾನಿಯಾಗಿ ಬದುಕಿದ ನನಗೆ ಅದೊಂದು ರೀತಿ ಹಿಂಸೆ ಆಗತಿತ್ತು. ಆದರೆ ಕಾಲದ ನಿರ್ಣಯ ಹೊಟ್ಟೆ ಹಸಿವು ಅದಕ್ಕೆ ಬಲವಂತವಾಗಿ ಹೊಸಕಾಕ್ತಿತ್ತು. ಒಂದೊಂದು ದಿನಾ ಊಟ ಸಿಗುತ್ತೆ ಒಂದೊಂದು ದಿನಾ ಇಲ್ಲಾ. ಕೆಲವೂ ಕಡೆ ಊರಿನವರೆ ಹೋಡಿಯೊಕೆ ಬರ್ತಿದ್ದರು. "ಈ ಕಡೆ ಬರಬೇಡಾ, ಅಲ್ಲಿ ಕೂರಬೇಡಾ, ಇಲ್ಲಿ ಕೂಡಬೇಡಾ, ಓಡಾಡ ಬೇಡಾ ಅಂತಿದ್ದರು" ಆದರೆ ತಾವೂ ಊರ ತುಂಬಾ ಓಡಾಡುತ್ತಿದ್ದರು. ಹೇಗೊ ಸರಕಾರದ ಗಮನಕ್ಕೆ ಬಂದ್ವಿ ಈಗ ನಮಗೆ ನಿರಾಶ್ರಿತರ ಕೆಂದ್ರಕ್ಕೆ ತಂದಿಟ್ಟಿದ್ದಾರೆ. ಊಟ ಸಿಗುತಿದೆ ಇಲ್ಲದಿದ್ದರೆ ನನಗೆ ಕೊರೊನಾ ಸಾಯಿಸ್ತಿರಲಿಲ್ಲಾ, ಆದರೆ ಹಸಿವು ಮಾತ್ರ ಕ್ಷಣ ಕ್ಷಣಕ್ಕೂ ಸಾಯಿಸ್ತಿತ್ತು.
ರಾಜು.ಪಾಟೀಲ(ಸಿಂದಗಿ)
9611042409



8 ಕಾಮೆಂಟ್ಗಳು
Super anna
ಪ್ರತ್ಯುತ್ತರಅಳಿಸಿTq akka
ಅಳಿಸಿಬಾರಿ ಬರದಿ ದೋಸ್ತ್ ಕಣ್ಣಾಗ ನಿರಬರತಾವ ಇದೇ ಬರಿತಾ ಇರು ದೋಡ ಬರಹಗಾರ ಆಗೋದು ಗ್ಯಾರೆಂಟಿ
ಪ್ರತ್ಯುತ್ತರಅಳಿಸಿದೊಸ್ತಿ ನಿನ್ನ ಸಹಕಾರ ಇರಬೇಕು. ಮಿತ್ರ.
ಪ್ರತ್ಯುತ್ತರಅಳಿಸಿಅಣ್ಣ ನಿಮ್ಮ ಪ್ರತಿ ಬರವಣಿಗೆ ನಾನ್ ಓದತಿನಿ
ಪ್ರತ್ಯುತ್ತರಅಳಿಸಿಚೆನ್ನಾಗಿ ಬರ್ತಿರಾ ನಿಮ್ಮ ಈ ಬರವಣಿಗೆ ನಿಮ್ಮ ಭಲ ಆಗ್ಲಿ ಅಂತ ಹಾರೈಸುವೆ🙏
ಧನ್ಯವಾದಗಳು ತಮ್ಮ ಹೆಸರು ತಿಳಿಸುವಿರಾ ?
ಅಳಿಸಿನಿನ್ನ ಈ ಸುಂದರವಾದ ಬರವಣಿಗೆ ನನಗೆ ತುಂಬಾ ಇಷ್ಟ ವಾಗಿದೆ ಇನ್ನು ಹಾಗೆ ಬರೆಯುತ್ತಾ ಇರು ನಿನ್ನ ಬರವಿಗೆ ಹೆಮ್ಮರವಾಗಿ ಬೆಳೆಯಲಿ ನಿನ್ನ ಬರವಣಿಗೆಯಲ್ಲಿ ಅಗಾದವಾದ ಶಕ್ತಿ ಇದೆ....
ಪ್ರತ್ಯುತ್ತರಅಳಿಸಿರಾಜು ಪಾಟೀಲ ಸತ್ಶ ಘಟನೆ ಓಳ್ಳೇಯ ಸಂದೇಶ ನಿಮ್ಮ ಬರವಣಿಗೆ ಏಲ್ಲರಿಗೂ ಅರ್ಥವಾದ ಸಂದೇಶ ವಾಗಿದೆ ಹಿಗೆ ಬರವಣಿಗೆ ಬರೆಯುತ್ತಾ ರಿ ನಿಮ್ಮಗೆ ಶುಭವಾಗಲ್ಲಿ ಗೆಳೆಯ ಶುಭ ಮುಂಜಾನೆ
ಪ್ರತ್ಯುತ್ತರಅಳಿಸಿ