Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಪ್ರಮಾಣ ಮಾಡುವೆ ನಾ ನಿನ್ನ

ಪ್ರಮಾಣ ಮಾಡುವೆ ನಾ ನಿನ್ನ,
ಮರೆಯಲಾರೆ ಎಂದು ನಿನ್ನ,
ಮರೆತರೆ ತೊರೆಯುವೆ ಈ ದೇಹವನ್ನ,
ಆದರೂ ಪ್ರಿತಿಸುವೆನು ನಿನ್ನ.

ಇದ್ದಾಗ ಜಗಳಾಡಿದೆ  ಅನುದಿನ,
ಗೊತ್ತಾಗಿದೆ ನಿನ್ನ ಪ್ರೀತಿ ಈ ದಿನ,
ಮನಸ್ಸಾಗುತ್ತಿಲ್ಲ ಕಳೆಯಲು ದಿನ,
ಪುನಃ ಯಾವಾಗ ಸೆರುವೆ ನನ್ನ ಮನ ?

ಮುದ್ದಾಗಿ ಬಯ್ಯುತ್ತಿದ್ದೆ,
ಮಗುವಾಗಿ ಪ್ರಿತಿಸುತ್ತಿದ್ದೆ, ಗೆಳತಿಯಾಗಿ ಸಲಹುತ್ತಿದ್ದೆ,
ಈಗ,,,,..
ಕಣ್ಣರಾಗುತ್ತಿದೆ ಮೈ ಮನಃ


ಎಲ್ಲೆ ಹೋಗಲಿ ಎನೆ ಕಾಣಲಿ
ಇರುವೆ ನಿನಲ್ಲಿ, ಕಾಣುವೆ ನಿನಲ್ಲಿ.


ಕೆಲಸದಲ್ಲಿ ಗಮನಿಸಿಲ್ಲ ನಾನಿನ್ನ,
ಇಗ ಗಮನಿಸುವೆ ಅಂದ್ರ ನನ್ನವಳಾಗುವೆಯಾ ಇನ್ನ ?


ಮತ್ತೆ ಮರಳಿ ಬರುವೆಯಾ ನನ್ನಲ್ಲಿಗೆ ?
ಸತ್ಯ ಅರಿತು ನಾ ಕಾಯುವೆ ಕೊನೆವರೆಗೆ ?

ಬರದಿದ್ದರೆ ಖಂಡಿತ ದೇವದಾಸನಾಗೊದಿಲ್ಲ ನಾನು,
ಆದರೆ ಸಾಮಾನ್ಯರಿಗಿಂತ ಸಾಮಾನ್ಯನಾಗುವೆ ನಾನು.

ನಿನಿದ್ದಾಗ ಇದ್ದ ಆ ಶಕ್ತಿ
ಯಾಕೊ ಕಾಣುತ್ತಿಲ್ಲಾ ಆಗಿನ ಆ ವ್ಯಕ್ತಿ.

ತಾಜಮಹಲ ಕಟ್ಟದಿದ್ದರೆನಾಯಿತು,
ಗುಡಿಸಲಿದ್ದರೂ ಶಹಜಾನನಗಿಂತ  ಹೆಚ್ಚು ಪೀತಿಸುವೆ !

ಹೂ ವಿಲ್ಲದ ಬೃಂದಾವನ, ಚಂದಿರ ನಿಲ್ಲದ ಬಾನು,
ಎಷ್ಟು ಕಳಪೆಯೊ !
ರಾಣಿಯಿಲ್ಲದೆ ರಾಜನು ಅಷ್ಟೆ !
ನಿನಿಲ್ಲದೆ ನಾನು ಅಷ್ಟೆ, ನಿನಿಲ್ಲದೆ ನಾನು ಅಷ್ಟೆ !

ಹೆಸರಿನಲ್ಲಿ ರಾಜ ನಾನು, ರಾಣಿಯಿಲ್ಲದೆ ರಾಜನೆಲ್ಲಿ ಇನ್ನೂ.

ನಿನ್ನೆ ಯಾಕೆ ಪ್ರೀತಿಸಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿತ್ತು ನನಗಿನ್ನು.
ಆದರೆ ಹಣೆಬರಹ ಗಿಚುವಲ್ಲಿ ನಿನಿಲ್ಲ ಇನ್ನೂ,
ಗೆಳತಿಯಾದೆ ಇನ್ನೊಬ್ಬನ ಹಣೆಬರಹ ಗಿಚುವಲ್ಲಿ ಇನ್ನೂ.

ಹೆಳಿದರೂ ಹೆಳದಿದ್ದರೂ ಬಾಡದಿರಲಿ ಸಾಕಿದ ಆ ಪ್ರೇಮದ ಹೂ,
ದೇವರಲ್ಲಿ ಪ್ರಾಥಿಸುವೆ ನೀಡಲ್ಲಿ ನಿನಗೆ ನನ್ನ ಆಯಸ್ಸುನ್ನು.

-YB Raj Patil

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು