Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಇತನ ಹೆಸರು ಕೇಳಿದ್ದರೆ ತಾಲಿಬಾನಿಗಳು ಹೆದರುತ್ತಾರೆ. ಹಿಂದೂ ಧರ್ಮದ ಹೆಮ್ಮೆ ಇವರು.

ಶೇರ ಸಿಂಗ್ ರಾಣಾ(Sher Sing Rana)


ಹೆಸರಿಗೆ ತಕ್ಕಂತೆ ಶೇರ್. ಈ ದೇಶದ ಪ್ರತಿಷ್ಠಿತ ಮಹಿಳೆಯ ಕೋಲೆಗಾರ. ಆತ ಈ ದೇಶದ ಗೌರವವನ್ನು ಹೆಚ್ಚಿಸಿದಾತ. ಸಾವಿರಾರು ದೇಶ ಭಕ್ತ ಯುವ ಪೀಳಿಗೆಗೆ ಸ್ಪೂರ್ತಿಯಾದವ. ಆತನ ಛಲ ಸಾಹಸಗಳನ್ನು ಕೇಳಿದರೆ ಎಂಥವರಿಗೂ ಮೈ ರೋಮಾಂಚನವಾಗದೆ ಇರದು. ಅಷ್ಟಕ್ಕೂ ಆತ ಮಾಡಿದ್ದೆನು ಅಂತಿರಾ....?


 


ಆತನ ಹೆಸರು ಶೇರ ಸಿಂಗ್ ರಾಣಾ. ಒಂದು ಕಾಲದ ಕುಖ್ಯಾತ ಡಕಾಯತಿ ಮತ್ತು ಸಂಸದೆ ಪುಲನದೇವಿಯನ್ನು 2001 ರಲ್ಲಿ ಗುಂಡಿಕ್ಕಿ ಕೊಂದಾತ.  ಆಕೆ ತನ್ನ ಕುಟುಂಬದ 20 ಠಾಕೂರರನ್ನು ಕೊಂದ ಸೇಡಿನ ತರುವಾಯ ಆಕೆಯನ್ನು ಗುಂಡಿಕ್ಕಿದ್ದಾಗಿ ಸ್ವತಃ ಅಪರಾಧವನ್ನು ಒಪ್ಪಿ ದೆಹಲಿಯ ಅತ್ಯಂತ ಸುರಕ್ಷಿತ ತಿಹಾಡ ಜೈಲನ್ನು ಸೇರಿದ್ದ. ಆಗಲೆ ಆತ ಒಂದು ಮಾತು ಹೇಳಿದ್ದ "ಜಗತ್ತಿನ ಯಾವ ಜೈಲು ನನ್ನನ್ನು ಬಹಳ ದಿನ ಬಂಧಿಯಾಗಿಡಲಾಗದು" ಅಂತಾ. ಅದಾಗಿ ಎರಡು ವರ್ಷ ಅಂದರೆ 2004 ರಲ್ಲಿ ಅತ್ಯಂತ ಸುರಕ್ಷಿತ ಬಂಧಿಖಾನೆ ಅಂತಲೆ ಖ್ಯಾತಿ ಹೊಂದಿದ ತಿಹಾಡ ಜೈಲಿನಿಂದ ಸಿನಿಮೀಯ ರೀತಿಯಿಂದ ಪಾರಾಗಿ, ಅಲ್ಲಿಂದ ಬಾಂಗ್ಲಾದೇಶಕ್ಕೆ ಸೇರಿ ಅಲ್ಲಿ ನಕಲಿ ಪಾಸಪೊರ್ಟ ಮಾಡಿಕೊಂಡು ದುಬೈ ಹೋಗಿ, ದುಬೈ ನಿಂದ ಅಫ್ಘಾನಿಸ್ತಾನ ಸೇರ್ತಾರೆ.

ಇಲ್ಲಿಂದ ಅವರ ಯಶೋಗಾಥೆ ಪ್ರಾರಂಭವಾಗುತ್ತದೆ. ಅಫ್ಘಾನಿಸ್ತಾನ ಸೇರಿದ ಬಳಿಕ ಅಲ್ಲಿ ಹಿಂದೂ ಹೃದಯ ಸಾಮ್ರಾಟ ಪೃಥ್ವಿರಾಜ ಚವ್ಹಾಣ ಅವರ ಸಮಾಧಿಯನ್ನು ಹುಡುಕುತ್ತಾನೆ. ಅದು ಘೋರಿ ಎಂಬ ಪ್ರದೇಶದಲ್ಲಿದ್ದು ಅದು ಮಹಮದ ಘೋರಿ ಸಮಾಧಿ ಮಂದಿರದ ಹೊರಗಡೆ ಅಂದರೆ ಚಪ್ಪಲಿ ಬಿಡುವ ಸ್ಥಳದಲ್ಲಿ ನಮ್ಮ ಧರ್ಮವೀರ ಪೃಥ್ವಿರಾಜ ಚವ್ಹಾಣ ಅವರ ಸಮಾಧಿ ಇರುತ್ತದೆ. ಅಲ್ಲಿ ಬಂದವರೆಲ್ಲಾ ಚವ್ಹಾಣರ ಸಮಾಧಿಗೆ ಅವಮಾನ ಮಾಡಿ ಘೋರಿ ಸಮಾಧಿಗೆ ಕೈಮುಗಿದು ಹೊಗುವದು ಅಲ್ಲಿ ರೂಢಿಯಲ್ಲಿತ್ತು. ಇದನ್ನು ಕೇಳಿ ತಿಳಿದಿದ್ದ ರಾಣಾ ಹೇಗಾದರು ಮಾಡಿ ಪೃಥ್ವಿರಾಜ ಚವ್ಹಾಣ ಅವರ ಅವಶೇಷಗಳನ್ನು ಭಾರತಕ್ಕೆ ತಂದು ಸಕಲ ಗೌರವಗಳೊಂದಿಗೆ ಅವರ ಸಮಾಧಿ ಮಾಡಬೇಕೆಂಬ ಆಲೋಚನೆಯಿಂದ ಅಫ್ಘಾನಿಸ್ತಾನ ಸೇರಿರುತ್ತಾನೆ. 


 


ಒಂದು ದಿನಾ ರಾತ್ರಿಯೆಲ್ಲಾ ಸಮಾಧಿಯನ್ನು ಅಗೆದು ಪೃಥ್ವಿರಾಜ ಚವ್ಹಾಣ ಅವರ ಅವಶೇಷಗಳನ್ನು ತೆಗೆದುಕೊಂಡು ಭಾರತಕ್ಕೆ ಬರುತ್ತಾನೆ. ಇದಕ್ಕೆ ಸಾಕ್ಷಿಯಾಗಿ ರಾಣಾ ವಿಡಿಯೋ ಕೂಡಾ ಮಾಡಿರುತ್ತಾನೆ. ಭಾರತಕ್ಕೆ ಬಂದು ತಮ್ಮ ತಾಯಿಯ ಮೂಲಕ ಹಿಂದೂ ನಾಯಕನಿಗೆ ಸಕಲ ಗೌರವಗಳೊಂದಿಗೆ ಸಮಾಧಿಯನ್ನು ಮಾಡಿ ದೇವಸ್ಥಾನವನ್ನು ಕಟ್ಟುತ್ತಾನೆ. 

2006 ರಲ್ಲಿ ಕಲ್ಕತ್ತದ ಗೆಸ್ಟಹೌಸನಲ್ಲಿ ಪೊಲಿಸರ ಕೈಗೆ ಸಿಕ್ಕಿಹಾಕಿಕೊಂಡಾಗ ಇದೆಲ್ಲಾ ಬಯಲು ಮಾಡುತ್ತಾನೆ ಶೇರ ಸಿಂಗ ರಾಣಾ. ನಿಜಕ್ಕೂ ಇತನ ಜೀವನಗಾಥೆ ಮಾದರಿ ಮತ್ತು ಸ್ಪೂರ್ತಿದಾಯಕವಾಗಿದೆ. 2017 ರಲ್ಲಿ ಬಿಡುಗಡೆಯಾದ ರಾಣಾ 10 ಕೊಟಿ ವರದಕ್ಷಿಣೆ ಕೊಡುವ ಸಂಬಂಧವಿದ್ದರೂ ಏನು ತೆಗೆದುಕೊಳ್ಳದೆ ಕೇವಲ ಒಂದು ಬೆಳ್ಳಿಯ ನಾಣ್ಯ ಪಡೆದು ಸರಳವಾಗಿ ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹಿಂದಿ ಚಿತ್ರನಟ ಅಜಯ ದೇವಘನ ಕೂಡಾ ಶೇರ್ ಸಿಂಗ ರಾಣಾನ ಜೀವನ ಕುರಿತು ಚಿತ್ರ ನಿರ್ಮಿಸಲು ಮುಂದಾಗಿದ್ದರು ಕೆಲವೂ ಅಡೆತಡೆಗಳಿಂದ ಅದು ಸಾಧ್ಯವಾಗಿಲ್ಲಾ ಆದರೆ ಮುಂದಿನ ದಿನಮಾನಗಳಲ್ಲಿ ಬೆಳ್ಳಿಪರದೆಯೆ ಮೇಲೆ ಇವರ ಜೀವನ ಇಡಿ ದೇಶವೆ ಅರಿಯುವಂತಾಗೊದಂತೂ ಸತ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು