ಊರ ಮಹಾ ಮಹಾನುಭಾವರು ?
ಅಲ್ಲಲ್ಲಿ ತೆಲೆಯಲ್ಲಿ ಬಿಳಿ ಕೂದಲು. ಬರೆದೆ ಇರುತ್ತದೆಯೆ ವಯಸ್ಸು 40 ಆಸು ಪಾಸು. ರಸಾಯನಿಕ ಊಟ ಬೆಳ್ಳಗ್ಗೆ ಆಗದೆ ಇರುತ್ತದೆಯೆ ? ಈ ಬಿಳಿ ಕೂದಲು ಕರ್ರಗೆ ಕಾಣುವಂತೆ ಹೇರಡ್ರೈ ಮಾಡಿಸಿಕೊಂಡು ಊರಿಗೆ ಹೊರಟಿದ್ದೆ.... ದಾರಿಯಲ್ಲಿ ಮಳೆ ಹತ್ತಬಿಡೊದಾ. ಹಾಕಿರೊ ಬಿಳಿಬಟ್ಟೆ ಸಂಪೂರ್ಣ ಕಪ್ಪಾಗ ತಿರುಗತೊಡಗಿತು. ವಿಧಿಯಿಲ್ಲ ಹಾಗೆ ಊರಿಗೆ ಹೊಗಬೇಕಾಯ್ತು.... ಊರಿಗೆ ಹೊಗುವಷ್ಟರಲ್ಲಿ ಮಳೆ ಸಣ್ಣಗಾಗಿತ್ತು ಆದರೆ ಜನ ಯಾಕೊ ಉರ ಬಾಗಿಲಲ್ಲೆ ನಿಂತು ಗುಸು ಗುಸು ಮಾತಾಡೊದು ನಡೆದಿತ್ತು. ಏನೊ ಅನಾಹೂತ ಆಗಿದೆ ಎಂಬ ಮುನ್ಸೂಚನೆಯೊಂದಿಗೆ ಆ ಗದ್ದಲದಲ್ಲಿ ಸೇರಿಕೊಂಡೆ. ಅಷ್ಟರಲ್ಲಿ ಅಲ್ಲಿದ್ದ ಮಲ್ಲೇಶಿ "ಅಣ್ಣ ಆ ಮೇಲಿನಮನೆ ಮರೇಪ್ಪಗ ಪೋಲಿಸರು ಹಿಡಿದುಕೊಂಡು ಹೊಗಿದಾರೆ, ಆತ ಗಾಂಜಾ ಬೆಳೆಯುತ್ತಿದ್ದನಂತೆ." ನನಗೆ ಆಶ್ಚರ್ಯ-ದಿಗಿಲು ನಂಬಲು ಅಸಾಧ್ಯವಾದ ಮಾತು. "ನಿಜಾ ಹೆಳೊ" ಅಂದೆ "ನಿಜಾ ಅಣ್ಣ ಇದಿಗಾ ತಾನೆ ಹೊದರು, ನಿಮಗಾಗಿನೆ ಕಾಯ್ತಿದ್ವಿ ಹೊಗಿ ವಿಚಾರಿಸಿ ಅಣ್ಣ" ಅಂದ. ನನ್ನ ಮೈ ಕೊಳೆಯಾದರಿಂದ ನಾನು ಸ್ನಾನ ಮುಗಿಸಿ ಹೊಗಿ ನೊಡಿ ಬರೊಣ ಅಂತಾ ಮನೆಗೆ ಹೊದೆ.
ಪೋಲಿಸ ಸ್ಟೆಶನಗೆ ಹೊಗುವಷ್ಟರಲ್ಲಿ ಊರಿನ ಹಿರಿಯರು ಎನಿಸಿಕೊಂಡ ಎಲ್ಲಾ ಮಹಾ ಮಹಾನುಭಾವರೆಲ್ಲಾ ಇದ್ದರು. ಏನೊ ನಾಮಕವಾಸ್ತೆ ನಾನು ಬರುವದನ್ನು ಕಾಯುತ್ತ ನಿಂತಿದ್ದರು. ಈ ಎಲ್ಲಾ ಮಹಾನುಭಾವರು ಮಾಡಿರೊ ಒಂದ ಪೈಸೆಯಷ್ಟು ಆ ಮರೆಪ್ಪ ಅಪಾರಾಧ ಮಾಡಿಲ್ಲ ಆದರೂ ಇವರು ಹೊರಗೆ, ಆತ ಒಳಗೆ. ಒಬ್ಬ ಊರ ಸಾವಕಾರ ಬಡವರಿಗೆ ಹೆಚ್ಚಿನ ದರದಲ್ಲಿ ಬಡ್ಡಿಹಂಗೆ ಹಣ ಕೊಟ್ಟು ಅವರ ಹೊಲ ಬರೆಯಿಸಿಕೊಳ್ಳುವದು. ಮುಂದೆ ಬಡ್ಡಿಗೆ ಬಡ್ಡಿ ಮಾಡಿ ಹೊಲದ ಕಿಮ್ಮತ್ತಿಕಿಂತ ಜಾಸ್ತಿ ಸಾಲದ ಲೆಕ್ಕಾ ಮಾಡಿ ಹೊಲವನ್ನು ಕಬ್ಜಾ ಮಾಡಿಕೊಂಡು ಇನ್ನೂಳಿದ ಹಣಕ್ಕೆ ಹಿಂಡಿ ಹಿಂಡಿ ಹಿಪ್ಪಿಮಾಡುವದು. ಇನ್ನೊಬ್ಬ ಮಾಹಾನುಭಾವ ಕಲ್ಲನಗೌಡ ಕೂಲಿಗೆ ಬಂದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೊದು, ಊರಲ್ಲಿ ಚಂದ ಕಂಡ ಹೆಣ್ಣುಮಕ್ಕಳು ತನಗೆ ಸೆರಬೇಕು ಎಂಬ ಕಾಮಿಷ್ಠ ಬುದ್ದಿಯ ಹೆಣ್ಣುಬಾಕ. ಇನ್ನೂ ಲಿಡರ ರಾಮಣ್ಣ ಊರಲ್ಲಿ ಯಾವದೆ ಸರಕಾರಿ ಕೆಲಸವಿದ್ದರು ಆತನೆ ವಾರಸ್ದಾರಿಕೆಯಲ್ಲಿಯೆ ನಡೆಯಬೇಕು. ಇತನಿಗೆ ಹಣ ಮುಟ್ಟಿಸಿದ ಮೇಲೆಯೆ ಆ ಕೆಲಸ ಸುಲಲಿತ ಇಲ್ಲವಾದರೆ ಆ ಅಧಿಕಾರಿಗಳಿಗೆ ಹೆದರಿಸಿ ಆ ಕೆಲಸ ಆಗದಂತೆ ಮಾಡುವ ಕುತಂತ್ರಿ. ಇನ್ನೂ ರಸೂಲ ಆತ ಇಡಿ ಊರಿನ ಗಂಡಸರಿಗೆ ದುಶ್ಚಟಗಳಿಗೆ ಬಲಿಕೊಟ್ಟ ರಾಕ್ಷಸ. ತಾನೂ ಯಾರ ಭಯವಿಲ್ಲದೆ ಸರಾಯಿ, ಇಸ್ಪಿಟ ಆಡಸ್ತಾನೆ ಅದರಿಂದಾನೆ ಭಿಕಾರಿಯಂತಿದ್ದ ರಸೂಲ ಸಾಕಷ್ಟು ಜಮೀನು, ಬಂಗಲೆ ಕಟ್ಟಿಸಿ ಊರಿನ ಮಹಾನುಭಾವರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ. ಇವರೆಲ್ಲರ ಸ್ನೇಹ ಹಾಲು ಜೇನಿದ್ದಂತೆ. ಹಾಗೆ ಇರಬೇಕು ಅಲ್ಲವೆ ಕಳ್ಳರಿಗೆ ಕಳ್ಳರೆ ಜೋಡಿ. ಇವರೆಲ್ಲಾ ಬಡಪಾಯಿ ಮರೆಪ್ಪನನ್ನು ಬಿಡಿಸೊಕೆ ಬಂದವರು ಒಂದ ರೀತಿ ನನಗೆ ಕಾಲವನ್ನೆ ದ್ವೇಷಿಸುವಂತಾಯ್ತು.
ಬನ್ನಿ ಬನ್ನಿ ಮೇಂಬರ ಸಾಹೇಬರೆ ನಮಸ್ಕಾರ ಎಲ್ಲಾ ನಾಲ್ಕು ಮಹಾನುಭಾವರು ನನ್ನ ಕೊಂಕಿನಿಂದ ಬರಮಾಡಿಕೊಂಡರು. ನಾನು ಏನು ಮಾತನಾಡದೆ ಕೈ ಮುಗಿದು ನಡೆಯಿರಿ ಅಂದೆ. ಎಲ್ಲರೂ ಸೇರಿ ಸ್ಟೆಶನಗೆ ಹೊದ್ವಿ ಸಬ್ ಇನಸ್ಪೆಕ್ಟರ್ ಗೌರವದಿಂದ ನಮ್ಮನ್ನೆಲ್ಲಾ ಕುರಿಸಿ ಉಪಚರಿಸಿದರು. ಟಿ ಕುಡಿದಾದ್ಮೆಲೆ ವಿಷಯಕ್ಕೆ ಬಂದ್ವಿ. "ಆತನ ಜಮೀನದಲ್ಲಿ ಗಾಂಜಾ ಪತ್ತೆಯಾಗಿದೆ ಹೆರಳವಾಗಿ ನಾವೂ ಏನು ಮಾಡೊದಕ್ಕೆ ಆಗಲ್ಲ. ಇದು ಜಾಮಿನುರಹಿತ ಪ್ರಕರಣ ದೊಡ್ಡ ಅಪರಾಧ" ಎಂದೂ ಬೈಪಾಠ ಮಾಡಿದವರಂತೆ ಒಂದೆ ಸಲಕ್ಕೆ ವರದಿ ಒಪ್ಪಿಸಿದರು.
ನಾವೂ ಮರೆಪ್ಪನನ್ನ ನೊಡಬೆಕು ಅಂದ್ವಿ. ಆಗಲಿ ಅಂತಾ ಅವನಿರೊ ಜಾಗಕ್ಕೆ ನಮ್ಮನ್ನ ಕರಕೊಂಡ ಹೋದ. ನಮ್ಮನ್ನ ನೊಡಿದಾಕ್ಷಣ ಮರೇಪ್ಪ ಅಳಲಾರಂಭಿಸಿದ. ನನ್ನ ಕೈ ಹಿಡಿದು "ಉಳಿಸಿ ನನ್ನ "ಅಂದಾ. ಈ ಎಲ್ಲಾ ಮಹಾನುಭಾವರನ್ನ ಕಂಡರೆ ಉರಿಯುತ್ತಿದ್ದ ಮರೇಪ್ಪ ಅವತ್ಯಾಕೊ ವಿಧಿಯಾಟಕ್ಕೆ ಸೋತು ಇವರ ಕಾಲಿಗೆ ಬಿಳತೊಡಗಿದ. ದಯವಿಟ್ಟು ನನ್ನ ಉಳಿಸಿ, ದಯವಿಟ್ಟು ನನ್ನ ಉಳಿಸಿ ಅನ್ನತೊಡಗಿದ. ಸ್ವಲ್ಪ ಜಾಸ್ತಿನೆ ಕರುಣೆ ತೊರುವಂತೆ ಹೆಣ್ಣುಬಾಕ ಸಾವಕಾರ ಮರೆಪ್ಪನ ಕೈ ಹಿಡಿದು "ಚಿಂತಿ ಮಾಡಬ್ಯಾಡೊ ನಾವೆಲ್ಲಾ ಅದಕ್ಕೆ ಅಲ್ವೆನೂ ಇಲ್ಲಿಗಂಟ ಬಂದಿದ್ದು ನಿನ್ನ ಬಿಡಿಸಿಕೊಂಡ ಹೊಗ್ತಿವಿ ಏನೂ ಚಿಂತಿ ಮಾಡಬ್ಯಾಡ ನಿನು ನನ್ನ ಒಡಹುಟ್ಟಿದ್ದ ತಮ್ಮ ಇದ್ದಂಗ ಇನ್ಮುಂದಾದರೂ ಸುದ್ದಿರು." ಅಂದ. "ಲಕ್ಷ್ಮಿಗೆ ಗೊತ್ತಾದೆನ ವಿಷಯ, ಇರಲಿ ಆಕಿಗೆ ನಾನೆ ಹೊಗಿ ಹೆಳ್ತಿನಿ ತಲಿ ಕೆಡಿಸ್ಕೊಬೇಡಾ." ಅಂದಾ. ನಂಗೆ ಚಂಗನೆ ಹೊಳಿತು ಒಂದ ಸಲ ಈ ಹೆಣ್ಣುಬಾಕ ಇದೆ ಮರೆಪ್ಪನ ಹೆಂಡತಿಗೆ ಕೈ ಹಿಡಿದು ಜಗ್ಗಿದ್ದ ವಿಷಯಕ್ಕೆ ಮರೆಪ್ಪ ಇತನಿಗೆ ಸರಿಯಾಗಿ ಒದ್ದಿದ್ದ. ಆಗ ಈ ಮಹಾನುಭಾವರೆಲ್ಲರೂ ಸೇರಿ ಮರೆಪ್ಪನನ್ನು ಮಣಿಸುವ ಪ್ರಯತ್ನಪಟ್ಟಿದ್ದರು ಆದರೆ ಇಂದು ಎಲ್ಲಾ ಬದಲಾಗಿದೆಯಲಾ ಎಲ್ಲರೂ ಇತನ ಮೇಲೆ ಕರುಣೆ ತೊರಿಸುತ್ತಿದ್ದರಲ್ಲಾ....
ಸಬ್ ಇನಸ್ಪೆಕ್ಟರ ಹತ್ತೀರ ಬಂದು "ಸ್ವಾಮಿ ಇತ ನಿರಪರಾಧಿ ಆತ ಗಾಂಜಾ ಅಂತಹಾ ವಸ್ತು ಬೆಳೆಯಲಾರ ಆತ ಅಮಾಯಕ ಏನೊ ಆತನಿಗೆ ಗೊತ್ತಾಗದೆ ಬೆಳದಿರಬಹುದು ಮನ್ನಿಸಿ" ಅಂದೆ. ಇದಕ್ಕೆ ಒಪ್ಪಲೆ ಇಲ್ಲ. ನನಗೆ ಕೋಪಾ ಬಂದು "ಊರಲ್ಲಿ ಬಹಿರಂಗವಾಗಿಯೆ ಸಾರಾಯಿ, ಜೂಜು, ಹಾದರ ನಡಿತ್ತಿದ್ದರು ಕಣ್ಣುಮುಚ್ಚಿ ಕುಳಿತು ಎಲ್ಲೊ ಅಡವಿಯಲ್ಲಿ ಬೆಳೆದ ಗಿಡಕ್ಕಾಗಿ ಬಡವನ ಪ್ರಾಣ ಹಿಂಡತಿರಿ ಇದ್ಯಾವ ನ್ಯಾಯರಿ" ಅಂತಾ ದಬಾಯಿಸಿದೆ. ಕಳ್ಳ ಮಹಾನುಭಾವರು ಮತ್ತು ಇನ್ಸ್ ಪೆಕ್ಟರ್ ಕೊಪದೊಂದಿಗೆ ನನ್ನೆ ದಿಟ್ಟಿಸಿದರು. ಈ ಎಲ್ಲಾ ಮಹಾನುಭಾವರು ಸೇರಿ "ಮೆಂಬರ ಸಾಹೇಬರೆ ನಿಮಗೆಲ್ಲಾ ಇದು ಗೊತ್ತಾಗಲ್ಲ ನಿವೂ ಸ್ವಲ್ಪ ಹೊರಗ ನಡಿರಿ ಸಾಹೇಬರಿಗೆ ತಿಳಿಸಿ ಹೆಳಿ ಬಿಡಸ್ಕೊಂಡ ಬರ್ತಿವಿ" ಅಂತಾ ನನಗೆ ಹೊರಗಡೆ ದಬ್ಬಿದರು. ನಾನು ಡಿಗ್ರಿ ಮುಗಿಸಿ ಊರಿಗೆ ಬಂದವನು. ಇವರು ಹೈಸ್ಕೂಲ ಕೂಡಾ ನೊಡಿದವರಲ್ಲ ಈ ಮಹಾನುಭಾವರು ನನಗೆ ತಿಳಿಯೋದಿಲ್ಲ ಅಂತಾರಲ್ಲ. ಇವರ ಕಳ್ಳಾಟ ನನಗೆ ಗೊತ್ತು ಹಾಗಾಗಿ ನಾನು ಹೊರಗೆ ಕಾಯುತ್ತ ನಿಂತೆ..
ಅರ್ದಗಂಟೆ ಮಾತು ಕತೆ ಆದ್ಮೆಲೆ ಎಲ್ಲರೂ ಹೊರಗಡೆ ಬಂದರು. ಎಲ್ಲಿ ಮರೆಯಪ್ಪ ಅಂದೆ. "ಎಲ್ಲಾ ಮಾತಾಡಿದೆವೆ ನಾಳೆ ಬೆಳಗ್ಗೆ ಕಳಸ್ತಾರೆ ನಿಮ್ಮ ಹಾಗೆ ಮಾತಾಡಿದರೆ ಜೈಲೆ ಗತಿ." ಅಂದು ನನ್ನ ತಿರಸ್ಕಾರಭಾವದಿಂದ ನೊಡಿ ಹೊರಟಹೊದರು.
ಮರುದಿನ ಸಾಯಂಕಾಲ ಮರೆಪ್ಪ ಮನೆಗೆ ಹೊದೆ ಮರೆಪ್ಪ ಬೊರಲಾಗಿ ಮಲಗಿದ್ದ. ಆತನ ಹೆಂಡತಿ ಆತನನ್ನು ಹಿಡಿದು ಕುರಿಸಿದಳು. ನೆನ್ನೆ ಸ್ಟೆಶನಲ್ಲಿ ನೊಡಿದ್ದ ಮರೆಪ್ಪ ಇಗಾ ಹಣ್ಣು ಹಣ್ಣು ಗಾಯಗೊಂಡ ಮರೆಪ್ಪನಾಗಿದ್ದ. ಆತನ ಕಸಿವು ಎಲ್ಲಾ ಇಳಿದು ಹೊಗಿತ್ತು. ಶಕ್ತಿಯೆಲ್ಲ ಬತ್ತಿ ಹೊಗಿತ್ತು. ಬೆನ್ನ ಮೆಲೆ ಹೊದ್ದ ಜಮಖಾನಿ ಸರಿಸಿ ಬೆತ್ತಲ್ಲೆ ಬೆನ್ನು ತೊರಿಸಿದ. ಚರ್ಮ ಕಿತ್ತು ಬರುವ ಹಾಗೆ ಗಾಯ.
"ದೊಡ್ಡವರ ಎದುರು ಹಾಕೊತಿಯೊ ಎಷ್ಟು ಸೊಕ್ಕೊ ಸೂಳೆಮಗನೆ ನಿಂಗೆ, ಊರಲ್ಲಿ ಅವರು ಹೆಳಿದಂಗೆ ಬಿದ್ದರೆ ನಿನಗೆ ಈ ಗತಿ ಬರ್ತಿತ್ತಾ ಬೊಳಿಮಗನೆ. ಅವರೆಲ್ಲ ಹೆಳಿದಾರೆ ಅಂತಾ ನಾಳೆ ನಿನ್ನ ಬಿಡುಗಡೆ ಮಾಡ್ತಿನಿ ಅವರ ಪಾದದ ದೂಳಾಗಿ ಬಿದ್ದಿರು ಇಲ್ಲದಿದ್ದರೆ ನಿನಗೊಂದು ಗತಿ ಕಾಣಸ್ಬೆಕಾಗುತ್ತೆ." ಎಂದು ಹೇಳಿ ಸರಿಯಾಗಿ ಹೊಡೆದರು ಎಂದು ನೊವಿನಿಂದ ಹೇಳಿದ. ನಾನು ಮೂಕನಾದೆ ಸಂಪೂರ್ಣ ಮೂಕನಾದೆ....
ಸ್ವತಂತ್ರ ಸಿಕ್ಕ ದೇಶದಲ್ಲಿ ದುಡ್ಡಿದವನ ದಬ್ಭಾಳಿಕೆ.... ಅದಕ್ಕೆ ಅಲ್ಲವೆ ಆಗಲೆ ಭಗತಸಿಂಗ ಭವಿಷ್ಯ ನುಡಿದ್ದಿದ್ದು ಸ್ವತಂತ್ರ ಪೂರ್ವದಲ್ಲಿ ಬಿಳಿಯರು(ಬ್ರಿಟಿಷರು) ನಮ್ಮನ್ನಾಳುತ್ತಿದ್ದಾರೆ, ಸ್ವತಂತ್ರ ಸಿಕ್ಕಮೆಲೆ ನಮ್ಮವರೆ ನಮ್ಮನ್ನ ಆಳುತ್ತಾರೆ ಅಂತಾ... ಸ್ವತಂತ್ರ ಸಿಕ್ಕಿರೊದು ಹಣಬಲ, ತೊಳ್ಬಲ, ಅಧಿಕಾರ ಬಲವಿದ್ದವರಿಗೆ ಬಡವರಿಗೆ ಸ್ವತಂತ್ರದ ಪರಿಕಲ್ಪನೆಯೆ ಇಲ್ಲ.
ಅಂದಿನಿಂದ ಆ ಊರಲ್ಲಿ ಮರೆಪ್ಪನಿಗಾದ ಗತಿ ಇನ್ಯಾರಿಗೂ ಆಗದಿರಲೆಂದು ಎಲ್ಲರೂ ಆ ಮಹಾನುಭವರ ವಿರುದ್ಧವಾಗಿ ನಿಲ್ಲಲಿಲ್ಲಾ... ಅವರು ಹೆಳಿದ ಬಡ್ಡಿ, ಅವರು ಮಾಡಿದ ಮೊಸ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಊರu, ಶಾಂತತೆಯಿಂದ ಸಾಗತೊಡಗಿತು...


0 ಕಾಮೆಂಟ್‌ಗಳು