ಎಷ್ಟೆಲ್ಲಾ ಮೆರಿತಿದ್ದಿ, ಎಷ್ಟೆಲ್ಲಾ ಉರಿತಿದ್ದಿ.
ಬಂತ ನೊಡ ನಿನಗ ಲಗಾಮ ಹಾಕಲಿಕ್ಕೆ,
ಕಾಣದ ಕಲಿ ಪಾಠ ಕಲಿಸಲಿಕ್ಕೆ.
ಕಂಡ ಕಂಡಿದ್ದನ್ನು ನನ್ನದೆ ಎನ್ನುತ್ತಿದ್ದಿ,
ಎಲ್ಲಂದರಲ್ಲಿ ಹೇಸಿಗೆ ಮಾಡುತ್ತಿದ್ದಿ.
ಬಡವರ ಕಂಡರ ದೂರ ನಿಂತ ಮಾತಾಡುತ್ತಿದ್ದಿ,
ನಿನ್ನ ಕಂಡರೆ ದೂರ ನಿಲ್ಲುವಂಗ ಮಾಡಿಕೊಂಡಿ.
ನಿನ್ಪನ ಪಾಪದ ಕೊಡಾ ತುಂಬೈತಿ,
ಬಡವರ ನಿಸರ್ಗದ ಕಣ್ಣಿರು ಅದರೊಳಗೈತಿ.
ಬರಬೇಕಿತ್ತು ಸರಿಯಾದ ಸಮಯ,
ಬಂದಾದ ಈಗಾ ಉಣ್ಣಯ್ಯ.
ಬಂತೊ ಒಂದು ಮನಗಂಡ ಜಡ್ಡ,
ಮಾಡ್ತಾದ ನಿಂಗ ಕಟಗಿಯ ಕೊಡ್ಡ.
ಎಷ್ಟೆಲ್ಲಾ ಮೆರಿತಿದ್ದಿ, ಎಷ್ಟೆಲ್ಲಾ ಉರಿತಿದ್ದಿ.
ಬಂತ ನೊಡ ನಿನಗ ಲಗಾಮ ಹಾಕಲಿಕ್ಕೆ,
ಕಾಣದ ಕಲಿ ಪಾಠ ಕಲಿಸಲಿಕ್ಕೆ.
ರಾಜು ಪಾಟೀಲ (ಸಿಂದಗಿ)


0 ಕಾಮೆಂಟ್‌ಗಳು