Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಕೊಮು ಬೆಂಕಿ

 


ಊರಲ್ಲಿ ಎಲ್ಲವೂ ತಿಳಿಯಾದ ವಾತಾವರಣ. ಯಾರು ಯಾರಿಗೂ ಮಾತನಾಡದಂತ ಬಿಗುವಿನ ವಾತಾವರಣ. ಅದೆನೋ ಮಧ್ಯಾನ್ಹ ಬೆಳಂದೂರ ಶಾಮಣ್ಣ ಮತ್ತು ರಜಾಕರ ಓಣಿಯ ಇಮ್ತಿಯಾಜನ ಮಧ್ಯೆ ದೊಡ್ಡ ಗಲಾಟೆಯಂತೆ. ಅದು ಅವರ ಹಳೆಯ ಹಣದ ವಸೂಲಿಗಾಗಿ ಆದ ಗಲಾಟೆಯಂತೆ. "ನಿಂದೆನ್ ಹಣ ತಿಂದು ನಾನು ಗೊರಿ ಸೇರಲ್ಲ, ಸ್ವಲ್ಪ ಸಮಯ ಕೊಡು ಕೊಡ್ತೆನೆ" ಎಂದು ಇಮ್ತಿಯಾಜ ಅಂದ. "ಎಷ್ಟ ದಿನಾ ಅಂತಾ ಕಾಯಬೇಕೊ ಸುವ್ವರ್" ಅಂತಾ ಶಾಮಣ್ಣ ಅಂದ. ಎಲ್ಲಿತ್ತೊ ಸಿಟ್ಟು "ಹಲ್ಲು ಬಿಗಿಯಿಟ್ಟು ಮಾತಾಡು ಗಡವ" ಎಂದು ಇಮ್ತಿಯಾಜ ಶಾಮಣ್ಣನ ಮೇಲೆ ರೇಗಿದ. ಸಣಕಲು ಇಮ್ತಿಯಾಜನನ್ನು ದಷ್ಟಪುಷ್ಟವಿದ್ದ ಶಾಮಣ್ಣ ನೆಲಕ್ಕ ಹಾಕಿ ಸರಿಯಾಗಿ ಬಾರಿಸಿದ್ದ. ಎದ್ನೊ ಬಿದ್ನೊ ಎಂದು ಇಮ್ತಿಯಾಜ್ ಅವನ ಮನೆಯ ಕಡೆ ಓಡಿದ. 

ಶಾಮಣ್ಣ ಆ ಗಲಾಟೆ ಮುಗಿಸಿಕೊಂಡು ಬಂದು ಟೀ ಅಂಗಡಿಯ ಮುಂದೆ ಕುಂತು ಬಿಸಿ ಬಿಸಿ ಟೀ ಹಿರುತ್ತಾ ಕುಳಿತಿದ್ದ, ಅಷ್ಟರಲ್ಲೆ ದಬಾರ ಎಂದು ಬೆನ್ನಿಗೆ ಒಂದು ಜೋರಾದ ಪೆಟ್ಟು ಬಿತ್ತು. ನೋಡ ನೋಡುತ್ತಲೆ ಒಂದರ ಮೇಲೊಂದರಂತೆ ಹತ್ತಾರ ಪೆಟ್ಟುಗಳು ಶಾಮಣ್ಣನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು. ಇಮ್ತಿಯಾಜ ತನ್ನ ಏರಿಯಾದ ಜನರನ್ನ ಕರಕೊಂಡ ಬಂದು, ಶಾಮಣ್ಣನ್ನು ಚೆನ್ನಾಗಿ ಬಾರಿಸಿದ್ದ. ಅರೆಪ್ರಜ್ಞಾವಸ್ಥೆ ತಲುಪಿದ ಮೇಲೆ ಶಾಮಣ್ಣನನ್ನು ಬಿಟ್ಟು ಹೋಗಿದ್ದರು. 

ಇಗಾ ಇಮ್ತಿಯಾಜ ಮತ್ತು ಶಾಮಣ್ಣನ ವೈಯಕ್ತಿಕ ಜಗಳ ಇಡೀ ಊರಿನ ಜಗಳವಾಗಿತ್ತು. ಅದು ಕೋಮು ಗಲಭೆಯಾಗಿ ತಿರುವು ಪಡೆದುಕೊಂಡಿತ್ತು.  ಊರಿಗೆ ಊರೆ ಬಿಗುವಿನ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಹಿಂದೂವನ್ನು ಕಂಡರೆ ಮುಸ್ಲಿಂ, ಮುಸ್ಲಿಂನನ್ನು ಕಂಡರೆ ಹಿಂದೂ ದ್ವೇಷ ಕಾರುವಂತೆ ಆಗಿತ್ತು. 

ನಿನ್ನೆಯ ತನಕ ರಫೀಕ ಮತ್ತು ರಾಜು ಒಬ್ಬೊರನ್ನೊಬ್ಬರು ಬಿಟ್ಟಿರದ, ಅವರ ಮನೆಯ ಖೀರನ್ನು ಇವನು, ಇವನ ಮನೆಯ ಬಿರಿಯಾನಿಯನ್ನು ಅವನು ಅಣ್ಣತಮ್ಮಂದಿರಂತೆ ಸವಿಯುತ್ತಿದ್ದರು. ಇವತ್ತು ಒಬ್ಬೊರದೊಬ್ಬರು ರಕ್ತದ ರುಚಿ ಕಾಣಲು ತವಕಿಸುತ್ತಿದ್ದರು. ಊರ ತುಂಬಾ ಪೊಲಿಸರ ಗಸ್ತು. Sec 144 ಜಾರಿಯಂತೆ. ಮುಸ್ಲಿಂ ಸಂಘಟನೆಯ ಮುಖಂಡರು ಎಲ್ಲಾ ಮುಸ್ಲಿಂ ಯುವಕರನ್ನ ಕರೆದುಕೊಂಡ ಬಂದು ಸಭೆ ಮಾಡಿದರು. ನಾಳೆ ಉಗ್ರ ಹೋರಾಟ ಮಾಡಲು ಸರ್ಕಲ್‌ ಗೆ ಹಿಂದೂಗಳು ಬರ್ತಾರೆ. ನಾವೂ ಕಲ್ಲು ಬಡಿಗೆ ಮಾರಕಾಸ್ತ್ರಗಳಿಂದ ತಯಾರಾಗಿ ನುಗ್ಗೋಣ. ಅವರಿಗೆ ಒಂದು ಗತಿ ಕಾಣಿಸೊಣ. ಎಂದು ಮುಸ್ಲಿಂ ಮುಖಂಡ ಮೈಬು ತರುಣರೆಲ್ಲರನ್ನು ಹುರುತುಂಬಿಸಿ, ಅವರ ರಕ್ತ ಬಿಸಿಯಾಗುವಂತೆ, ಅವರನ್ನ ಧರ್ಮದ ಯೋಧರಂತೆ ತಯಾರು ಮಾಡುತ್ತಿದ್ದ. ಈ ಕಡೆ ಹಿಂದೂ ಸಂಘಟನೆಯವರು ನಾಳೆಯ ಹೋರಾಟದ ಬೈಠೆಕನ್ನು ಮಾಡುತ್ತಿದ್ದರು. ನಾಳೆ ನಾವೆಲ್ಲ ಕೇಸರಿ ಶಾಲಿನೊಂದಿಗೆ ಸರ್ಕಲಗೆ ಬರೋಣ ಜೈ ಶ್ರೀ ರಾಮ ಘೋಷಣೆಯೊಂದಿಗೆ ಶಾಮಣ್ಣನಿಗಾದ ಗಾಯಕ್ಕೆ ನ್ಯಾಯ ಒದಗಿಸೊಣ. ತಲವಾರಗಳನ್ನ ತಯಾರಿಯಲ್ಲಿ ಇಟಕೊಂಡಿರಿ, ಮುಸ್ಲಿಂ ಯಾರಾದರೂ ಕಂಡರೆ ಅವರನ್ನ ಕೊಚ್ಚಿ ಹಾಕೋಣ ಎಂದು ಹಿಂದೂ ಸಂಘಟನೆಯ ಮುಖಂಡ ರಮೇಶ ಉಗ್ರ ಭಾಷಣವನ್ನು ಮಾಡುತ್ತಿದ್ದ. ಮುಸ್ಲಿಂರು ಮೈಬುನನ್ನ ತಮ್ಮ ನಾಯಕ, ತಮ್ಮ ಹೀರೊ ಎಂದು ತಿಳಿದು ಅವನಿಗೆ ಜೈಕಾರ ಹಾಕುತ್ತಿದ್ದರೆ, ಈ ಕಡೆ ರಮೇಶನಿಗೆ ಹಿಂದೂ ಹುಡುಗರಿಂದ ಜೈಕಾರ. ಮಧ್ಯ ಪೊಲೀಸರ ಸೈರನ್ ಕೇಳಿದಾಗ ಎಲ್ಲವೂ ತಣ್ಣಗೆ. 

ಮರುದಿನ ಮಧ್ಯಾಹ್ನ 11.30 ಗಂಟೆಗೆ ಹನುಮಾನ ದೇವಸ್ಥಾನದಿಂದ ಜೈ ಶ್ರೀರಾಮ ಘೋಷಣೆಗಳೊಂದಿಗೆ ಸರ್ಕಲ್ ಕಡೆ ಹಿಂದೂ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ಹೊರಟಿತ್ತು. ಹೆಜ್ಜೆ ಹೆಜ್ಜೆಗೂ ಪೋಲಿಸರು,ಯುದ್ಧದ್ದ ವಾತಾವರಣ. ಹಿಂದೂ ಸಂಘಟನೆಯ ನೇತಾರ ದೊಡ್ಡ ಕೇಸರಿ ಶಾಲು, ನಾಮ ಮತ್ತು ಒಳ್ಳೆಯ ಕುರ್ತಾದೊಂದಿಗೆ ಹುರುಪಿನಿಂದ ಮುಂದಾಳತ್ವನ್ನು ವಹಿಸಿದ್ದ. ಅವರನ್ನ ಕಂಡು ಉಳಿದ ಹುಡುಗರು ಇನ್ನಷ್ಟು ಹುರುಪಿನಿಂದ ಘೋಷಣೆಗಳಿಗೆ ಧ್ವನಿಯಾಗುತ್ತಿದ್ದರು. ಸರ್ಕಲ ಸಮೀಪ ಮೆರವಣಿಗೆ ಬಂತು. ಸರ್ಕಲ ತುಂಬಾ ಪೊಲೀಸರ ಸರ್ಪಗಾವಲು. ಮಧ್ಯ ರಮೇಶ ಮೈಕಿನೊಂದಿಗೆ ನಿಂತು ತನ್ನ ಅತಿಥ್ಯ ಭಾಷಣವನ್ನು ಪ್ರಾರಂಭ ಮಾಡಿದ. ಅರ್ಧ ಗಂಟೆ ಹಿಂದುತ್ವ, ದೇಶ, ಧರ್ಮದ ಬಗ್ಗೆ ತಮಗೆ ತಿಳಿದ ಮತ್ತು ಇನ್ನೂಳಿದ ತನ್ನ ಲಾಭದ ಭಾಷಣಗಳನ್ನು ಮಾಡಿ ಯುವಕರಿಗೆ ಹುರಿದುಂಬಿಸಿದ. ಭಾಷಣ ಮುಗಿಯುವ ವೇಳೆ ಜೋರಾಗಿ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. 

ಎಲ್ಲಿಂದಲೊ ಒಂದು ಕಲ್ಲು ಬಂದು ಟಪ್ಪನೆ ಗುಂಪಿನಲ್ಲಿದ್ದ ಹುಡಗನ ತೆಲೆಗೆ ಸರಿಯಾಗಿ ಬಿತ್ತು. ಅಮ್ಮ ಎಂದು ಅರಿಚಿದ ತೆಲೆಯೆಲ್ಲ ರಕ್ತ. ಬಿಸಿ ಉಸಿರಿನಿಂದ ಹುಡುಗರು ಮುಚ್ಚಟ್ಟಿದ್ದ ಮಾರಕಾಸ್ತಗಳನ್ನು ಎಳೆದು ಕಲ್ಲು ಬಂದ ದಿಕ್ಕಿನತ್ತ ಓಡಿದರು. ಅಲ್ಲೊಂದು ದೊಡ್ಡ ಮುಸ್ಲಿಂ ಗುಂಪೆ ಜಮಾವಣೆ ಆಗಿತ್ತು. ಇವರನ್ನ ಕಂಡ ಮುಸ್ಲಿಂ ನಾಯಕ ಮೈಬು "ಮಾರೊ" ಎಂದು ಅರಚಿದ. ಅವರ ಹತ್ತಿರ ಇರುವ ಕಲ್ಲು ಮಾರಕಾಸ್ತಗಳನ್ನು ಎತ್ತಿ ಅವರು ಇವರ ಕಡೆ ನುಗ್ಗಿದ್ದರು. ನೂರಾರು ಸಂಖ್ಯೆಯಲ್ಲಿದ್ದ ಯುವಕರು ಬಡದಾಡಿದರು, ಚಾಕು ಇರಿಸಿಕೊಂಡರು, ತೆಲೆ ಓಡೆದುಕೊಂಡರು. ಪೋಲಿಸರು ಲಾಠಿ ಚಾರ್ಜ ಮತ್ತು ಅಶ್ರುವಾಯುವನ್ನು ಪ್ರಯೋಗಿಸಿ ಜನರನ್ನ ಚದುರಿಸಿದರು. ಗಾಯಗೊಂಡವರನ್ನ ಆಸ್ಪತ್ರೆಗೆ ರವಾನೆ ಮಾಡಿದರು. ಇದೆಲ್ಲದರ ಮಧ್ಯೆ ಒಂದು ಕಾಲದ ಅಣ್ಣತಮ್ಮಂದಿರಂತಿದ್ದ ರಾಜುವಿನ ಹೊಟ್ಟೆಗೆ ಚಾಕು ಇರಿದು ಹತ್ಯೆ ಮಾಡಿ ರಫೀಕ ರಕ್ತಸಿಕ್ತವಾಗಿ ನಿಂತಿದ್ದ. ಸಮೀಪ ಬಂದ ಇನ್ಸ್‌ಪೆಕ್ಟರ್ ತಕ್ಷಣ ರಫೀಕನನ್ನು ಅರೆಸ್ಟ ಮಾಡಿ ಕರಕೊಂಡ ಹೋದರು. ರಾಜು ಸತ್ತು ಹೋಗಿದ್ದ......

ರಫೀಕ ಜೈಲಿಗೆ ಹೋಗಿದ್ದನ್ನ ಚಿಂತಿಸಿ ಚಿಂತಿಸಿ ಅವನ ಅಮ್ಮಿಜಾನ ಬಡವಾಗಿದ್ದಳು. ಆತನಿಗೆ ಬೇಲ್ ಕೊಡಿಸಲು ಆತನ ಪರವಾಗಿ ವಾದಿಸಲು ಒಬ್ಬ ವಕೀಲನನ್ನು ಇಡದಷ್ಟ ಬಡವಳಿದ್ದಳು. ತುಂಬಾ ಅಸ್ವಸ್ಥಳಾದ ಆಕೆಯನ್ನು ತಂಗಿಯಂತೆ ಕಾಣುತ್ತಿದ್ದ ಪಕ್ಕದ ಮನೆ ಶಾರದಮ್ಮನೆ ಒಂದೊಂದು ಸಲ ಹೋಗಿ ಸಮಾಧಾನ ಮಾಡಿ ಬರುತ್ತಿದ್ದಳು. ಶಾರದಮ್ಮನು ಮಗನ ಕಳಕೊಂಡ ದುಖದಲ್ಲಿ ಸೊರಗಿದ್ದಳು. ಆದರೆ ಕೆಟ್ಟ ಘಳಿಗೆ ಮಕ್ಕಳ ಕೈಯಲ್ಲಿ ಹೀಗೆ ಮಾಡಿಸಿತ್ತು ಎಂದು ಆಕೆಯೆ ಸಮಾಧಾನ ಮಾಡುತ್ತಿದ್ದಳು. 

ಕೊನೆಗೆ 7 ವರ್ಷ ಜೈಲುವಾಸ ಮುಗಿಸಿ ಊರಿಗೆ ಬಂದಿದ್ದ ರಫೀಕ. ಅದು ಚುನಾವಣೆಯ ಕಾಲ ಎಲ್ಲೆಲ್ಲೂ ಪ್ರಚಾರ. ತನ್ನೂರಿಗೆ ನಿಂತಿದ್ದವನು ಅದೆ ಒಂದು ಕಾಲದಲ್ಲಿ ನನ್ನನ್ನು ದಂಗೆಗೆ ಪ್ರೊತ್ಸಾಹಿಸಿದ ಮೈಬು, ಈಗ ಲಿಡರ್ ಮೈಬು. ಅವನಿಗೆ ಟಿಕೆಟ್ ಕೊಟ್ಟಿದ್ದು ಅವನ ಪಕ್ಷದ ಮಂತ್ರಿ ರಮೇಶ. ಹಿಂದೆ ಹಿಂದೂಗಳ ಸಂಘಟನೆಯ ಮುಖಂಡತ್ವ ವಹಿಸಿ ದಂಗೆಗೆ ಕಾರಣಿಕೃತರಾದ ಇವರು ಈಗ ಒಂದೆ ಪಕ್ಷದ ಒಬ್ಬೊರಿಗೊಬ್ಬರು ಗೆಲ್ಲಿಸುವ ಜವಾಬ್ದಾರಿ ಹೊತ್ತ ನಾಯಕರು. ಗೋಡೆಯ ಮೇಲೆ ದೊಡ್ಡ ದೊಡ್ಡ ಭಿತ್ತಿ ಪತ್ರವನ್ನು ಅಂಟಿಸಲಾಗಿತ್ತು. ಅದರಲ್ಲಿ ರಮೇಶ ಮತ್ತು ಲೀಡರ್ ಮೈಬುಬನ ದೊಡ್ಡ ದೊಡ್ಡ ಪೋಟೊಗಳು. ಗಲಾಟೆಯಾಗಿ ನನ್ನ ಇನ್ಸ್ಪೆಕ್ಟರ್ ಕರೆದುಕೊಂಡು ಹೋಗುವಾಗ ಈ ರಮೇಶ ಹುಡಗರನ್ನೆಲ್ಲ ಯುದ್ದಕ್ಕೆ ಕಳಿಸಿ ಇವನು ಮಾತ್ರ ಪೋಲಿಸ್ ಜಿಪಿನಲ್ಲಿ ಅವಿತು ಕುಳಿತಿದ್ದ, ಆ ಮೈಬು ಒಂದು ಸಂಧಿಯಲ್ಲಿ ಅವಿತು ಕೊಂಡು ಸಿಗರೆಟು ಸೇದುತಿದ್ದ. ಗಲಾಟೆಯಲ್ಲಿ ಇವರಿಗೆ ಒಂದು ಹನಿಯೂ ಗಾಯವಾಗಲಿಲ್ಲಾ, ಒಂದಿಷ್ಟು ಲಾಸ ಆಗಲಿಲ್ಲಾ. ಬಡದಾಡಿಕೊಂಡವರು ಬಡವರ ಮಕ್ಕಳು, ರೈತರ ಮಕ್ಕಳು ಅವರ ಬಡಿದಾಟದ ಕಾವಿನಲ್ಲಿ ಇವರು ಮೈ ಕಾಸಿಕೊಂಡರು.... ಅದರ ಲಾಭ ಪಡೆದು ಶಾಸಕ ಮಂತ್ರಿಗಳಾದರೂ....

ಅವರವರ ಲಾಭಕ್ಕೆ ಯಾರದೊ ಮಕ್ಕಳ ಬಾಳನ್ನು ಹಾಳು ಮಾಡಿದ ಇಂತವರ ಕಂಡು ರಫೀಕನಿಗೆ ಹಿಡಿಸದಷ್ಟು ವಾಕರಿಕೆ ಬಂದು "ಕ್ಯಾಕ್ ಥೂ..." ಎಂದು ಲೀಡರ್ ಮೈಬು ಮತ್ತು ಮಂತ್ರಿ ರಮೇಶನ ಮೇಲೆ ಊಗುಳಿ ಮನೆಗೆ ಹೋದ. 



                                    ರಾಜು ಪಾಟೀಲ (ಸಿಂದಗಿ)

                                         9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು