Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಅಪ್ಪಾ ನ ಕನಸು

 


        ಕಾಲೇಜಿನ ಕೊನೆಯ ದಿನ. ಅಂದೆ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗೊಲ್ಡ ಮೆಡಿಲಿಸ್ಟಗಳಿಗೆ ಸನ್ಮಾನ ಸಮಾರಂಭ. ಅದರಲ್ಲಿ ನನ್ನ ಹೆಸರು ಕೂಡಾ ಇತ್ತು. ಇಡೀ ಕಾಲೇಜಿಗೆ ಕಾಲೇಜ್ ಮದುವೆಯ ಮಂಟಪದಂತೆ ಶೃಂಗಾರಗೊಂಡಿತ್ತು. ಎಲ್ಲಾ ನಮ್ಮ ಕ್ಲಾಸ್ ಮೆಂಟ್ ಹುಡಗಿಯರು ಸಿರೆಯಲ್ಲಿ ಅಂದವಾಗಿ ಭಾರತದ ಸಂಸ್ಕೃತಿಯನ್ನು ಎತ್ತಿಹಿಡಯುವ ನಾರಿಯರಂತೆ ಕಂಗೊಳಿಸುತ್ತಿದ್ದರು. ತರಹ ತರಹದ ಸಿರೆಗಳಲ್ಲಿ ತರಹ ತರಹದ ವೈವಿಧ್ಯತೆ ಕಂಡು ಬರುತ್ತಿದ್ದವು. ಪ್ರತಿಯೊಂದ ಉಡುಗೆಗಳು ಅವರ ಅವರ ಪ್ರದೇಶದ ಕುರಿತು ತಿಳಿಸುವಂತಿದ್ದವು. ನಮ್ಮ ಕಡೆಯ ಇಲಕಲ್ ಸಿರೆಯಂತು ಎಲ್ಲಾ ಸಿರೆಗಳಿಗಳ ರಾಣಿಯಂತೆ ಕಂಗೊಳಿಸುತಿದ್ದರು. ನಾನಂತು ಅಚ್ಚ ಬಿಳಿಯ ಪೈಜಾಮ ಶರ್ಟ ಪ್ಯಾಂಟನಲ್ಲಿ ಆ ಕಾರ್ಯಕ್ರಮಕ್ಕೆ ಹೊಗಿದ್ದೆ.

ಎಲ್ಲರೂ ತಮ್ಮ ತಮ್ಮ ಪಾಲಕರನ್ನ ಕರೆದುಕೊಂಡ ಬಂದಿದ್ದರು. ನಾನು ಕೂಡಾ ನಮ್ಮಪ್ಪನ ಕರಕೊಂಡ ಹೊಗಿದ್ದೆ. ರಿಟೈಡ ಪೊಸ್ಟ ಮ್ಯಾನ ನಮ್ಮಪ್ಪ. ಸ್ವಲ್ಪ ಸಂಕೋಚ ಅವರಿಗೆ. ತನ್ನ ಮಗ ಇಂತಹ ಶಾಲೆಯಲ್ಲಿ ಕಲಿಯಬಹುದು ! ಆದರೆ ತಾನು ಇಂತಹ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಹತೆ ಇಲ್ಲದವನು ಎಂಬ ಸಂಕೋಚ, ದಿಗುಲು ನಮ್ಮಪ್ಪನಿಗೆ. ಅದು ಕೂಡಾ ವಾಸ್ತವಿಕ ಸತ್ಯವೆ. ಅಲ್ಲಿ ಕಲಿಯುವ ಮಕ್ಕಳ ಪಾಲಕರು ದೊಡ್ಡ ದೊಡ್ಡ ಗಣ್ಯ ಮಾನ್ಯರು. ಡಾಕ್ಟರ್, ಇಂಜನಿಯರ, ವಕೀಲರು, ಬ್ಯುಸಿನೆಸ್ ಮ್ಯಾನ್ ಗಳು, ರಾಜಕಾರಣಿಗಳು ಮತ್ತು ದೊಡ್ಡ ದೊಡ್ಡ ಆಫಿಸರಗಳು.  ಅವರ ಮಧ್ಯ ನಮ್ಮಪ್ಪ ಯಾವ ಲೆಕ್ಕ. ಆ ಲೆಕ್ಕದ ಪ್ರಕಾರ ನಮ್ಮಪ್ಪ ಕೂಡಾ ಯೊಚಿಸಿದ್ದು ತಪ್ಪಿಲ್ಲ. ಆದರೆ ಮಗನ ಸನ್ಮಾನ ನೊಡೊಕ್ಕಾದರು ಇರಬೇಕು ಎಂದು ನಾನೆ ಹಠಹಿಡಿದು ಕರಕೊಂಡ ಬಂದಿದ್ದೆ....

"ನಮಸ್ಕಾರ ಸರ್" ಎಂದು ನಮ್ಮಪ್ಪ ಒಬ್ಬರ ಕಂಡು ಗೌರವದಿಂದ ತೆಲೆ ಬಾಗಿ ಮಾತಾಡಿಸಿದರು. "ಅರೆ ನಿನೆನ ಇಲ್ಲಿ ಶಂಕ್ರಪ್ಪ" ಎಂದು ಆ ವ್ಯಕ್ತಿ ಇವರಿಗೆ ಪ್ರಶ್ನಿಸಿದ. ನನ್ನ ಕಡೆ ಮುಖ ಮಾಡಿ "ಇವನು ನನ್ನ ಮಗ ಸರ್. ಇವನು ಇಲ್ಲಿಯೆ ಕಲಿತಿದಾನೆ" ಎಂದರು. ನಾನು ಗೌರವವಾಗಿ ಅವರನ್ನ ನಮಸ್ಕಾರ ಮಾಡಿದೆ. ಅಷ್ಟೊತ್ತಿಗೆ ಅವರ ಮಗಳು ಓಡೊಡಿ ಬಂದು ಅವರ ಕೈ ಹಿಡಿದು ಬನ್ನಿ ಡ್ಯಾಡ ಅಂದಳು. ಅರೆ ನಮ್ಮ ಅರುಣಾಳ ಅಪ್ಪ ಇವರು ಎಂದು ನಾನು ಅರ್ಥಮಾಡಿಕೊಂಡೆ. "ಶಂಕ್ರಣ್ಣ ಇವಳೆ ನನ್ನ ಮಗಳು, ಇಕೆಯೂ ಕೂಡಾ ಇಲ್ಲಿಯೆ ಕಲಿತಿದಾಳೆ." ಎಂದು ನಮ್ಮಪ್ಪನಿಗೆ ಪರಿಚಯಿಸಿದರು. ಆಕೆ ಮುಂದಿನ ಮಾತು ಆಡೊಕು ಬಿಡದೆ ಅವರಪ್ಪನ ಕರೆದುಕೊಂಡ ಅಲ್ಲಿಂದ ಹೊರಟು ಹೊದಳು.

ಆಕೆಗೆ ಮೊದಲಿನಿಂದಲು ಅಷ್ಟೆ. ಬಡವರು, ಹಳ್ಳಿಗರು ಕಂಡರೆ ಆಗ್ತಿರಲಿಲ್ಲಾ. ಅವರ ಕರ್ಮ ಅದಕ್ಕೆ ಬಡವರಾಗಿರತಾರೆ ಎಂಬ ಹುಮ್ಮು ಆಕೆಗೆ. ನನ್ನ ಕ್ಲಾಸಮೆಟ, ಆದರೆ ಎಂದಿಗೂ ಆಕೆ ನನ್ನ ಜೋತೆ ಮಾತನಾಡಿದವಳಲ್ಲ. ನಾನು ಕೂಡಾ ಅಷ್ಟೆ, ಆಕೆಯ ಸಮೀಪ ಕೂಡಾ ಹೊದವನಲ್ಲ. ಆದರೆ ನಮ್ಮಪ್ಪ ಕೆಲಸ ಮಾಡುವ ಕಛೇರಿಯಲ್ಲಿ ಅವರಪ್ಪ ಬಾಸ ಆಗಿದ್ದವರು. ಲಕ್ಷ ಲಕ್ಷ ಸಂಬಳದ ವ್ಯಕ್ತಿ. ಸಿಕ್ಕಾಪಟ್ಟೆ ಆಸ್ತಿ ಹಾಗಾಗಿ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮಗಳನ್ನ ಸೇರಿಸಿದ್ದರು. ನಾನು ಚನ್ನಾಗಿ ಕಲಿತು ಗೌರ್ಮೆಂಟ ಸಿಟ ತಗೆದುಕೊಂಡು ಮತ್ತು ಖರ್ಚಿಗಂತ ನಮ್ಮಪ್ಪ ಒಂದಿಷ್ಟು ಸಾಲ ಸೋಲ ಮಾಡಿ ನನ್ನ ಈ ಕಾಲೇಜಿನಲ್ಲಿ  ಕಲಿಸಲು ಹೈರಾಣಾಗಿದ್ದ....

ಯಾರೊ ಬೆನ್ನಿಗೆ ಬಡಿದಂಗಾತು. ಹಿಂತುರುಗಿ ನೋಡಿದೆ ನನ್ನ ಮಿತ್ರ ನಿಂತಿದ್ದ. ಆ ಕಾಲೇಜಿನಲ್ಲಿ ಪರಿಚಯ ಆದರೂ ಕೂಡಾ ಸುಮಾರು ವರ್ಷದ ಗೆಳೆಯರಂತೆ ಆಗಿದ್ದ ಮಿತ್ರ ಮಿಥುನ. "ಏ ಮಿಥುನ್, ಹಿ ಇಸ್ ಮೈ ಫಾದರ. ಅಪ್ಪ ಇವನು ನನ್ನ ಆಪ್ತ ಸ್ನೇಹಿತ ಮಿಥುನ," ಎಂದು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಟ್ಟೆ. ಅಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭದ ಕುರಿತು ಸೂಚನೆಯನ್ನು ನಿರೂಪಕರು ನೀಡಿದರು.

ಮೆಲ್ಲಗೆ ಅಪ್ಪನ ಕೈ ಹಿಡಿದು ಕಾರ್ಯಕ್ರಮದ ಹಾಲ್ ಗೆ ಕರಕೊಂಡ ಹೊಗಿ ಅವರನ್ನ ಕುರಿಸಿ ನಾನು ಪಕ್ಕದಲ್ಲೆ ಕುಳಿತೆ ನನ್ನ ಪಕ್ಕದಲ್ಲಿ ಮಿಥುನ ಕುಳಿತಿದ್ದ.... ಮಿಥುನ ಬಿಹಾರದವನು ಹಾಗಾಗಿ ಅವನ ಪಾಲಕರು ದಾರಿ ದೂರ ಹಾಗಾಗಿ ಯಾರೂ ಬಂದಿರಲಿಲ್ಲಾ... 

ಕಾರ್ಯಕ್ರಮ ಉದ್ಘಾಟನೆ, ಮುಖ್ಯ ಅತಿಥಿಗಳ ಪರಿಚಯ ಅವರ ಭಾಷಣ ಎಲ್ಲವೂ ಸರಾಗವಾಗಿ ನಡೆಯಿತು. ಮದ್ಯಾಹ್ನ ಉಟಕ್ಕಾಗಿ ಕಾರ್ಯಕ್ರಮ ಮುಂದುಡಲಾಯಿತು. ಎಲ್ಲರೂ ಸೇರಿ ಊಟದ ಹಾಲ್ ಗೆ ಬಂದ್ವಿ. ನಮ್ಮಪ್ಪ ಅವರ ಬಾಸನ್ನೆ ಹುಡುಕುತ್ತಿದ್ದರು. ಅವರು ಒಂದು ಗುಂಪಿನಲ್ಲಿ ಸೇರಿಕೊಂಡಿದ್ದರು. ಇವರು ಅಲ್ಲಿಗೆ ಹೋಗಿ ಅವರ ಜೋತೆ ಮಾತಾನಾಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರ ಮಗಳು ಅರುಣಾ ನಮ್ಮಪ್ಪನನ್ನ ತಡೆದು "ಎನ ಕೆಲಸ ನಮ್ಮಪ್ಪನ ಹತ್ತಿರ ? ನಿಮ್ಮ ಯೋಗ್ಯತೆಗೆ ತಕ್ಕಂತೆ ನಿಮ್ಮ ಸಹವಾಸ ಇರಬೇಕು. ನೀವೆಲ್ಲೀ ನಮ್ಮಪ್ಪ ಎಲ್ಲಿ ?" ಎಂದು ಸ್ವಲ್ಪ ಖಾರವಾಗೆ ಪ್ರತಿಕ್ರಿಯೆ ನೀಡಿದಳು. ಅವರಪ್ಪ ಆಕೆಯನ್ನ ತಡೆಯಲು ಬಂದರು ಆಕೆ ಅವರನ್ನೆ "ಡ್ಯಾಡ ಸುಮ್ನಿರಿ ಇದು ನನ್ನ ರೆಪಿಟೆಶನ್ ವಿಷಯ, ನಿವೂ ಹೀಗೆ ಕಂಡಕಂಡವರ, ನಿರ್ಗತಿಕರ ಜೋತೆ ಮಾತಾಡಿದರೆ ನಮ್ಮ ಪ್ರೆಂಡ್ಸಲ್ಲಿ ನನಗೆ ಗೌರವ ಇರಲ್ಲ ಎಂದಳು".

ಅಪ್ಪಾ ಎನೊ‌ ದೊಡ್ಡ ತಪ್ಪು ಮಾಡಿದವರಂತೆ ಅವಕ್ಕಾದರೂ. ನಾನು ಅಪ್ಪನನ್ನ ಅಲ್ಲಿಂದ ದೂರ ಕರೆದುಕೊಂಡ ಹೊಗಲು ಪ್ರಯತ್ನಿಸಿದೆ. ಅಷ್ಟರಲ್ಲಿ ಮಿಥುನ ಬಂದು ಆಕೆಯನ್ನ ತರಾಟೆಗೆ ತೆಗೆದುಕೊಂಡು " ರಿ‌ ಮೇಡಂ ಅರುಣಾ ಇಷ್ಟೊಂದು ಸೊಕ್ಕು ಒಳ್ಳೆಯದಲ್ಲಾ, ನಿನ್ನ ಶ್ರೀಮಂತಿಕೆ ನಿನ್ನ ಮನೆಯಲ್ಲಿ ಇಟ್ಟುಕೊ ಇಲ್ಲಿ ನಿನ್ನ ದರ್ಪ ತೊರಿಸೊಕ ಬರಬೇಡಾ. ಹೊಟ್ಟೆಗೆ ನಿನೆನ ಬಂಗಾರ, ದುಡ್ಡು ತಿನ್ನಲ್ಲಾ ಅನ್ನವನ್ನೆ ತಿನ್ನೊದು ಅದು ಇಂತಹ ರೈತಾಪಿ ವರ್ಗ ಬೆಳೆದರೆ ಮಾತ್ರ. ನಿಮ್ಮಪ್ಪ ತಂದಿರೊ ದುಡ್ಡಿನಿಂದ ಹೊಟ್ಟೆ ತುಂಬಲ್ಲ. ನಿನ್ನ ಸೊಕ್ಕು ಕಡಿಮೆ ಮಾಡಿಕೊ ಎಂದ." ಅಷ್ಟರಲ್ಲಿ ಅವರಪ್ಪನಿಗೆ ಅವಮಾನ ಆದಂತಾಗಿ ತುಂಬಾ ಸಿಟ್ಟಿನಿಂದ "ಏನೋ ರಾಸ್ಕಲ ಎನ ಮಾತಾಡ್ತಿಯಾ" ಎಂದು ಮಿಥುನ್ ಎದೆಯ ಮೇಲಿನ ಶರ್ಟ ಹಿಡಿದರು. "ಅಂಕಲ್ ನಿವೂ ವಯಸ್ಸಿನಲ್ಲಿ ಹಿರಿಯರು. ನಿಮ್ಮ ಮಗಳಿಗೆ ಬುದ್ದಿ ಹೆಳೊ ಬದಲು ನನಗೆ ಹೆಳ್ತಿದಿರಾ. ಇರಲಿ ಅದು ನಿಮ್ಮ ಯೋಗ್ಯತೆ ಬಗ್ಗೆ ತಿಳಿಸುತ್ತೆ. ಸರಳವಾಗಿ ನನ್ನ ಶರ್ಟಮೇಲಿನ ಕೈ ಬಿಟ್ಟರೆ ನಿಮಗೆ ಒಳ್ಳೆಯದು ಇಲ್ಲಾ ನಾನು ಇದಕ್ಕೆ ಪ್ರತಿಕ್ರಿಯೆ ನೀಡಿದರೆ ಇಷ್ಟು ಜನರ ಮಧ್ಯ ನಿಮ್ಮ ಮಾರ್ಯಾದೆ ಎನಾಗುತ್ತೆ ಯೋಚಿಸಿ" ಎಂದು ಅವರಿಗೆ ಮಾತಿನಲ್ಲೆ ಹೆದರಿಸಿದ. ಅವರಪ್ಪ ಒಮ್ಮೆ ಸುತ್ತಲೂ ತಿರುಗಿ ಎಲ್ಲರೂ ತಮ್ಮ ಕಡೆನೆ ಗಮನಿಸಿತ್ತಿರುವದು ಕಂಡು ನಿಧಾನವಾಗಿ ಹಿಡಿದ ಶರ್ಟನ್ನು ಬಿಟ್ಟರು. ಅಲ್ಲಿಂದ ತಂದೆ ಮಗಳು ಜಾಗ ಖಾಲಿ ಮಾಡಿದರು. ಅಪ್ಪ ಅಸಹಾಯಕನಂತೆ ಕೈ ಮುಗಿದು ನಿಂತಿದ್ದರು. ಯಾಕೊ ನನಗೆ ಬಡವನಾಗಿರೊದು ಈ ದೇಶದಲ್ಲಿ ದೊಡ್ಡ ಅಪರಾಧ ಎಂಬಂತೆ ಕರುಳು ಹಿಂಡಿದಂತಾ ಅನುಭವ.

ಅಪ್ಪನಿಗೆ ಮತ್ತು ನನಗೆ ಸಮಾಧಾನ ಮಾಡಿ ಮಿಥುನ ಊಟ ಮುಗಿಸಿಕೊಂಡು ಮುಂದಿನ ಹಂತದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ. ನಮ್ಮ ನಮ್ಮ ಆಸನಕ್ಕೆ ಹೊಗಿ ಕುಳಿತೆವೂ. 

ಸದ್ಯ ಕಾರ್ಯಕ್ರಮದ ಮುಖ್ಯ ಘಟ್ಟ. ಗೊಲ್ಡ ಮೆಡಲಿಸ್ಟಗಳಿಗೆ ಸನ್ಮಾನ. ಮಿಥುನ ನನ್ನ ಹೆಗಲ ಮೇಲೆ ಕೈ ಹಾಕಿ "ಮಗಾ ನಿ ಏನೆಂಬುದ ಇಗಾ ತಿಳಿಯುತ್ತೆ " ಎಂದ. ನಮ್ಮ ಕುಲಪತಿಗಳು ವೇದಿಕೆಯ ಮೈಕ ಮುಂದೆ ಬಂದು "ಇಗಾ ನಮ್ಮ ಕಾಲೇಜಿನ ವಿಧ್ಯಾರ್ಥಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ನಮ್ಮ ಕಾಲೇಜಿಗೆ ಮತ್ತು ನಮ್ಮ ನಾಡಿಗೆ ಹೆಸರನ್ನು ತಂದು ಕೊಟ್ಟಿದ್ದಾರೆ. ಅವರು ನಮ್ಮ ಕಾಲೇಜಿನ ಮತ್ತು ನನ್ನ ವಿಧ್ಯಾರ್ಥಿ ಎಂದು ಹೇಳಲು ಕೂಡಾ ನನಗೆ ಅತೀವ ಸಂತೋಷ ಆಗುತ್ತಿದೆ. ಅವನು ಒಂದಲ್ಲ ಒಟ್ಟು ಎಂಟು ಗೊಲ್ಡ ಮೆಡೆಲಗಳನ್ನ ಪಡೆದು ಐತಿಹಾಸಿಕ ದಾಖಲೆಯನ್ನ ಮಾಡಿದ್ದಾನೆ. ಅವರನ್ನ ನಮ್ಮ ಮುಖ್ಯ ಅತಿಥಿಗಳು ಸನ್ಮಾನಿಸಿ ಬಂಗಾರದ ಪದಕವನ್ನು ನೀಡಬೇಕು ಎಂದು ನಾನು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಆ ವಿಧ್ಯಾರ್ಥಿ ಮತ್ಯಾರು ಅಲ್ಲ ನಮ್ಮ ಪೊಸ್ಟ ಮ್ಯಾನ ಶಂಕ್ರಣ್ಣನವರ ಮಗ ಮಿ.ಸುಹಾಸ್" ಇಡೀ ಸಂಭಾಗಂಣವೇ ಆ ಸುಹಾಸ ಸಲುವಾಗಿ ಹುಡುಕಾಡುತಿತ್ತು. ಅಷ್ಟರಲ್ಲಿ ಪಕ್ಕದಲ್ಲಿದ್ದ ಮಿಥುನ ನನ್ನ ಬೆನ್ನುಚಪ್ಪರಿಸಿ ಹೋಗಲು ಪ್ರೇರಪಿಸಿದ. ನಿಧನಿಧಾನವಾಗಿ ನಾನು ಎದ್ದು ನಿಂತೆ. ಚಪ್ಪಾಳೆಗಳ ಸುರಿಮಳೆ.....

ವೇದಿಕೆಯ ಕಡೆ ನಡೆಯ ತೊಡಗಿದೆ. "ನಮ್ಮ ಪೊಸ್ಟಮನ್ ಶಂಕ್ರಣ್ಣ ಅವರ ಮಗ ಮಿ.ಸುಹಾಸ್" ಎಂತಹ ಮಾತು ! ಪದೆ ಪದೆ ಅದೆ ಕಿವಿಯಲ್ಲಿ ಗುಣಗುತ್ತಾ ಇತ್ತು. ಆ ಮಾತು ನನಗೆ ಅತೀವ ಆನಂದವನ್ನು ನೀಡಿತು. ಮುಖ್ಯ ಅತಿಥಿಗಳು ನನ್ನ ಸನ್ಮಾನ ಮಾಡಿದರು. ನಾನು ಕುಳಿತಲ್ಲಿಂದಲೆ ಅಪ್ಪನ ಕಡೆ ನೊಡುತ್ತಿದ್ದೆ, ಅವರು ಹೆಮ್ಮೆಯಿಂದ ಪ್ರತಿಯೊಬ್ಬರ ಚಪ್ಪಾಳೆಗೆ ಕಿವಿಯಾಗಿದ್ದರು. ಕೊನೆಗೆ ನನಗೆ ಮಾತನಾಡಲು ಅವಕಾಶ ಕೊಟ್ಟರು. ಎಂದಿಗೂ ಕೂಡಾ ಅಷ್ಟೊಂದ ಜನರ ಮುಂದೆ ಮಾತನಾಡಿದವನಲ್ಲ, ಭಾಷಣದ ಸಂಪ್ರದಾಯ ಗೊತ್ತಿಲ್ಲ. ಅವತ್ತು ಮಾತನಾಡೊಕೆ ಇದ್ದ ಒಂದೆ ಒಂದು ವಿಷಯ ಅಪ್ಪ...

ಮೈಕ ಹತ್ತೀರ ಹೊದ ನಾನು ನೇರವಾಗಿ ಅಪ್ಪನ ಕಡೆ ದೃಷ್ಟಿಇಟ್ಟು "ಅಪ್ಪಾ ಐ ಲವ್ ಯು, ಇವತ್ತಿನ ಗೌರವ ತಮ್ಮ ಭಿಕ್ಷೆ ಅಪ್ಪಾ ; ಇವತ್ತಿನ ಈ ಪದಕಕ್ಕೆಲ್ಲಾ ತಾವೂ ಹಕ್ಕುದಾರರು ಅಪ್ಪಾ" ಇಡೀ ಸಭಾಂಗಣ ಮತ್ತೊಮ್ಮೆ ಕರತಾಡನ... ತುಂಬಾ ಭಾವುಕನಾಗಿದ್ದೆ ಅವತ್ತು ಅಪ್ಪ ದೇವರಂತೆ ಕಾಣುತ್ತಿದ್ದರು, ಅವತ್ತು ಅಪ್ಪ ಮಗುವಿನಂತೆ ಕಾಣುತ್ತಿದ್ದರು, ಅವತ್ತು ಅಪ್ಪ ಗಾಡಫಾದರ ಆಗಿದ್ರು... ಮತ್ತೆ ಮೈಕಗೆ ದ್ವನಿಯಾದೆ.

"ಅಮ್ಮನ ಮುಖ ಕಂಡಿಲ್ಲ, ಹೆತ್ತು ತೀರಿಕೊಂಡಳು. ನಿವೂ ತೊಡೆಯ ಮೇಲೆ ಹೊತ್ತು ಸಾಕಿದಿರಿ, ಆಕಳ ಹಾಲು ತಂದು ಹತ್ತಿಯಿಂದ ಹೊಟ್ಟೆಗೆ ಬಿಟ್ಟು ಅಮ್ಮನ ಎದೆಹಾಲಿನ ಕೊರಗನ್ನು ನಿಗಿಸಿದಿರಿ, ಮನೆಯ ಕೆಲಸವೆಲ್ಲಾ ಮಾಡಿ ಒಂದು ಕೊಂಕಳಲ್ಲಿ ಪೊಸ್ಟನ ಪತ್ರಗಳ ಜೋಳಿಗೆ, ಇನ್ನೊಂದ ಕೊಂಕಳಲ್ಲಿ ನಾನಿದ್ದ ಜೋಳಿಗೆ. ಬಿಸಲಲ್ಲಿ ಸೈಕಲ ತುಳಿದು ಮನೆ ಮನೆಗೆ ಪತ್ರಗಳ ತಲುಪಿಸುತ್ತಿದ್ದಿರಿ, ಹಸಿವಿನಿಂದ ನಾ ಅತ್ತರ ಸೈಕಲ್ ಸ್ಟ್ಯಾಂಡ್ ಹಾಕಿ ಮರದ ನೆರಳಲ್ಲಿ ಮತ್ತೆ ಹಾಲುಣಿಸಿ ಅದೇ ಜೋಳಿಗೆಯಲ್ಲಿ ಮಲಗಿಸುತ್ತಿದ್ದಿರಿ. ಜೋಳಿಗೆಯಲ್ಲೆ ಹೊಲಸನ್ನು ಮಾಡಿ ತಮ್ಮ ಶರ್ಟಗೆ ಹತ್ತಿದ್ದಾಗ ಅದನ್ನ ಸಹಿಸಿಕೊಂಡ ನನ್ನ ಶುಚಿಗೊಳಿಸಿದಿರಿ. ಕೆಲಸದ ಒತ್ತಡದಲ್ಲಿ ನನ್ನ ಜೋಳಿಗೆಯಲ್ಲಿ ಪತ್ರಗಳು ಹೊಗುತಿದವು, ಪತ್ರದ ಜೋಳಿಗೆಯಲ್ಲಿ ನಾನು. ಆದರೆ ಮತ್ತೆ ಸುಧಾರಿಸಿಕೊಂಡು ಸರಿಪಡಿಸುತ್ತಿದ್ದರಿ." ಯಾಕೋ ಕಣ್ಣಿರು ತಡೆಯೋಕ ಆಗಲಿಲ್ಲಾ ಗಂಟಲು ಕಟ್ಟಿದಂಗ ಆತು, ಮಾತು ಬರಲಿಲ್ಲಾ ಕಣ್ಣಲ್ಲಿ ಒಂದೆರಡು ನೀರು ಜಾರಿದವು... ಕ್ಷಣಕಾಲ ಮೌನನಾದೆ. ಕುಲಪತಿಗಳು ನೀರು ತಂದು ಬೆನ್ನ ಸವರಿದರು...

ಮತ್ತೆ ಮಾತನಾಡಿದೆ "ಮಗುವನ್ನ ಚೆನ್ನಾಗಿ ನೊಡಿಕೊಳ್ಳಲ್ಲಾ ಮಲತಾಯಿ. ಎಂದು ಮದುವೆ ಆಗದೆನೆ ಹಾಗೆ ಉಳಿದಿರಿ. ರಾತ್ರಿ ಅಡಿಗೆ ಮಾಡಿ ನನ್ನ ಹೊಲಸನ್ನ ನಿಟಾಗಿ ತೊಳೆದು ಒಂದು ಹುಳು ಕಡಿಯದಂತೆ ನೆಮ್ಮದಿಯ ನಿದ್ದೆ ಮಾಡಿಸಿದಿರಿ. ಮಂಡಿಗಾಲು ಊರುವಾಗ ಕೃಷ್ಣನ ವೇಶ ಹಾಕಿಸಿದಿರಿ ಅದರ ಮುಂದೆ ಭಕ್ತನಂತೆ ಕುಳಿತು ಆನಂದಿಸಿದಿರಿ. ನಿಮ್ಮ ಗುರಿ ನಿಮ್ಮ ಕನಸು ಎಲ್ಲವೂ ನಾನೇ ಆದೆ. ಪ್ರತಿ ಘಳಿಗೆ ನಿಮ್ಮ ಜೊತೆ ಇದ್ದೆ. ಶಾಲೆಗೆ ಕಳಿಸುವಾಗ ನನಗೆ ಕೆಟ್ಟ ದುಃಖವಾಗಿ ಅಳುತ್ತಾ ನಿಂತಿದಾಗ ಸಮಾಧಾನ ಮಾಡಿ ಶಾಲೆಗೆ ಕಳುಹಿಸಿ, ಮರೆಯಲ್ಲಿ ನೀವು ನಿಂತು ಅಳುತಿದ್ದಿರಿ. ನಿಮ್ಮ ಕೆಲಸದ ಮಧ್ಯೆಯೂ ಮದ್ಯಾಹ್ನ ಉಟದ ಸಮಯಕ್ಕೆ ಬರುತ್ತಿದ್ದಿರಿ ತಾವೂ ಉಪವಾಸಿದ್ದು ನನಗೆ ಕೈಯಾರೆ ಉಣಿಸಿ ಹೊಗುತ್ತಿದ್ದರಿ, ಸೈಕಲ್ ಮೇಲೆ ಕೂರಿಸಿ ಊರೆಲ್ಲಾ ಸುತ್ತಿಸುತ್ತಿದ್ದರಿ. ಇದ್ದ ಚಿಲ್ಲರೆಯಲ್ಲೆ ನಾನು ಕೈ ಮಾಡಿದ್ದನ್ನ ಕೊಡಿಸುತ್ತಿದ್ದರಿ, ನನಗಾಗಿ ಸುಟ್ಟ ಬಿಡಿಯನ್ನೆ ಮತ್ತೆ ಆರಿಸಿ ಸೆದುತ್ತಿದ್ದರಿ, ಹಣವನ್ನು ಕೂಡಿಟ್ಟರಿ, ದೊಡ್ಡ ಶಾಲೆಯಲ್ಲೆ ಶಿಕ್ಷಣ ಕೊಡಿಸಿದಿರಿ. ತಮ್ಮ ಶ್ರಮ ಉಪವಾಸದಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಂಡರಿ. ಇದ್ದ ಮನೆಯನ್ನೂ ಸಾಲಕ್ಕಾಗಿ ಒತ್ತೆ ಇಟ್ಟು ಶಿಕ್ಷಣ ಕೊಡಿಸಿದ್ದಿರಿ, ಎರಡೆ ಎರಡು ಜೊತೆ ಬಟ್ಟೆಯಲ್ಲೆ ಜೀವನ ಕಳೆದಿರಿ... ಅಪ್ಪಾಜಿ ನಿವೂ ತ್ಯಾಗ ಮೂರ್ತಿ...

ಅಮ್ಮನಿಲ್ಲದ ಕೊರಗನ್ನು ನಿಡಲಿಲ್ಲಾ, ಆದರ ನಿವೂ ಒಂದು ಕ್ಷಣ ಇಲ್ಲದೆ ಕಲ್ಪಿಸೊಕೆ ಆಗಲ್ಲ. ನನಗಾಗಿ ಸಾಕಷ್ಟು ಅವಮಾನ ಅಪಮಾನ ಸಹಿಸಿಕೊಂಡಿರಿ. ಏಳೇಳು ಜನ್ಮಕ್ಕೂ ನೀವೆ ನನಗೆ ಅಪ್ಪನಾಗಿ ಬನ್ನಿ..... 

ಮತ್ತೆ ಮೌನನಾದೆ. ಸಭೆಯಲ್ಲಿ ಎಲ್ಲರೂ ಭಾವುಕರಾದರು ಕೆಲವೊಬ್ಬರ ಕಣ್ಣಂಚಲಿ ನೀರು ತುಂಬಿ ಬಂದವು....

ಮುಖ್ಯ ಅತಿಥಿಗಳು "ತಮ್ಮ ತಂದೆಯವರು ಬಂದಿದಾರೆಯೇ? ಬಂದಿದ್ದರೆ ಅವರನ್ನ ವೇದಿಕೆಗೆ ಕರಿರಿ ಮೈ ಪ್ರೆಂಡ" ಅಂದರು. ಅಷ್ಟರಲ್ಲಿ ಮಿಥುನ ಅಪ್ಪನ ಕೈ ಹಿಡಿದು ಮೆಲಕ್ಕೆ ಎಬ್ಬಿಸಿದ. ಇಡೀ ಸಭಾಂಗಣದ ಕಣ್ಣು ಅಪ್ಪನ ಕಡೆ. ಅಪ್ಪ ಸಂಕೋಚಿತನಾದ. ಅಪ್ಪನ ಬಾಸ ಈಗಾ ಹಿಂದೆ ತಿರುಗಿ ಅಪ್ಪನ ಕಡೆ ನೊಡಿದ ಎದ್ದು ನಿಂತು ಚಪ್ಪಾಳೆ ತಟ್ಟಿದ. ಅವನ ಅಹಂ ಎಲ್ಲಾ ಇಳಿದುಹೊಗಿ ಅಪ್ಪನ ಮೇಲೆ ಗೌರವ ಬಂದಿತ್ತು. ಅಪ್ಪ ನಿಧಾನವಾಗಿ ವೇದಿಕೆಗೆ ಬಂದರು. ಸ್ವತಃ ವೇದಿಕೆಯ ಮೇಲಿದ್ದ ಗಣ್ಯರು ಅಪ್ಪನನ್ನ ವೇದಿಕೆಯ ಮೇಲೆ ಗೌರಯುತವಾಗಿ ಕೂರಿಸಿ ಸನ್ಮಾನ ಮಾಡಿದರು. ನಾನು ನನಗೆ ಸಿಕ್ಕಿದ್ದ ಬಂಗಾರದ ಪದಕಗಳನ್ನ ಅವರ ಕೊರಳಿಗೆ ಹಾಕಿ ಅವರ ಕಾಲಿಗೆ ನಮಸ್ಕರಿಸಿದೆ.......

ಕಥೆ ಮುಕ್ತಾಯ.

                                               ರಾಜು ಪಾಟೀಲ (ಸಿಂದಗಿ)
                                                   9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು