ರಾಷ್ಟ್ರ ವೀರ ಸ್ವಾಮಿ ರಮಾನಂದ ತಿರ್ಥರು.
(ನಮ್ಮ ಸಿಂದಗಿಯ ಅಮೂಲ್ಯ ರತ್ನ)
ಸ್ವತಂತ್ರ ಹೋರಾಟಗಾರರು ಹಾಗೂ ಹೈದ್ರಾಬಾದ್ ವಿಮೋಚನಾ ಹೋರಾಟದ ಮುಂಚೂಣಿ ನಾಯಕರು. ಇವರು 1903
ರಲ್ಲಿ ವಿಜಯಪೂರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದವರು. ಇವರ ಪೂರ್ವ ಹೆಸರು ವೆಂಕಟೇಶ ಭವನರಾವ್
ಖೇಡಗಿಕರ. ಸನ್ಯಾಸತ್ವ ಸ್ವೀಕಾರ ಮಾಡಿದ ಬಳಿಕ ಇವರು ಸ್ವಾಮಿ ರಮಾನಂದ ತೀರ್ಥರಾದರು. ಇವರ
ಪ್ರಾಥಮಿಕ ಶಿಕ್ಷಣ ಸುಕ್ಷೇತ್ರ ಗಾಣಗಾಪೂರದಲ್ಲಿ ಪೂರ್ಣಗೊಳಿಸಿದ್ದಾರೆ. ಕೇವಲ 19 ನೇ
ವಯಸ್ಸಿನಲ್ಲೆ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿ ಇವರ ಮೇಲೆ ಘಾಡ ಪ್ರಭಾವವನ್ನು ಬೀರಿತು.
ಪುಣೆಯ ತಿಲಕ ವಿದ್ಯಾಪೀಠದಲ್ಲಿ ತಮ್ಮ ಬಿಎ ಮತ್ತು ಎಮ್.ಎ ಪದವಿಯನ್ನು ಪೂರೈಸಿದರು.
1927 ರಲ್ಲಿ ಯುವಕ ವೆಂಕಟೇಶ N M ಜೋಶಿಯವರ ನೇತೃತ್ವದಲ್ಲಿ ಸೋಲಾಪುರದಲ್ಲಿ ಭಾರತ ಸ್ವತಂತ್ರ
ಚಳುವಳಿಯಲ್ಲಿ ಭಾಗವಹಿಸಿದರು. 1929 ರಲ್ಲಿ ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ಹಿಪ್ಪರಗಾದ
ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ಸೇವೆಗೆ ಸೇರಿದರು. ಕೇವಲ ತರಗತಿಯ ಶಿಕ್ಷಣವನ್ನು ಮಾತ್ರ
ನೀಡದೆ ಪ್ರಸ್ತುತ ರಾಜಕೀಯ ಆಲೋಚನೆಗಳ, ದೇಶದ ಬಗ್ಗೆ, ಸ್ವತಂತ್ರದ ಬಗ್ಗೆ ತಮ್ಮ
ವಿದ್ಯಾರ್ಥಿಗಳಿಗೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ಜನಾಂದೋಲನ
ಬಡಿದೇಳಿಸಲು ಬೇಕಾಗುವ ಹುರುಪನ್ನು ಅವರು ತುಂಬುತ್ತಿದ್ದರು.
ಅಂದು 1932 ಸಂಕ್ರಾತಿಯ ದಿನ ಹಿಪ್ಪರಗಾ ಶಾಲೆಗೆ ಶ್ರೀ ಆರ್.ಎಸ್.ನಾರಾಯಣ್ ಸ್ವಾಮಿ
ಬಂದು ವೆಂಕಟೇಶ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದರು. ಅಲ್ಲಿಂದ ಅವರು ಸ್ವಾಮಿ ರಮಾನಂದ
ತೀರ್ಥರಾದರು. ಹಿಪ್ಪರಗಾವನ್ನು ಬಿಟ್ಟು ಅಂಬೊಜೊಗಾಯ ಎನ್ನುವ ಊರಿಗೆ ಬಂದು ಅಲ್ಲಿನ
ನಿಸ್ವಾರ್ಥ ಸಹೋದ್ಯೋಗಿಗಳೊಂದಿಗೆ ಸೇರಿ "ಯೋಗೆಶ್ವರ ನೂತನ ವಿದ್ಯಾಲಯವನ್ನು"
ಪ್ರಾರಂಭಿಸಿ ಅದರ ಮುಖೇನ ಸಮಾಜ ಸೇವೆ ಮುಂದುವರೆಸಿದರು.
ಭಾರತ ಸ್ವತಂತ್ರವಾದ ನಂತರ ಹೈದ್ರಾಬಾದ್ ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ.
ಇದನ್ನು ಖಂಡಿಸಿ ಸ್ವಾಮಿಜಿ ಹೋರಾಟಗಳನ್ನು ಕೈಗೊಂಡರು. 100 ದಿನಗಳ ಕಾಲ ಜೈಲು ಅನುಭಸಿದರು
ಅಲ್ಲಿ ನಿಜಾಮರ ಚಿತ್ರ ಹಿಂಸೆಯನ್ನು ಮಾತೃಭೂಮಿ ಮತ್ತು ತಮ್ಮ ಜನರ ಮುಕ್ತಿಗಾಗಿ ಸಹಿಸಿಕೊಂಡು
ಹೊರ ಬಂದು ಪುನಃ ಚಳುವಳಿಯಲ್ಲಿ ಭಾಗವಹಿಸಿದರು. "ಹೈದ್ರಾಬಾದ್ ನಿಜಾಮನಿಂದ ನನ್ನ ಜನರನ್ನ
ಮುಕ್ತಿ ಮಾಡಿಸುವುದೆ ನನ್ನ ಧ್ಯೇಯ, ನನ್ನ ಇಡೀ ಜೀವನ ನನ್ನ ಮಾತೃ ಭೂಮಿಗೆ ಸಮರ್ಪಣೆ." ಎಂದು
ಪ್ರತಿಜ್ಞೆಗೈದರು.
ಕೊನೆಗೆ ಹೈದ್ರಾಬಾದ್ ನಿಜಾಮನಿಂದ ಮರಾಠವಾಡ ಅಥವಾ ಹೈದ್ರಾಬಾದ್ ಸಂಸ್ಥಾನವನ್ನು
ಮುಕ್ತಿಗೊಳಿಸಿ ಭವ್ಯ ಭಾರತದ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಸ್ವಾಮೀಜಿಯವರದು. ಮುಂದೆ
ಹೈದ್ರಾಬಾದ್ ಸ್ಟೇಟ್ ಕಾಂಗ್ರೆಸ್ ಕಮಿಟಿಯನ್ನು ಸ್ಥಾಪಿಸಿ MP ಕೂಡಾ ಆದರು.
ಕೊನೆಗೆ 22 ಜನೆವರಿ 1972 ರಲ್ಲಿ ಕ್ಯಾನ್ಸರನಿಂದ ಬಳಲಿ ತಮ್ಮ ಜೀವವನ್ನು ತ್ಯಜಿಸಿದರು.
ಹೈದ್ರಾಬಾದ್ ನ ಬ್ರಹ್ಮನವಾಡಿಯಲ್ಲಿ ಅವರ ಅವಶೇಷಗಳು ವಿಶ್ರಾಂತಿ ಪಡೆಯುತ್ತಿವೆ. ದಿವಂಗತ
ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಅವರು ಹೈದರಾಬಾದ್ ನಲ್ಲಿ ಸ್ವಾಮೀಜಿಯವರ
ನೆನಪಿಗಾಗಿ ಅವರ ಸ್ಮಾರಕವನ್ನು ಸ್ಥಾಪಿಸಿದರು. ಅವರು ಜನಿಸಿದ ನಾಡು ಸಿಂದಗಿಯಲ್ಲಿಯೂ 2006
ರಲ್ಲಿ ಅಂದಿನ ಕರ್ನಾಟಕ ಸರಕಾರ ಸ್ವಾಮೀಜಿಯವರ ಗೌರವಾರ್ಥವಾಗಿ ಅವರು ಜನಿಸಿದ ಸ್ಥಳದಲ್ಲಿ
ಸ್ಮಾರವನ್ನು ನಿರ್ಮಿಸಿದ್ದಾರೆ. 1999 ರಲ್ಲಿ ಅಂದಿನ ಪ್ರಧಾನಿ ಶ್ರೀ ಸ್ವಾಮಿ ರಮಾನಂದ
ತೀರ್ಥರ ನೆನಪಿನಲ್ಲಿ ಅಂಚೆ ಪೋಸ್ಟನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.
ಮಹಾರಾಷ್ಟ ರಾಜ್ಯದಲ್ಲಿ ಅಕ್ಟೊಬರ್ 3 ರನ್ನು ಸ್ವಾಮಿ ರಮಾನಂದ ಜಯಂತಿಯನ್ನಾಗಿ
ಆಚರಿಸುತ್ತಾರೆ. ಮಹಾರಾಷ್ಟದಲ್ಲಿ ಇವರ ಕುರಿತು ಸಾಕಷ್ಟು ಅಧ್ಯಯನ, ಅಂಕಣಗಳು, ಪುಸ್ತಕಗಳು,
ಡಾಕ್ಯುಮೆಂಟರಿಗಳು ತಯಾರಾಗಿದ್ದಾವೆ. ಆದರೆ ಸ್ವಾಮಿಜಿ ಜನಿಸಿದ ಕರ್ನಾಟಕದಲ್ಲಿ ರಮಾನಂದ
ತೀರ್ಥರೆಂದರೆ ಅನೇಕರಿಗೆ ಗೊತ್ತಿಲ್ಲಾ. ! ಅಷ್ಟೇ ಅಲ್ಲ ಅವರು ಜನಿಸಿದ ಊರಲ್ಲಿ ಕೂಡಾ ಅವರು
ಅಪರಿಚಿತರು. ಇದು ದುರದೃಷ್ಟಕರ.
ರಾಜು ಪಾಟೀಲ ಸಿಂದಗಿ
9611042409




4 ಕಾಮೆಂಟ್‌ಗಳು
ತುಂಬಾ ಒಳ್ಳೆಯ ಸಂಗ್ರಹ. ಷಾದನೀಯ್ ವಿಷಯ್ ಅಂದ್ರೆ ಆವರು ಸಿಂದಗಿಯಲ್ಲಿ ಪ್ರತಿಯೊಬ್ಬ ಮನುಷ್ಯ ಅವರ ಹೆಸರಿನಿಂದಲೇ ಗುರ್ತಿಸುವಂತಾಗಬೇಕಿತ್ತು ಆದ್ರೇ ಅವರ ಹೆಸರೇ ಗುರ್ತು ಇರದ ಜನ. ಆವರು ನಾವಾಗಿದ್ದೇವೆ . ಅವರಾದ್ರು ಸಿಂದಗಿ ಅಂತ ಆ ಭಾಗದಲ್ಲಿ ಗುರ್ತಿಸಿಕೊಂಡಿಲ್ಲ. ಅಂತನೂ ಕೇಳಿದೆ.ಆದ್ರೇ ನಮ್ಮೂರ ರತ್ನ ಅಂತ ನನಗೆ ಹೆಮ್ಮೆ
ಪ್ರತ್ಯುತ್ತರಅಳಿಸಿಧನ್ಯವಾದಗಳು. ಎಲ್ಲಾದರೂ ಸಿಂದಗಿ ಹೆಸರು ಹೆಳುವಾಗ ನಮ್ಮೂರಿನ ರತ್ನ ಇಂಥವರು ಅಂತಾನು ಹೆಳಿ.
ಅಳಿಸಿಹೈದರಾಬಾದ್ ಕರ್ನಾಟಕದ ವಿಮೋಚನೆ ಮತ್ತು ಏಕೀಕೃತ ಕರ್ನಾಟಕಕ್ಕೆ ಆ ಭಾಗವನ್ನು ಸೇರಿಸುವದರಲ್ಲಿ ರಮಾನಂದರ ಕೊಡುಗೆ ಅಪಾರ. ಇಂತವರು ನಮ್ಮ ಊರಿನವರು ಎಂಬುವುದೆ ನಮಗೆ ಹೆಮ್ಮೆ..
ಪ್ರತ್ಯುತ್ತರಅಳಿಸಿನಮ್ಮ ಸಿಂದಗಿಯ ಅಮೂಲ್ಯವಾದ ರತ್ನ. ನಮ್ಮೂರಿನವರು
ಪ್ರತ್ಯುತ್ತರಅಳಿಸಿಸ್ವಾತಂತ್ರ್ಯ ಹೋರಾಟದಲ್ಲಿ
ಭಾಗವಹಿಸಿದರೆಂಬುದು ನಮ್ಮ ಊರಿಗೊಂದು ಹೆಮ್ಮೆ ನಮಗೊಂದು ಹೆಮ್ಮೆ......