ಎ ದೌಲತ ಭಿ ಲೆಲೋ, ಏ ಶೋರತ ಭಿ ಲೆಲೋ.
ಭಲೆ ಛೀನಲೊ ಮೇರಿ ಜವಾನಿ,
ಮಗರ್ ಮುಝಕೊ ಲೋಟಾದೊ ಓ ಬಚಪನ್ ಕ ಸಾವನ್....
ಓ ಕಾಗಜ್ ಕಿ ಕಾಸ್ತಿ, ಓ ಬಾರಿಶ್ ಕಾ ಪಾನಿ....
ಈ ಹಣವೂ ತೆಗೆದುಕೊ, ಈ ಆಸ್ತಿಯು ಪಡೆದುಕೊ,
ನನ್ನ ಯೌನವನ್ನು ಕಸಿದುಕೊ, ಆದರೆ ನನಗೆ ನನ್ನ ಬಾಲ್ಯವ ಮರಳಿಸು, ಆ ಕಾಗದದ ದೊಣಿ.... ಆ ಮಳೆಯ ನೀರು....
ವ್ಹಾ ಕವಿ, ಗಝಲ್ ಹಾಡುಗಾರ ಜಗ್ಜಿತ್ ಸಿಂಗ್ ಅವರ ಕಂಠಸಿರಿಯಲ್ಲಿ ಈ ಹಾಡು ಕೇಳುವುದೆ ಒಂದು ಆನಂದ.
ಕೆಲವೊಂದು ಹಾಡುಗಳೆ ಹಂಗೆ ಧ್ಯಾನ ಮಾಡಿದಾಗ ಸಿಗುವ ಆನಂದದಂತೆ, ನಿಸರ್ಗದಲ್ಲಿ ಕಳೆದು ಹೋಗುವ ಭಾವದಂತೆ, ಯಾವುದೊ ಲೋಕದಲ್ಲಿದ್ದವನಿಗೆ ಸರ್ರನೆ ತಂದು ಸಿಹಿಯಾದ ಜೇನಿನಲ್ಲಿ ಮುಳಗಿಸಿದಂತೆ. ಹಾಗೆ ಎಲ್ಲೊ ಯಾವುದೊ ಯುಗಕ್ಕೆ ಕರೆದುಕೊಂಡು ಹೋಗಿ ಮೃದುವಾದ ಮಂಜುಳ ಸವಿಯನ್ನು ನೀಡಿ, ಮನಸ್ಸು ಹಗುರ ಮಾಡಿದಂತೆ.
ಕವಿ ತನ್ನ ಬಾಲ್ಯವನ್ನು ಎಷ್ಟು ಚಂದವಾಗಿ ಕೇಳಿ ಕೊಳ್ಳುತ್ತಿದ್ದಾನೆ. ನಿಜವಾಗಲೂ ಇದು ಕೇವಲ ಕವಿಯ ಭಾವನೆಯಲ್ಲ ಇದು ಪ್ರತಿಯೊಬ್ಬನ ಹೃದಯದ ಭಾವನೆ.
ಎಷ್ಟು ಚಂದರಿ ಆಗಿನ ಆ ದಿನಗಳು, ಗೋಲಿ ಆಟ, ಗೊಂಬೆ ಆಟ, ಮನೆ ಕಟ್ಟೊ ಆಟ, ಬಿಸಿಲಲ್ಲಿ ಸುಸ್ತಿಲ್ಲದೆ ಊರೆಲ್ಲಾ ಅಡ್ಡಾಡಿ ಕೊನೆಗೆ ಅಮ್ಮನ ಬೈಗುಳದೊಂದಿಗೆ ಮನೆಗೆ ಬಂದು ಬೈದ ಅಮ್ಮನೇ ಮತ್ತೆ ಪ್ರೀತಿಯಿಂದ ಕೈ ಕಾಲು ತೊಳೆದು ಉಣ ಬಡಿಸುತ್ತಾಳೆ. ಅದು ತಾಯಿಯ ಕರುಳು ನಾವೂ ಮಗುವಿದ್ದರೂ ಅದೆ ಕಾಳಜಿ, ನಾವೂ ಮುದುಕನಾದರೂ ಅದೆ ಕಾಳಜಿ. ಅವಳೆಂದಿಗೂ ತನ್ನ ಮಗುವಿಗೆ ಪೊರೆಯಾಗಿ ಕಾಪಾಡುವ ದೇವತೆ.
ಈಗಿನ ಈ ಸ್ಪರ್ಧೆಯ ಜಗತ್ತಲ್ಲಿ ಓಡಾಟ, ಸುತ್ತಾಟ, ರಂಪಾಟಗಳಲ್ಲಿ ನಮಗೂ ಒಂದು ಜೀವನವಿದೆ ಅದಕ್ಕೊಸ್ಕರ ನಾವೂ ಬದುಕಬೇಕೆಂಬುದನ್ನೆ ಮರೆತು ಬಿಟ್ಟಿದ್ದಿವಿ. ರೋಬೊಟನ್ನ ನೋಡಿ ಚಪ್ಪಾಳೆ ಹೊಡಿತ್ತಿದ್ದ ನಾವೂ, ಈಗಾ ನಮ್ಮನ್ನೆ ನೊಡಿ ಹಳ್ಳಿಯ ರೈತರು ಚಪ್ಪಾಳೆ ತಟ್ಟೊಮಟ್ಟಕ್ಕೆ ನಮ್ಮ ಜೀವನವನ್ನು ನಾವೆ ತಂದು ನಿಲ್ಲಿಸಿದ್ದೇವೆ. ಏನ ಹೆಳಿದರು ಫಾಸ್ಟ ಫಾಸ್ಟ ಎಂಥ ಫಾಸ್ಟ ನಾನಂತೂ ಕಾಣೆ. ಜಾಸ್ತಿ ಫಾಸ್ಟ ಆದರೆ ಜೀವನವೂ ಅಷ್ಟೆ ಫಾಸ್ಟಾಗಿ ಮುಗಿದ ಹೋಗಿಬಿಡುತ್ತೆ.
ಅರೇ ಜೀವನ, ಬದುಕು ಅಂದರೆ ಅದೆನಾ.... ಕೆಲಸ ಮಾಡಬೇಕು ನಿಜಾ. ಈ ಸ್ಪರ್ಧಾತ್ಮಕ ಯುಗದಲ್ಲಿ ಅದರ ವೇಗಕ್ಕೆ ಒಡಲೆಬೇಕು ಹಾಗಂತ ಬೆಳಗ್ಗೆಯಿಂದ ರಾತ್ರಿಯವರೆಗೂ ಅದೆ ಮಾಡಿದರೆ, ನಮಗೂ ಮಿಶನಗಳಿಗೂ ಯಾವುದೇ ವ್ಯತ್ಯಾಸ ಇರುವದಿಲ್ಲ. ಒಂದ ಸಲ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ ಎಷ್ಟು ಚಂದ ಇದ್ವು ಆ ದಿನಗಳು.
ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವದು ಬೇಕಿಲ್ಲ. ಕೊನೆ ಪಕ್ಷ ನಮ್ಮ ಜೀವನವನನ್ನು ನಾವೂ ಚಂದವಾಗಿ ಕಟ್ಟಿ ಬಾಳಿ ನೆಮ್ಮದಿಯಿಂದ ಹೋಗಬೇಕು. ಛೇ.. ಯೌವನದ ದಿನಗಳಲ್ಲಿ ಕೆಲಸಕ್ಕೆ ಬೆನ್ನು ಹತ್ತಿದೆ. ಆ ದಿನಗಳನ್ನು ಅನುಭವಿಸಲು ಆಗಲೇ ಇಲ್ಲ, ಎಂಬ ನೋವು ಇರಕೂಡದು ಎಂದರೆ ಕೆಲಸದ ಜೊತೆ ಯೌವನ, ಹವ್ಯಾಸ, ಆಟ ಏನೇನ ಮಾಡಬೆಕನಿಸುತ್ತೊ ಮಾಡಿ ಎನೇನ ನೋಡಬೆಕು ಅನಿಸುತ್ತೊ ನೋಡಿಬಿಡಿ. ಮರಳಿ ಈ ಸಮಯ ಸಿಗುವದಿಲ್ಲ. ಹಣ ಬೇಕಾದರೆ ಸಿಗಬಹುದು ಆದರೆ ಸಮಯ ಸಿಗುವದಿಲ್ಲ ಹಾಗಾಗಿ ನಮ್ಮ ಜೀವನ ನಾವೂ ಅನುಭವಿಸದೆ ಮತ್ಯಾರು ಅನುಭವಿಸಬೇಕು.
ಈಗಂತೂ ಮಕ್ಕಳು ಮೊಬೈಲನಲ್ಲಿಯೇ ಆಟ, ಗೇಮ್ಸ್ ಅಂತಾ ಆಡಿ ಕಣ್ಣು ಕತ್ತು ನೋವಿನೊಂದಿಗೆ ನರಳುತ್ತವೆ. ಆದರೆ ನಮ್ಮ ಕಾಲದಲ್ಲಿ ಮೊಬೈಲಂತೂ ಇರಲಿಲ್ಲಾ ಚಪ್ಪಲಿ ಇಲ್ಲದೆನೆ ಬಿಸಿಲಲ್ಲಿ ಆಟ ಆಡ್ತಿದ್ವಿ, ಲಗ್ಗೊರಿ ಆಡಿ ಬಾಲು ಸ್ವಲ್ಪ ಜೋರಾಗಿ ಪೆಟ್ಟು ಬಿದ್ದರೆ ಅಳುತ್ತಾ ಮನೆಗೋಗಿ ಇಂಥವನು ಹೊಡೆದ ಎಂದು ಅಮ್ಮನಲ್ಲಿ ದೂರು ಒಪ್ಪಿಸುವದು. ಅವಳು ಬಂದು ಅವನನ್ನು ಬೈದು ನನ್ನ ರಮಿಸೊದು. ಊರಲ್ಲಿ ಯಾವುದೇ ಸಮಾರಂಭಗಳಿದ್ದರೆ ನಮ್ಮ ಮಕ್ಕಳ ಟೀಮ್ ಬೆಳಗ್ಗೆನೆ ಅಲ್ಲಿ ಹಾಜರಾಗುತ್ತಿತ್ತು. ಅಲ್ಲಿ ಕ್ಯಾಸೆಟಗಳಲ್ಲಿ ಹಾಡು ಹಾಕುತ್ತಿದ್ದರೆ ಪಿನ್ನು ಹಾಕೊಂಡ ಚಡ್ಡಿ ಕಳಚುವವರೆಗೆ ಕುಣಿತಿದ್ವಿ, ಕುಣಿದು ಕುಣಿದು ಧೂಳೆಲ್ಲಾ ಮೈಯೆಲ್ಲಾ ಹರಡಿ ಪೌಡರ ಬಡದಂಗೆ ಆಗ್ತಿತ್ತು. ಸುಸ್ತಾದಾಗ ಅಲ್ಲೆ ಊಟಾ ಮತ್ತೆ ಆಟ. ವೆಸ್ಟಾದ ಟೈರನ್ನೆ ಬೈಕಿನಂತೆ ಭಾವಿಸಿ ಅದಕ್ಕೊಂದು ಕಟ್ಟಿಗೆಯ ಆಸರೆಯೊಂದಿಗೆ ಊರೆಲ್ಲಾ ಒಂದು ರೌಂಡು, ಮುಳ್ಳು ಕಂಟಿ ಎಂಬುದನ್ನು ಲೆಕ್ಕಿಸದೇ ಹಿಡಿಯುತ್ತಿದ್ದ ಚಿಟ್ಟೆ, ಬೊರಂಗಿಯನ್ನು ಹಿಡಿದು ಮ್ಯಾಚ್ ಬಾಕ್ಸನಲ್ಲಿ ಇಡುತ್ತಿದ್ದದ್ದು, ಮ್ಯಾಚ್ ಬಾಕ್ಸ್ ನ ಕವರಗಳನ್ನ ಜೋಡಿಸಿ ಇಸ್ಪೆಟ್ ಥರಾ ಆಡುತ್ತಿದ್ದದ್ದು.... ಇನ್ನೂ ಮರೆತಿಲ್ಲಾ....
ದಿನವೂ ಮನೆಯಲ್ಲಿ ತಂದೆಯನ್ನು ಸಣ್ಣ ಕಣ್ಣುಗಳಿಂದ, ಎಳೆಯ ಮುಖದಲ್ಲಿ ಸ್ವಲ್ಪ ಸಂಕೊಚದಿಂದ 'ಅಪ್ಪಾ ಒಂದು ರೂಪಾಯಿ' ಎಂದು ಒಂದು ಬೆರಳನ್ನು ತೋರಿಸುತ್ತಾ ಬೇಡುತ್ತಿದ್ದ ಪರಿ ಈಗ ಸಾವಿರ ರೂಪಾಯಿ ಕೇಳಿ ಪಡೆದರೂ ಸಿಗದು. ಆ ಒಂದು ರೂಪಾಯಿಯಲ್ಲಿ ದಿನಸಿ ಅಂಗಡಿಗೆ ಹೋಗಿ ಪೆಪರಮಿಟ್ಟಿ ಎಂಬ ಸಿಹಿ ಪದಾರ್ಥ ನೆಚ್ಚಿಕೊಳ್ತಾ ಪಡುತ್ತಿದ್ದ ಆನಂದ, ಇವತ್ತು ಬಿಗ್ ಬಜಾರನಲ್ಲಿ ನೂರು ರೂಪಾಯಿ ಕೊಟ್ಟು ತಿಂದ ಐಸ್ ಕ್ರಿಮ್ ನಲ್ಲಿ ಸಿಗದು. ಏನಾದರೂ ಪೆಟ್ಟಾದಾಗ ನಾವೆ ವೈದ್ಯಶಾಸ್ತ್ರ ಪರಿಣಿತರಂತೆ ಮಣ್ಣನ್ನು ಚನ್ನಾಗಿ ಸೊಸಿ ಪೆಟ್ಟಾದ ಜಾಗದಲ್ಲಿ ಹಾಕಿದರೆ ಮುಗಿತು ಆ ಗಾಯದ ಉಪಚಾರ.
ಮೊದಲ ಮಳೆ ಬಂದಾಗ ಹೂಯ್ಯೊ.. ಎಂದು ಮಳೆಲಿ ತೊಯತಾ ಕುಣಿತಿದ್ವಿ ಆಗೆಲ್ಲಾ ಪಾಲಕರು ಇಷ್ಟೊಂದು ಸ್ಟ್ರಿಕ್ಟ್ ಮಾಡ್ತಿರಲಿಲ್ಲ. ಶಾಲೆಗೆ ಹೊಗಬೇಕಾದರೆ ಒಂದೆನೋ ಬೇಜಾರು ಯಾಕಾದರೂ ಶಾಲೆಗೆ ಹೊಗಬೇಕು, ಯಾವಾಗ ರಜೆ ಬರುತ್ತೆ ಎಂಬ ಕಾಯುವಿಕೆ. ಅದಲ್ಲದೆ ನಮಗೆ ಆ ಕಾಲದಲ್ಲಿ ಇರುವ ದೊಡ್ಡ ಚಿಂತೆ ಅಂದರೆ ಹೋಮ್ ವರ್ಕ. ಅದೊಂದು ಮುಗಿತು ಅಂದರೆ ಎನೊ ದೊಡ್ಡ ಸಾಧನೆ ಮಾಡಿದವರಂತೆ ಚಿಟ್ಟೆ ಹಾರಿದಂತೆ ಹಾರಿಬಿಡ್ತಿದ್ವಿ....
ಅದಕ್ಕೆ ಕವಿ ಜಗ್ಜಿತ್ ಸಿಂಗ್ ಮನತುಂಬಿ ಹಾಡಿರುವ ಹಾಡು ಕೇಳಿದಾಗ ನಮ್ಮಬಾಲ್ಯ ನೆನಪಾಗದೆ ಇರೊದಕ್ಕೆ ಸಾಧ್ಯವಿಲ್ಲ.. "ಮಗರ್ ಮುಝಕೊ ಲೋಟಾದೊ ಬಚಪನ್ ಕಿ ಸಾವನ್, ಓ ಕಾಗಜ್ ಕಿ ಕಾಸ್ತಿ, ಓ ಬಾರಿಶ್ ಕಾ ಪಾನಿ.....
ನಿಮಗೂ ಇಂಥಹ ಹಾಡುಗಳು ನಿಮ್ಮ ಮನಕ್ಕೆ ಮ್ಯಾಜಿಕ ಮಾಡ್ತಿದ್ದರೆ ಕಮೆಂಟಲ್ಲಿ ತಿಳಿಸಿ ನಾವೂ ಕೆಳ್ತಿವಿ... ಆ ಹಾಗೆ ಕಮೆಂಟಲ್ಲಿ ಅಂಕಣದ ಕುಂದು ಕೊರೆತೆ, ಅಂಕು ಡೊಂಕುಗಳನ್ನು ತಿಳಿಸಿ..... ಧನ್ಯವಾದಗಳು
🖋🖋ರಾಜು ಪಾಟೀಲ.





1 ಕಾಮೆಂಟ್‌ಗಳು
Super
ಪ್ರತ್ಯುತ್ತರಅಳಿಸಿ