ಹೇಗೆ ಹೇಳಲಿ ನಾ ನಿನಗೆ
ನೀನಾರು ನನಗೆ....!!೨!!
ನನ್ನ ಹೃದಯದ ಗೀತೆ ನೀ
ಜೀವನದ ಸಂಗೀತ ನೀ.
ನನ್ನ ಜೀವನ ನೀ, ನನ್ನ ಬದುಕು ನೀ
ನನ್ನ ಬೆಳಕು ನೀ, ನನ್ನ ಉತ್ಸಾಹ ನೀ
ಪ್ರತಿ ಖುಷಿ ನೀ, ಪ್ರತಿ ಪ್ರೀತಿ ನೀ
ಪ್ರೇಮವೂ ನಿನೇ, ಹೃದಯಾಂತರವೂ ನೀನೇ..
ನನ್ನ ಕಣ್ಣಲ್ಲಿ ನೀ, ಆಲೋಚನೆಯಲ್ಲಿ ನೀ.
ಉಸಿರಾಟವೂ ನೀನೆ, ಬಡಿತವೂ ನೀನೆ.
ನಿದರೆಯಲ್ಲೂ ನೀನೆ, ಕನಸಲ್ಲೂ ನೀನೆ
ನೀನಿದಿಯಾ ಪ್ರತಿ ಮಾತಿನಲ್ಲೂ,
ನೀನಿದಿಯಾ ಪ್ರತಿ ಹಗಲು ರಾತ್ರಿಗಳಲ್ಲೂ,
ಮುಂಜಾವೂ ನೀ... ಸಂಜೆಯೂ ನೀ....
ಆಲೋಚನೆಯಲ್ಲೂ ನೀ, ಕೆಲಸದಲ್ಲೂ ನೀ
ನನ್ನ ಸಿಗುವಿಕೆಯೂ ನೀ,
ನನ್ನ ಕಳೆದುಕೊಳ್ಳುವಿಕೆಯೂ ನೀ.
ನನ್ನ ನಗುವೂ ನೀ..
ನನ್ನ ಅಳುವೂ ನೀ.
ಮತ್ತು ನನ್ನ ಎಚ್ಚರ- ನಿದ್ರೆಯೂ ನೀ.
ಎಲ್ಲೆ ಹೋಗಲಿ, ಏನೆ ನೊಡಲಿ
ಅಲ್ಲಿರುವೆ ನೀ, ಅಲ್ಲಿದಿಯಾ ನೀ.
ಹೇಗೆ ಹೇಳಲಿ ನಾ ನಿನಗೆ
ನೀನಾರು ನನಗೆ.
ನೀನಿಲ್ಲದೆ ನಾನೆನೂ ಅಲ್ಲ....
ಹೇಗೆ ಹೇಳಲಿ ನಾ ನಿನಗೆ
ನೀನಾರು ನನಗೆ....
ಹೇಗೆ ಹೇಳಲಿ ನಾ ನಿನಗೆ,
ನನ್ನ ಪಾಲಿನ ಧರ್ಮ ನೀ, ನನ್ನ ನಿಯತ್ತು ನೀ.
ನೀನು ನನ್ನ ಪ್ರಾರ್ಥನೆ, ನೀನು ನನ್ನ ಬಯಕೆ.
ನೀನೆ ನನ್ನ ಆಸೆ.
ಬಡಪಡಿಸುತ್ತಿರುತ್ತೇನೆ ನಾನು. ಆ ಒಂದು ಚಿತ್ರ ನೀನು..
ನೀನು ನನ್ನ ಹಣೆಬರಹ, ನೀನು ನನ್ನ ನಕ್ಷತ್ರ.
ನೀನೆ ನನ್ನ ಹೃದಯದ ದೃಶ್ಯ, ಮನದಲ್ಲಿ ಅಚ್ಚಳಿಯದೆ ಉಳಿದ ಅಚ್ಚು ನೀ.
ನನ್ನ ಆವರಿಸಿಕೊಂಡಿರುವೆ ನೀ...
ಪೂರ್ವದಲ್ಲೂ ನೀ, ಪಶ್ಚಿಮದಲ್ಲೂ ನೀ.
ಉತ್ತರ-ದಕ್ಷಿಣದಲ್ಲೂ ನೀ.
ನನ್ನ ಸರ್ವ ಜೀವನವೆ ನೀ, ನನ್ನ ಪ್ರತಿ ಕ್ಷಣವೂ ನೀ.
ನನ್ನ ದಾರಿಯೂ ನೀ, ನನ್ನ ಗಮ್ಯವೂ ನೀ.
ನನ್ನ ಸಾಗರ ನೀ, ನನ್ನ ಬಯಲು ನೀ.
ನಾ ನೋಡುವೆ ಕೇವಲ ನಿನ್ನನ್ನೆ, ನಾ ಆಲೋಚಿಸುವೆ ಕೇವಲ ನಿನ್ನನ್ನೆ.
ನೀನ್ನನ್ನು ನಾ ತಿಳಿದಿದ್ದೆನೆ, ನೀನ್ನನ್ನೆ ನಾ ನಂಬಿದ್ದೆನೆ.
ನೀನೆ ಪರಿಚಯ ನನಗೆ.
ಹೇಗೆ ಹೇಳಲಿ ನಾ ನಿನಗೆ....
ದೇವತೆ ನೀ ನನಗೆ, ದೇವರು ನೀ ನನಗೆ
ಹೇಗೆ ಹೇಳಲಿ ನಾ ನಿನಗೆ,
ನೀನಾರು ನನಗೆ.......!!೨!!
ಹಿಂದಿಯ ಪ್ರಖ್ಯಾತ ಮತ್ತು ನನ್ನ ನೆಚ್ಚಿನ ಕವಿತೆಯನ್ನು ನನ್ನ ಭಾವಕ್ಕೆ ತಕ್ಕಂತೆ ತುರ್ಜುಮೆಯನ್ನು ಮಾಡಿದ್ದೆನೆ....
🖋🖋 ರಾಜು ಪಾಟೀಲ


5 ಕಾಮೆಂಟ್ಗಳು
Super dralinig nice
ಪ್ರತ್ಯುತ್ತರಅಳಿಸಿಧನ್ಯವಾದಗಳು ಡಿಯರ ಶೆರ್ ಮಾಡು
ಅಳಿಸಿಏನ್ ಅಂತ ಕಮೆಂಟ್ ಮಾಡಲಿ ಅಣ್ಣಾ ಯಾಲ್ಲ ನೀನ್ ಹೇಳಿ.. ತೆರೆ ಬಿನಾ ಕುಚ ನಹಿ ಮೇರಿ ಜಿಂದಗಿ.. ಬಸ್ ತುಮ್ ಹಿ ಹೋ😍😍😍😎😎😎
ಪ್ರತ್ಯುತ್ತರಅಳಿಸಿ😀😀😀😀😀
ಅಳಿಸಿನೀನಾರು ಅನ್ನೋ ಪ್ರಶ್ನೆ ಕೆ ಸುಂದರ್ ಉತ್ತರ ಅಣ್ಣಾ... 😊
ಅಳಿಸಿ