Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಎಂಥ ಕಾಲ ಬಂತೊ ನೊಡಣ್ಣ


ಎಂಥ ಕಾಲ ಬಂತೊ ನೊಡ ಅಣ್ಣ.
ನೊಡೊ ಬದಲ ಕುರುಡ ಮಾಡೊ ನನ್ನ.

ಸುಮ್ಮನೆ ಅಂತಾರೆನೊ ಕಲಿಗಾಲ ಇದು ಅಂತಾ,
ರಾಕ್ಷಸರೆ ಹುಟ್ಯಾರ ನೊಡ ನಿ ಕುಂತಾ...

ತಾಯಿಗ ಮನಿಯಿಂದ ಹೊರಗ ಹಾಕ್ಯಾರ,
ಗೊತ್ತಿಲ್ಲ ಇವೂಕ ಆಕಿನ ಹೊಟ್ಯಾಂದೆ ಇವಾ ಹೊರಗ ಬಂದಾನ.
ಎಂಥ ಕಾಲ ಬಂತೊ ನೊಡ ಅಣ್ಣ.
ನೊಡೊ ಬದಲ ಕುರುಡ ಮಾಡೊ ನನ್ನ.

ಹೊಗಬರ್ರಿ ಜಲ್ದಿ ಮನಿಗ ಅನ್ನೊ ಗರತಿ ಕಡಿಮಿ ಆಗ್ಯಾರ,
ಅವರು ಹೊಗ್ಯಾರ ಜಲ್ದಿ ಬಾ ಅನ್ನೊ ಮುಳೆರು ತುಂಬ್ಯಾರ.
ಎಂಥ ಕಾಲ ಬಂತೊ ನೊಡ ಅಣ್ಣ.
ನೊಡೊ ಬದಲ ಕುರುಡ ಮಾಡೊ ನನ್ನ.

ಕಲಿಸೊ‌ ಮಾಸ್ತರ ದೇವರಂತ ತಿಳದಾರ,
ದೇವ್ವನಂಗ ಮಕ್ಕಳ ಮೈಮ್ಯಾಲ ಬಿಳತಾರ.
ಎಂಥ ಕಾಲ ಬಂತೊ ನೊಡ ಅಣ್ಣ,
ನೊಡೊ ಬದಲ ಕುರುಡ ಮಾಡೊ ನನ್ನ.

ಹುಟ್ಟಿನ ಅರ್ಥ ಮರ್ತಾನ,
ಕಾಮದಾಗ ಮೈ ಮರ್ತಾನ.
ಸಿಕ್ಕ ಸಿಕ್ಕ ಸ್ತ್ರಿಗಿ ಇವಾ ಕೈ ಚಾಚತಾನ,
ತನ್ನ ಮನ್ಯಾಗಿನ ಸ್ತ್ರಿಗಿ ಇನ್ನೊಬ್ಬ ಕೈ ಹಚ್ಚತಾನ.

ಬಿಳಿ ಬಟ್ಟಿ ಪುಢಾರಿತನ ಮಾಡ್ತಾನ,
ಮೈ ಕೆಸರ ಆಗಂಗ ದುಡಿ ಅಂದರ ಅಳ್ತಾನ.
ದುಡದವರ ಹಣ ಅನಾಮತ ನುಂಗತಾನ,
ಅವರು ಬಂದ ಕೆಳಿದರ ಆಕಾಶ ತೊರಸತಾನ.

ಎಂಥ ಕಾಲ ಬಂತೊ ನೊಡ ಅಣ್ಣ.
ನೊಡೊ ಬದಲ ಕುರುಡ ಮಾಡೊ ನನ್ನ.

                                                ರಾಜು ಪಾಟೀಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ರಾಜಾ ಒಳ್ಳೆಯ ಸಂದೇಶ ಅಡಗಿದೆ. ಮತ್ತು ಈಗಿನ ಕಲಿಯುಗ ಹೆಂಗ ಅದ ಅನ್ನುದು ಬಹಳ ಮಾರ್ಮಿಕವಾಗಿ ಹೇಳಿ ದೋಸ್ತ ........ ನಿನ್ನ ಸಾಹಿತ್ಯಾಸಕ್ತಿಗೆ ನನ್ನದೋಂದು ಸಲಾಮ.......

    ಪ್ರತ್ಯುತ್ತರಅಳಿಸಿ
  2. ತುಂಬಾ ಅರ್ಥ ಗರಬಿತವಾದ ಮತ್ತು ಡಾರಲಿಂಗ ಸೂಪರ್

    ಪ್ರತ್ಯುತ್ತರಅಳಿಸಿ
  3. ಇಂದಿನ ಸಾಮಾಜಿಕ ಸಮಸ್ಯೆಗಳನ್ನು ವಿಡಂಬನೆ ಮುಖಾಂತರ ಹೇಳಿದ್ದು ತುಂಬಾ ಚೆನ್ನಾಗಿ‌ ಮೂಡಿಬಂದಿದೆ ಅಣ್ಣ..

    ಪ್ರತ್ಯುತ್ತರಅಳಿಸಿ