ಶಾಲೆ ಕಲಿಬೇಕು ಎಂಬ ಹಂಬಲ ಆದರೆ ಮನೆಯಲ್ಲಿ ಎಮ್ಮೆ ಕಾಯಲು ಕಳಿಸಿದರು. ಒಂಭತ್ತನೆ ವರ್ಷದಲ್ಲೆ 30 ವಯಸ್ಸಿನ ಯುವಕನ ಜೊತೆ ಮದುವೆ ಮಾಡಿ ಕಳಿಸಿದರು. 19 ವರ್ಷದೊಳಗೆ ಮೂರು ಮಕ್ಕಳು. ಆ ಊರಿನ ಸಾವಕಾರ ಹೆಣ್ಮಕ್ಕಳನ್ನು ಕೀಳಾಗಿ ಕಾಣ್ತಿದ್ದ, ಕೂಲಿ ಕೆಲಸ ಮಾಡಿಸಿಕೊಂಡು ಕೂಲಿ ಕೂಡಾ ಕೊಡುತ್ತಿರಲಿಲ್ಲಾ. ಒಂದು ದಿನಾ ಊರಿಗೆ ಕಲೆಕ್ಟರ್ ಬಂದಾಗ ಸಾವಕಾರನ ವಿರುದ್ಧ ಆಕೆ ದೂರನ್ನು ನೀಡಿದಳು. ಅಲ್ಲಿಂದ ಆತ ಇಕೆಯ ಮೇಲೆ ಹಲ್ಲನ್ನು ಮಸೆಯುತ್ತಿದ್ದ. ಆಕೆಯನ್ನು ಕೊಲ್ಲುವ ಹೊಂಚು ಹಾಕಿದ್ದ. ಆಕೆ ಒಂಭತ್ತು ತಿಂಗಳ ಗರ್ಭಿಣಿ ಆಗಿದ್ದಳು. ಸಾವಕಾರ ಆಕೆಯ ಗಂಡನಿಗೆ ಕಿವಿ ಊದಿ "ಹೊಟ್ಟೆಯಲ್ಲಿರುವ ಮಗು ನಿಂದಲ್ಲ ನಂದು, ಆಕೆಯನ್ನು ಕೊಲ್ಲು ಇಲ್ಲದಿದ್ದರೆ ನಾನೆ ಕೊಲ್ಲುವೆ" ಎಂದು ಬೆದರಿಕೆ ಒಡ್ಡಿದ.
ಆಕೆಯ ಗಂಡ ಆಕೆಯ ತುಂಬು ಉಬ್ಬಿದ ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದ್ದ. ಅದರ ಏಟಿಗೆ ಆ ಗರ್ಭಿಣಿ ಮೂರ್ಚೆ ಹೋದಳು. ಅವಳು ಸತ್ತಳೆಂದು ಭಾವಿಸಿ ದನದ ಕೊಟ್ಟಿಗೆಯಲ್ಲಿ ಆಕೆಯನ್ನು ಏಸೆದರು. ದನಗಳ ಕಾಲಿನಿಂದ ತುಳಿತಕ್ಕೊಳಗಾಗಿ ಅಲ್ಲೆ ಸತ್ತಳು ಎಂದು ಊರಿಗೆ ಸಾರಬೇಕು ಎಂಬ ಆಲೋಚನೆ ಆ ಮಹಾಷಯನದು. ಆಕೆ ಸತ್ತಿದ್ದಾಳ ಇನ್ನೂ ಉಳಿದಿದ್ದಾಳಾ ಎಂದು ಪರೀಕ್ಷಿಸಲು ದನಗಳ ಕೊಟ್ಟಿಗೆಗೆ ಬಂದಾಗ ಮೂಕ ಪ್ರಾಣಿಗಳಾದ ಹಸುಗಳು ಆಕೆಯನ್ನು ಸುತ್ತುವರೆದೂ ಅವರನ್ನು ಹತ್ತಿರಕ್ಕೆ ಬರದಂತೆ ಆಕೆಯನ್ನು ಕಾಪಾಡಿದರು. ಆಕೆಗೆ ಕೊಟ್ಟಿಗೆಯಲ್ಲಿಯೆ ಹೆರಿಗೆಯು ಆಯ್ತು. ಎಚ್ಚರವಾಗಿ ಆ ಹಸುಗೂಸನ್ನು ತೆಗೆದುಕೊಂಡು ಜೀವನ ಸಾಕಾಗಿ ಸಾಯಲು ಹೊರಟಳು.
ರೇಲ್ವೆ ಕಂಬಿಯ ಮೇಲೆ ಆತ್ಮಹತ್ಯೆಗೆ ಮಗುವಿನೊಂದಿಗೆ ಕುಳಿತಳು. "ಸಾಯಿಸೊದೆ ಇದ್ದಿದ್ದರೆ ಜನ್ಮ ಏಕೆ ನೀಡಿದೆ."? ಎಂಬ ಹಸುಗೂಸಿನ ಕಣ್ಣುಗಳು. ಅಲ್ಲೆ ಹತ್ತಿರದಲ್ಲಿ ಹಣ್ಣು ಹಣ್ಣು ಮುದುಕ ಹೊಟ್ಟೆ ಹಸಿವಿನಿಂದ ಅಳುತ್ತಿದ್ದ. ಅಲ್ಲಿಂದ ಎದ್ದ ಆ ತಾಯಿ ಅಲ್ಲೆ ಹತ್ತಿರ ಸುಡುತ್ತಿದ್ದ ಚಿತೆಯ ಹತ್ತಿರ ಹೋಗಿ ಹೆಣ್ಣಕ್ಕೆ ಎಸದಿದ್ದ ಗೋಧಿ ಮತ್ತು ಮಡಿಕೆಯಲ್ಲಿ ನೀರನ್ನು ಹಾಕಿ ಅದನ್ನೆ ಆ ಮುದಕನಿಗೆ ನೀಡಿ ಅವನ ಹೊಟ್ಟೆಯನ್ನು ತಣಿಸಿದಳು. ಅಂದು ಆ ಮುದುಕ ಆಕೆಗೆ ಸಾಕ್ಷಾತ ಶ್ರೀ ಕೃಷ್ಣ ಪರಮಾತ್ಮನ ರೀತಿ ಕಂಡ. ಅಂದಿನಿಂದ ಈ ಬದುಕು ನನಗಾಗಿ ಅಲ್ಲ ಬೆರೆಯವರಿಗಾಗಿ ಎಂದು ತೀರ್ಮಾನ ಮಾಡಿ. ತನಗೆ ಒಲಿದಿದ್ದ ಹಾಡುಗಾರಿಕೆಯಿಂದ ಹಾಡುತ್ತ ಭಿಕ್ಷೆ ಎತ್ತುತ್ತು ಅನಾಥ ಮಕ್ಕಳನ್ನು ಸಾಕಲು ಪ್ರಾರಂಭಿಸಿದಳು.
ಇಂದು ಆ ಮಹಾ ತಾಯಿಯು 1400 ಮಕ್ಕಳಿಗೆ ಜೀವನವನ್ನು ರೂಪಿಸಿದ್ದಾಳೆ. ಆಕೆಯ ಬಳಿ ಬೆಳೆದ ಮಕ್ಕಳೆಲ್ಲಾ ಉದ್ಯಮಿ, ಡಾಕ್ಟರ್, ಇಂಜಿನಿಯರ್, ಸರಕಾರಿ ನೌಕರರು, ವಕೀಲರಾಗಿ ಹಾಗೂ ಸಮಾಜದಲ್ಲಿ ಗೌರವದ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ. ಆ ಮಹಾ ತಾಯಿಯ ಹೆಸರು ಸಿಂದು ತಾಯಿ ಸಪ್ಕಾಲ ವಯಸ್ಸು 73. ಮಹಾರಾಷ್ಟ್ರದ ತುಂಬಾ ಇವರು ಚಿರ ಪರಿಚಿತರು.
ಇಂದಿಗೂ ಕೂಡಾ ಇವರು ಪರಿಶ್ರಮ ಪಟ್ಟು, ಭಾಷಣಗಳನ್ನು ನೀಡುವ ಮೂಲಕ ಅದರಿಂದ ಬಂದ ಹಣದಿಂದ ಆಶ್ರಮವನ್ನು ನಡೆಸುತ್ತಿದ್ದಾರೆ. ಅಂದು ಕೊಟ್ಟಿಗೆಯಲ್ಲಿ ಜನಿಸಿದ ಮಗು ಇಂದು ಡಾಕ್ಟರ್ ಆಗಿ ಇವರ ಆಶ್ರಮದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಇಂತಹವರನ್ನು ಗುರುತಿಸಿ ಗೌರವಗಳು, ಸತ್ಕಾರಗಳು ಸಾಕಷ್ಟು ಲಭಿಸಿವೆ. ಎಲ್ಲಾ ರಾಷ್ಟ್ರಪತಿಗಳಿಂದ ಸನ್ಮಾನಗಳಾಗಿವೆ.
ಒಂದು ದಿನಾ ಇದೆ ಆಶ್ರಮದ ಮುಂದೆ ಒಬ್ಬ ಮುದುಕ ಬಂದು ನಿಂತಿದ್ದ. ಈ ತಾಯಿ ಆತನನ್ನು ಒಳ ಕರೆದಳು. "ಅಂದು ನಾ ಅಳುತ್ತಿದ್ದೆ, ಇಂದು ನಿ ಅಳುತ್ತಿದ್ದಿಯಾ. ಅಂದು ನನ್ನ ಸಿರೇ ಹರಿದಿತ್ತು, ಇಂದು ನಿನ್ನ ಧೋತಿ ಹರಿದಿದೆ. ಎಲ್ಲವೂ ಸಮವಾಯ್ತು. ನೀನಿಲ್ಲಿರಬೇಕಾದರೆ ಮಗುವಾಗಿ ಬಾ ನಾನು ತಾಯಿಯಾಗಿ ಸಾಕ್ತೆನೆ" ಎಂದು ನುಡಿದಳು ಆತ ಬೇರಾರೂ ಅಲ್ಲ ಈಕೆಯನ್ನು ಒದ್ದು ಹೊಡೆದು ಕಳಿಸಿದ ಮಹಾಷಯ. ಈಕೆಯ ಗಂಡ. ತನ್ನ ಮಕ್ಕಳಿಗೆ ಈಕೆ ಹೇಳಿದಳು ಆತನನ್ನು ಚೆನ್ನಾಗಿ ನೋಡಿಕೊಳ್ಳಿ ಆತ ನನನ್ನು ಹೊರಗೆ ಹಾಕದಿದ್ದರೆ ನಿಮಗೆ ಈ ತಾಯಿ ಸಿಗುತ್ತಿರಲಿಲ್ಲ.
ಎಂತಹ ದಿವ್ಯತೆಯ ಮಮತಾಮಯಿ ಈಕೆ. ಭಾರತದ ಮಹಾನ್ ತಾಯಿ ಈಕೆ. ಇವರಿಗೆ ಭಾರತ ರತ್ನ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ದೊರಕಬೇಕು ಅದರಿಂದ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಬೇಕು. ಇಂತಹ ತಾಯಂದಿರ ಸಂತತಿ ಸಾವಿರ ಲಕ್ಷ ಕೋಟಿಯಾಗಲಿ. ಅನಾಥ ಎಂಬ ನಾಮ ನಾಶವಾಗಲಿ. 🙏🙏🙏🙏
🖋ರಾಜು ಪಾಟೀಲ


0 ಕಾಮೆಂಟ್‌ಗಳು