ಇವತ್ತು ಅತಿಯಾದ ಮಳೆ. ಹಾಳಾದ ಬೆಸಿಗೆಯಲ್ಲಿ ಈ ರೀತಿಯ ಮಳೆ ನಾನು ಹಿಂದೆ ಕಂಡಿರಲಿಲ್ಲಾ, ಬೇಸಿಗೆಯಲ್ಲಿ ಸಾಮನ್ಯವಾಗಿ ನಾನು ಕೊಡೆಯನ್ನು ತಂದಿರಲಿಲ್ಲಾ. ಡ್ರೈವರ್ ಪಾರ್ಕಿಂಗನಿಂದ ಕಾರು ತರುವವರೆಗೂ ಈ ಕೊರ್ಟಿನ ಛತ್ತಿನ ಆವರಣದಲ್ಲಿ ಆಶ್ರಯ ಪಡೆಯೊಣವೆಂದು ನಿಂತಿದ್ದೆ. ದೂರದಿಂದ 22 ವರ್ಷದ ವಯಸ್ಸಿನ ಆಸುಪಾಸಿನ ಹುಡುಗ ಅನಿಸುತ್ತೆ, ನೇರವಾಗಿ ಬಳಿ ಬಂದು ಸರ್ ನೀವೆಂದರೆ ನನಗೆ ತುಂಬಾ ಹೆಮ್ಮ, ಅಫಕೊರ್ಸ ನನಗೆ ಮಾತ್ರವಲ್ಲ ಇಡೀ ಜಿಲ್ಲೆಗೆ, ರಾಜ್ಯಕ್ಕೆ ನೀವೆಂದರೆ ಹೆಮ್ಮೆ. ನಿಮ್ಮ ಥರ ಸಾವಿರಾರು ಲಕ್ಷಾಂತರ ಹುಡಗರು ಆಗಬೇಕು ಅಂತಿದಾರೆ. ಅಫಕೊರ್ಸ ಅವರಿಗೆಲ್ಲಾ ನೀವೆ ರೊಲ್ ಮಾಡೆಲ್. ಆ ಸಾವಿರಾರು ಲಕ್ಷಾಂತರ ಹುಡಗರಲ್ಲಿ ನಾನು ಒಬ್ಬ ಸರ್. ನಾನು ನಿಮ್ಮ ಹಾಗೆ ಆಗಬೇಕು ಏನಾದರೂ ಸಲಹೆ-ಟಿಪ್ಸ್ ಕೊಡಿ ಅಂದಾ.
ನಾನು ಸಮೀಪದಿಂದ ಆತನನ್ನು ಸಂಪೂರ್ಣವಾಗಿ ಗಮನಿಸಿದೆ. ಶ್ರೀಮಂತನಲ್ಲದ ಅತೀ ಬಡವನು ಅಲ್ಲದ ಮಧ್ಯಮ ವರ್ಗದ ಹುಡುಗ. ಕೂದಲು ಸಿನೆಮಾ ನೋಡಿ ಕ್ರಾಪು ಮಾಡಿಸಿಕೊಂಡಿದ್ದು ನವೀನ ರೀತಿಯ ಬಟ್ಟೆಗಳನ್ನು ಹಾಕಿಕೊಂಡಿದ್ದ ಆದರೆ ಕಣ್ಣುಗಳಲ್ಲಿ ಅನಂತ ಕನಸುಗಳು ಇಡೇರಿಸಿಕೊಳ್ಳುವ ಭರವಸೆಯಂತಿದ್ದ. ಒಮ್ಮೆ ಅವನನ್ನು ನೋಡಿ ಮುಗುಳ್ನಕ್ಕು ಸುಮ್ಮನಾದೆ. ಆತ ಆಶ್ಚರ್ಯಕರವಾಗಿ ನನ್ನ ಉತ್ತರಕ್ಕಾಗಿ ಹಪಿಸುತ್ತಿದ್ದ. ಪೂರ್ಣವಾಗಿ ಗಮನಿಸಿದೆ. ಶ್ರೀಮಂತನಲ್ಲದ ಅತೀ ಬಡವನು ಅಲ್ಲದ ಮಧ್ಯಮ ವರ್ಗದ ಹುಡುಗ. ಕೂದಲು ಸಿನೆಮಾ ನೋಡಿ ಕ್ರಾಪು ಮಾಡಿಸಿಕೊಂಡಿದ್ದು ನವೀನ ರೀತಿಯ ಬಟ್ಟೆಗಳನ್ನು ಹಾಕಿಕೊಂಡಿದ್ದ ಆದರೆ ಕಣ್ಣುಗಳಲ್ಲಿ ಅನಂತ ಕನಸುಗಳು ಇಡೇರಿಸಿಕೊಳ್ಳುವ ಭರವಸೆಯಂತಿದ್ದ. ಒಮ್ಮೆ ಅವನನ್ನು ನೋಡಿ ಮುಗುಳ್ನಕ್ಕು ಸುಮ್ಮನಾದೆ. ಆತ ಆಶ್ಚರ್ಯಕರವಾಗಿ ನನ್ನ ಉತ್ತರಕ್ಕಾಗಿ ಹಪಿಸುತ್ತಿದ್ದ.
ಅಷ್ಟರಲ್ಲಿ ನನ್ನ ಕಾರು ಬಂತು. ನಾನು ಮೊದಲೆ ಮೌನ ಸ್ವಭಾವದವನು ನನ್ನ ಆಪ್ತರ ಹತ್ತಿರಾನೆ ನಾನು ಜಾಸ್ತಿ ಮಾತನಾಡಲ್ಲ ಇನ್ನೂ ಈ ಅಪರಿಚತ ಜೊತೆ ಮಾತನಾಡಲಿಲ್ಲಾ. ಸುಮ್ಮನೆ ಕಾರಿನ ಕಡೆ ಹೊರಟೆ ಅವನು ಮತ್ತೆ ಹಿಂಬಾಲಿಸಿ ಸರ್ ಸಲಹೆ ಅಂದಾ. ಲಕ್ಷ ಕೊಟ್ಟು ಓದು ಅಂದೆ. ಆತ ಸರ್ ನನ್ನಲ್ಲಿ ಲಕ್ಷ ಇಲ್ಲಾ ಬಡವ ಅಂದಾ. ಯಾಕೊ ಅಧಿಕ ಪ್ರಸಂಗದ ಮಾತು ಎಂದು ನಾನು ಕಾರು ಹತ್ತಿ ಹೊರಟೆ.
ಬಿಸಿಲ ಬೇನೆ ಇಡೀ ಊರು ರಣ ರಣವಾಗಿತ್ತು. ಈ ಮಳೆಯು ತಂಪನ್ನು ಎರೆಯಲೆಂದೆ ಬಂದಂತಿತ್ತು. ಮಣ್ಣಿನ ವಾಸನೆ ಘಮ್ಮೆನಿಸುತಲಿತ್ತು. ಡ್ರೈವರ ಕಾರನ MP3 ಸ್ಟೆರಿಯೋದಲ್ಲಿ ನನ್ನಿಷ್ಟದ ಘಜಲ ಹಾಕಿದ "ಘಜಲ ಪಂಡಿತ ಜಗಜಿತ ಸಿಂಗರ ಹಾಡು " ಚಿಟ್ಟಿನ ಕೊಯಿ ಸಂದೇಶ, ಜಾನೆ ಓ ಕೊನಸಾ ದೇಶ, ಜಹಾ ತುಮ್ ಚಲೆ ಗಯೆ". ಆ ಮಳೆ, ಆ ಹಾಡು, ನನಗೆ ರಸ್ತೆ ಬದಿಯಲ್ಲಿ ನಿಂತು ಒಂದು ಬಿಸಿ ಬಿಸಿ ಚಹಾ ಕುಡಿಯುವ ಸಂಭ್ರಮ ಅನಿಸಿತು ಆದರೆ ಪರಿಚಯ ಇಲ್ಲದೆ ಇರುವಲ್ಲಿ ಕುಡಿಯಬೇಕು. ಊರಲ್ಲಿ ನಾನೊಬ್ಬ ಗೌರವಾನ್ವಿತ ವ್ಯಕ್ತಿ ಎಲ್ಲಂದರಲ್ಲಿ ನಿಲ್ಲುವಂತಿಲ್ಲ. ಅದು ಈ ಉದ್ಯೋಗಕ್ಕೆ ಸಿಕ್ಕ ಘನತೆಯೆ, ಹೊರತು ಇವನಿಗೆ ಅದರಲ್ಲಿ ಸ್ವಲ್ಪವೂ ಇಷ್ಟವಿಲ್ಲಾ ಆದರೆ ಅನಿವಾರ್ಯ ಉದ್ಯೋಗವೆ ಆ ರೀತಿಯದು ಆದರೂ ಮನಸ್ಸು ಕೇಳಲಿಲ್ಲ ತಳಮಳ. ಏನಾದರೂ ಆಗಲಿ ಎಂದು ಡ್ರೈವರನನ್ನು ಆ ಊರಿನಿಂದ ಸುಮಾರು 30 ಕಿ.ಮಿ ದೂರದಲ್ಲಿರೊ ಡಾಬಾದ ಕಡೆ ಗಾಡಿನಾ ಓಡಿಸು ಅಂದೆ. ಅಲ್ಲಿ ನನ್ನ ಕೊಟನ್ನು ಕಾರಲ್ಲಿ ಬಿಟ್ಟು ಮಾಡಿದ ಇನಶರ್ಟನ್ನು ಹೊರಗೆಳೆದು ಸಾಮಾನ್ಯ ಕಾಲೇಜು ಹುಡಗರಂತೆ ಅಂಗಿಯ ತೊಳಿನ ಗುಂಡಿಯನ್ನು ತೆಗೆದು ಮಡಚಿ ಹಾಕಿ ಚಹಾ ಸ್ವಾದಿಸಲು ಹೋದೆ.
ಚಹಾ ಹಿರುತ್ತಾ ಎನೋ ಹಳೆಯ ನೆನಪುಗಳು, ಕಾಲೇಜು ದಿನಗಳಲ್ಲಿ ಕಳೆದ ಸಮಯಗಳು ಮರುಕಳಿಸಿದವು. ಎಷ್ಟೊಂದು ಮಜವಿತ್ತು ಪುನಃ ಆ ಸಮಯ ಸಿಗುವುದಿಲ್ಲಾ ಅದಕ್ಕೆ ಸ್ಟೂಡೆಂಟ್ ಲೈಫ್ ಇಸ್ ಗೊಲ್ಡನ್ ಲೈಫ ಅಂತಾರೆ. ಆದರೆ ಏಕೊ ಮಧ್ಯಾಹ್ನ ಸಿಕ್ಕಿದ ಹುಡುಗನ ನೆನಪು ಮರುಕಳಿಸಿತು. ಯಶಸ್ವಿಯಾಗಲು ಸಲಹೆ? ಆದರೆ ನಾನೇನು ಸಲಹೆ ನೀಡಲಿ. ನನ್ನಲ್ಲಿದ್ದ ಆ ಆಕ್ರೋಶ ತಾನೆ ನನ್ನ ಈ ಮಟ್ಟದ ಗೆಲುವಿಗೆ ಕಾರಣ. ಕೇವಲ ಸಲಹೆಗಳಿಂದ ಗೆಲುವು ಸಾಧ್ಯನಾ ? ಏನಿತ್ತು ನನ್ನ ಬಾಳಲ್ಲಿ ಮುರಕಲು ಗುಡಿಸಲು, ಕುಡುಕ ತಂದೆ, ಹರಕು ಸಿರೆಯ ತಾಯಿ, ತಂಗಿ-ತಮ್ಮ, ಯಾರೊ ದಾನವೆಂದು ಕೊಟ್ಟ ಬಟ್ಟೆಯನ್ನು ಹಾಕಿಕೊಂಡು ಕಳೆದ ಆ ದಿನಗಳು, ಒಂದೊತ್ತಿಗೂ ಊಟವಿಲ್ಲದೆ ಪರದಾಡಿದ ದಿನಗಳು ಆದರೆ ಅದೆ ಈ ನನ್ನ ಯಶಸ್ಸಿಗೆ ಕಾರಣವಾ ? ಇಲ್ಲಾ ಅದೊಂದ ರೀತಿ ಮಜವಿತ್ತು, ಸುಖವಾಗಿದ್ದೆ. ಆಗೆಲ್ಲಾ ನನಗೆ ಕನಸುಗಳಿರಲಿಲ್ಲಾ. ಹಾಗಾದರೆ ಯಾವದು ನನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು? ಯೋಚನಾ ಲಹರಿ ಇನ್ನಷ್ಟು ಆಳಕ್ಕೆ ಇಳಿಯಿತು.
ನೆನಪಾಯಿತು. ಅದೊಂದು ದಿನಾ ನನ್ನಲ್ಲಿ ಇದ್ದಿದ್ದರಲ್ಲೆ ಚೆನ್ನಾಗಿದ್ದ ಬಟ್ಟೆಯನ್ನು ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋಗಿದ್ದೆ. ಮದುವೆಯಂತು ಕನ್ನಡ ಮೇಸ್ಟ್ರು ಮಹಾಭಾರತದಲ್ಲಿ ವರ್ಣಿಸಿದ ಇಂದ್ರಪ್ರಸ್ಥವನ್ನೆ ಹೊಲುವಂತಿತ್ತು. ಅದು ನಮ್ಮಮ್ಮನ ಅಣ್ಣ ಅಂದರೆ ನನ್ನ ಸೋದರ ಮಾವನ ಮಗನ ಮದುವೆ. ಅಮ್ಮಾನೆ ಕಳಿಸಿದ್ದರು. ಅವರು ಸಾಹುಕಾರರು ನಾವು ಬಡವರು ಇದಕ್ಕೆ ದೇವರನ್ನ ದ್ವೇಷಿಸೊದಾ ಅಥವಾ ಕುಡಿದ ಅಮಲಿನಲ್ಲಿ ಎಲ್ಲವನ್ನು ಅಡವಿಟ್ಟು ಜುಜಾಡಿದ ಮಾಹಾಭಾರತದ ಧರ್ಮರಾಯನ ತದ್ವಿರುದ್ಧದಂತಿದ್ದ ನಮ್ಮಪ್ಪನನ್ನ ಬೈಯೊದಾ ತಿಳಿಯದು. ಮದುವೆ ಭರ್ಜರಿಯಾಗಿ ನಡೆಯುತ್ತಿತ್ತು. ನಾನು ಆಶ್ಚರ್ಯಕರ ರೀತಿಯಲ್ಲಿ ಎಲ್ಲವನ್ನು ಗಮನಿಸುತ್ತಿದ್ದೆ. ಕೆಲವು ಪರಿಚಿತ ಸ್ನೇಹಿತರು ಬಂದಿದ್ದರು ಅವರ ಜೊತೆ ಹರಟೆ ಹೊಡೆಯುತಿದ್ದೆ. ನನಗೆ ಮಾತು ಸಿಕ್ಕರೆ ಸಾಕು ಇಡೀ ಪ್ರಪಂಚಾನೆ ಮರಿತಿದ್ದೆ. ಊಟದ ಸಮಯ ಎಲ್ಲರೂ ಊಟದ ಕಡೆ ಹೊರಟರು ನಾನು ಊಟದ ಮೊದಲ ಪಂಕ್ತಿಯಲ್ಲಿ ಕುಳಿತಿದ್ದೆ. ಮದುವೆಗೆ ಆಗಮಿಸಿದ ಎಲ್ಲ ಅತಿಥಿಗಳಲ್ಲಿ ನಾನೆ ಸ್ವಲ್ಪ ಡಿಫರೆಂಟ ಕಾಣಿಸ್ತಿದ್ದೆ. ಅದು ಹೆಮ್ಮೆಯಲ್ಲ ದುರ್ದೈವ ಏಕೆಂದರೆ ನಾನು ನನ್ನ ಶರ್ಟಿಗೆ ತ್ಯಾಪೆ ಹಚ್ಚಿಸಿಕೊಂಡು ವಿಚಿತ್ರವಾಗಿ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದೆ. ಊಟದ ತಟ್ಟೆ ಬಂತು ಇಷ್ಟದ ಜಿಲೆಬಿಯೂ ಬಂತು ಬಾಯಲ್ಲಿ ನೀರು. ಇವತ್ತು ಒಂದು ವಾರದ ಊಟವನ್ನು ಮಾಡಿಬಿಡೋಣ ಎಂಬ ತಿರ್ಮಾನ. ಒಂದಲ್ಲದೆ ಎರಡೆರಡು ಜಿಲೆಬಿ ಹಾಕಿಸಿಕೊಂಡು ಚಪ್ಪರಿಸಿದೆ. ಚಪಾತಿ ತರಹೆವಾರು ಪಲ್ಯ ನೀಡುತ್ತಿದ್ದರು. ಅಷ್ಟರಲ್ಲಿ ಮುಂದಿದ್ದ ತಟ್ಟೆ ಬೀಸಿ ನನ್ನ ಮುಖಕ್ಕೆ ನೆರವಾಗಿ ಬಿತ್ತು. ಇಡೀ ಸಭಾಂಗಣವೆ ಸ್ತಬ್ಧ. ತಟ್ಟೆ ಬೀಸಿದ್ದು ನನ್ನ ಸೋದರ ಮಾವ. ಪಲ್ಯದ ಖಾರ ಕಣ್ಣಿನಲ್ಲಿ ಉರಿತಿತ್ತು. ಎಳೋ ಬಡವ ಯಾರೊ ನಿನ್ನ ಕರೆದಿದ್ದು ಚಾಂಡಾಳ ಬೆವರ್ಸಿ ಮುಂಡೆದೆ ಎಂದು ಕತ್ತಿಗೆ ಪಟ್ಟಿ ಹಿಡಿದು ಧರ ಧರ ಎಳೆದು ಹೊರಗೆ ತಂದು ನೂಕಿದ. ಮಾತು ನೋಡಿದರೆ ರಾಜನ ಥರ ಮಾತಾಡ್ತಾನೆ ಭಿಕ್ಷುಕ. ನನ್ನ ಮನೆಯ ಹೊಸ್ತಿಲು ತುಳಿಯೊ ಯೋಗ್ಯತೆ ಇಲ್ಲಾ ಮುಂಡೆದೆ ನಿನಗೆ, ಇನ್ನೂ ಮದುವೆಗೆ ಬಂದು ಮೊದಲ ಪಂಕ್ತಿಯಲ್ಲಿ ಕುಂತಿದಿಯಾ ಬೆವರ್ಸಿ ಅಂದ. ಕೋಪ ನೇತ್ತಿಗೆರಿತು, ಕೈ ಮುಷ್ಠಿ ಗಟ್ಟಿ ಮಾಡಿ ಏನಂದೆ ಎಂದು ಅವನ ಕಡೆ ನುಗ್ಗಿದೆ ಅಷ್ಟರಲ್ಲಿ ಅಲ್ಲಿದ್ದ ದಾಂಡಿಗರು ಬಂದು ನನ್ನ ನೆಲಕ್ಕೆ ಹಾಕಿ ಹಣ್ಣು ಹಣ್ಣಾಗಿ ಚಚ್ಚಿದರು, ಹೊಟ್ಟೆಗೆ ಬಲವಾಗಿ ಬೂಟುಗಾಲಿನಿಂದ ಒದ್ದರು. ಆ ಏಟಿಗೆ ಬಾಯಲ್ಲಿ ರಕ್ತ ಬಂತು. ಕೊನೆಗೆ ನಿತ್ರಾಣನಾಗಿ ಪ್ರಜ್ಞೆ ಕಳಕೊಂಡೆ ಊರ ಹೊರಗಿನ ತಿಪ್ಪೆಯಲ್ಲಿ ನನ್ನ ಎಸೆದು ಹೊರಟು ಹೋದರು.
ಎಚ್ಚರ ಆಗೋವಷ್ಟರಲ್ಲಿ ಮಧ್ಯರಾತ್ರಿ ಆಗಿತ್ತು. ಮೈಮೇಲೆ ಎಲ್ಲಾ ಊಟದ ತಟ್ಟೆಗಳು ಬಿದ್ದಿದ್ದವು. ಮೈ ತುಂಬಾ ಮುಸರೆಯ ವಾಸನೆ. ದೇಹದಲ್ಲಿ ಶಕ್ತಿಯಿಲ್ಲಾ ಸಂಪೂರ್ಣ ಶಕ್ತಿಯನ್ನು ಹಾಕಿ ಎದ್ದು ಸಣ್ಣಗೆ ತೆವಳುತ್ತಾ ಮನೆಗೆ ಬಂದೆ. ಅಮ್ಮ ಗಾಬರಿಯಿಂದ ವಿಷಯ ಕೇಳಿದಳು, ಎಲ್ಲವು ಚಾಚುತಪ್ಪದೆ ಹೇಳಿದೆ. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಪ್ಪ ತ್ರಿವಿಕ್ರಮನಂತೆ ತನ್ನ ಮಗನ ಹೊಡೆದವರ ಮೇಲೆ ಸೇಡು ತೀರಿಸಿಕೊಳ್ಳುವ ಎಂದು ಎದ್ದ ಆದರೆ ಆತನ ಸೂರಪಾನ ಆತನನ್ನ ಲಾಗ ಹೊಡೆಸಿತು, ಬಿದ್ದ.
ಒಂದು ವಾರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬರೀ ಆ ಮದುವೆಯ ಅವಮಾನ ಅಪಮಾನಗಳೆ ಕಣ್ಣುಮುಂದೆ. ಹುಷಾರಾದ ಮೇಲೆ ನನ್ನ ಮಾವನನ್ನು ಕೊಲೆ ಮಾಡಲೆಬೇಕು ಎಂಬ ತೀರ್ಮಾನ. ನನ್ನ ಬೆವರ್ಸಿ ಅಂದರು, ಊಟದ ತಟ್ಟೆ ಕಸಿದುಕೊಂಡರು, ತಿಪ್ಪೆಯಲ್ಲಿ ಬಿಸಾಡಿದರು. ಎಕೊ ತಳಮಳ ಗೊಂದಲ ಯಾಕಿದು ? ಯಾವದಕ್ಕೆ ಈ ಶಿಕ್ಷೆ ನಾವು ಮನುಷ್ಯರಲ್ವಾ? ಮತ್ತೆ ಮಲಗಿದೆ ಯಾರೊ ಒಬ್ಬ ಹಿರಿಯ ವ್ಯಕ್ತಿ ಬಂದ "ನಿನ್ಯಾವ ಮನುಷ್ಯ ಕಣೋ, ಇರೊದಕ್ಕೊಂದು ಸೂರಿಲ್ಲಾ, ಉಣ್ಣೊಕೆ ಅನ್ನದ ಗತಿಯಿಲ್ಲಾ, ಮಾನ ಮುಚ್ಚೊಕೆ ಒಂದು ಬಟ್ಟೆಯಿಲ್ಲಾ. ನಿನ್ನನ್ನ ಯಾವನಾದರೂ ಈ ಸಮಾಜದ ವ್ಯಕ್ತಿ ಅಂತಾ ಪರಿಗಣಿಸಬಹುದಾ ಥೂ.. ಎದ್ದೇಳು ಒಂದು ಗುರಿ ಮುಟ್ಟು ಆಗ ಇವೆಲ್ಲಾ ನಿನ್ನ ಬೆನ್ನ ಹಿಂದೆ ಬರ್ತಾವೆ. ಥಟ್ಟಂತ ಎಚ್ಚರವಾಯಿತು ಅಯ್ಯೊ ಕನಸಾ ಅಂದೆ. ಎದುರಿನ ಗೋಡೆಯ ಮೇಲೆ ವಿಶಾಲ ಬಾಹುಗಳನ್ನು ಕೈಕಟ್ಟಿ ನಿಂತ ವಿವೇಕಾನಂದರ ಚಿತ್ರಪಟ. ಯಾಕೊ ಅವರ ಕಣ್ಣಲ್ಲಿ ಜೀವಂತಿಕೆ ಎದ್ದು ಕಾಣುತ್ತಿತ್ತು. ನನ್ನನ್ನೆ ನೋಡುತ್ತಿರುವರೆಂಬ ಭಾವನೆ. ಆ ಚಿತ್ರಪಟದ ಅಡಿಯಲ್ಲಿ "ಎಳಿ ಎದ್ದೇಳಿ ಗುರಿ ಮುಟ್ಟವರೆಗೂ ನಿಲ್ಲದಿರಿ" ಎಂಬ ವಾಕ್ಯ. ನನಗೇನೊ ಸತ್ಯ ಹೊಳೆಯಿತು ಕನಸಿಗೂ ಇದ್ದಕ್ಕೂ ಸಾಮ್ಯವೆನ್ನುವಂತೆ ಭಾಸವಾಯಿತು. ಹೌದಲ್ವಾ ನಾನು ಇನ್ನೂ ಎದ್ದೆ ಇಲ್ಲಾ ಇನ್ನೂ ಗುರಿ ಎಲ್ಲಿಂದ! ಕೊಲೆಯ ವಿಚಾರ ಅಷ್ಟಕ್ಕೆ ಬಿಟ್ಟೆ. ಹುಶಾರಾದ ಮೇಲೆ ನೇರವಾಗಿ ಹೈದ್ರಾಬಾದ್ ಹೋದೆ. ಆಶ್ರಮದಲ್ಲಿ ವಾಸ ಮಾಡುತ್ತಾ ಪಾರ್ಟ ಟೈಮ್ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮುಗಿಸಿದೆ. ಅಲ್ಲಿಂದ ನೇರ ದೆಹಲಿಗೆ ಹೋದೆ ಅಲ್ಲಿಯೂ ಕೂಡಾ ಒಂದು ವರ್ಷ ಕಷ್ಟಪಟ್ಟು IAS ಪಾಸಾದೆ. ಜಿಲ್ಲಾಧಿಕಾರಿಯಾಗಿಯೇ ಊರಿಗೆ ಬಂದೆ.
ಇದೆ ಅಲ್ವಾ ಯಶಸ್ಸು. ಇದರ ಹಿಂದೆ ಯಾವ ಸಲಹೆಯೂ ಇಲ್ಲಾ ಕೇವಲ ಅವಮಾನ ಅಪಮಾನಗಳೆ ತುಂಬಿವೆ. ಅವುಗಳೆ ನನ್ನನ್ನು ಕೈ ಹಿಡಿದು ನಡೆಸಿದ್ದು. ಅಂದು ದುಡಿಕಿ ಮಾವನನ್ನು ಕೊಲೆ ಮಾಡಿದರೆ ಇಂದು ಜೈಲಲ್ಲಿ ಇರ್ತಿದೆ ಒಳ್ಳೆಯ ತಿರ್ಮಾನ ಕೈಗೊಂಡು ಜಿಲ್ಲಾಧಿಕಾರಿಯಾದೆ. ಅವನಗೆ ಕೃತಜ್ಞತೆ ಸಲ್ಲಿಸಬೇಕು. ಒಮ್ಮೆ ಆತ ಕಛೇರಿಗೂ ಬಂದಿದ್ದ, ತುಂಬಾ ಗೌರವಯುತವಾಗಿ ಮಾತಾಡಿಸಿದ. ತನ್ನ ಕೊನೆಯ ಮಗಳ ಸಂಬಂಧ ಬೆಳೆಸೊಕೆ ಬಂದಿದ್ದ. ಅವರನ್ನ ಗೌರವದಿಂದ ಮಾತನಾಡಿ "ಆ ಬೆವರ್ಸಿ ತಾಯಿಯ ಮಗನೆ ಕಣ್ರಿ ಇವನು, ಇಂತವನನ್ನು ಹೆಣ್ಣು ಕೊಟ್ಟರೆ ನಿಮ್ಮ ಮಗಳು ಬೆವರ್ಸಿಯ ಹೆಂಡತಿ ಆಗ್ತಾಳೆ" ಎಂದು ನಯವಾಗಿ ತಿರಸ್ಕರಿಸಿದೆ. ಪೆಚ್ಚು ಮುಖ ಮಾಡಿ ಹೊರಟ ಹೋದ. ಊರಲ್ಲೆಲ್ಲಾ ನನ್ನ ಸೋದರಳಿಯ ಜಿಲ್ಲಾಧಿಕಾರಿ ಎಂದು ಗತ್ತಿನಲ್ಲಿ ತಿರಗ್ತಾನಂತೆ ಎರಡು ಜಿಲೆಬಿಯ ರೂಣ ಇದೆ ನನ್ನ ಮೇಲೆ ಹೆಸರೆಳಿ ತಿರುಗಲಿ ಎಂದು ಬಿಟ್ಟೆ. ಅಂದು ಮೌನಿಯಾದವನು ಇಲ್ಲಿಯವರೆಗೂ ಮೌನವೆ ಆಸ್ತಿಯಾಗಿದೆ. ಇಂದು ಆ ಹುಡುಗ ಬಂದಾಗ ಸಲಹೆ ನೀಡಲು ನನ್ನಲ್ಲಿ ಅವಮಾನಗಳೆ ತುಂಬಿದ್ದವು ಅವನ್ನು ಅನುಭವಿಸಿದವನಿಗೆ ಬೆಂಕಿ ಬಿಳುತ್ತೆ ಆತ ರಾಕೆಟ್ ಥರ ವೇಗವಾಗಿ ಓಡಿ ಗುರಿಮುಟ್ಟಬಲ್ಲ. ಯಾವುದೇ ನೋವು ಕಷ್ಟ ಅವಮಾನ ಅನುಭವಿಸಿರದವ ಈ ಉದ್ಯೋಗದ ಮಹತ್ವವು ತಿಳಿಯೊದಿಲ್ಲಾ, ಯಶಸ್ಸಿನ ಗುರಿ ಸುಲಭ ಆಗೋದಿಲ್ಲ.....
ರಾಜು ಪಾಟೀಲ(ಸಿಂದಗಿ)


0 ಕಾಮೆಂಟ್‌ಗಳು