"ಜನ ನೂರಾರು ಥರ ಮಾತಾಡ್ತಿದ್ದಾರೆ ನಿನ್ನ ಬಗ್ಗೆ. ನೀನು ಏನಾದರೂ ಮಾಡು. ನನಗಿದೆಲ್ಲಾ ಸಹಿಸೊಕೆ ಆಗ್ತಿಲ್ಲಾ. ಬೇಗ ನೀನೆನಾದರೂ ಮಾಡಿ ಕೆಲಸ, ಗೌರವ ದಕ್ಕಿಸಿಕೊಂಡರೆ ನಾನು ನಿನಗೆ ದಕ್ಕುತ್ತೇನೆ ಇಲ್ಲದಿದ್ದರೆ ನಾನು ಇನ್ನೊಬ್ಬನಿಗೆ ದಕ್ಕಬೇಕಾಗುತ್ತೆ."
ಸಿಡಿಲು, ದಿಗುಲಿನ ಜೊತೆ ಜೊತೆಗೆ ಆಕೆಯ ಮುಗ್ಧತೆಗೆ ಮರುಕ ಉಂಟಾಯಿತು. ಜೊತೆ ಜೊತೆಗೆ ಆಕೆಯ ಬೌದ್ಧಿಕ ಮಟ್ಟದ ಕುರಿತು ಹೆಮ್ಮೆಯಾಯಿತು. ಇದೆ ಹುಡುಗಿಗೆ ಅಲ್ವಾ ಆರು ವರ್ಷದ ಹಿಂದೆ ಬೈದು ಬೈದು ಬುದ್ಧಿ ಹೆಳ್ತಿದ್ದಿದ್ದು. ಈಕೆಯನ್ನೆ ಅಲ್ವಾ "ಸಣ್ಣ ಮಗುವಿನ ರೀತಿ ಆಡ್ತಿಯಾ, ಜೀವನದ ಬಗ್ಗೆ ಏನಾದರೂ ಗೊತ್ತಾ ನಿನಗೆ?" ಅಂತಾ ಗದರಿಸುತ್ತಿದ್ದದ್ದು. ಆದರೆ ಅಂದು ನಾನು ಗದರಿಸುತ್ತಿದ್ದ ಹುಡುಗಿ ಇಂದು ನನಗೆ 'ಸಾಧಿಸಲು' ಹೇಳುತ್ತಿದ್ದಾಳೆ. ಅಲ್ಲದೆ ಸಣ್ಣಗೆ ಎದೆಯಾಳದಲ್ಲಿ ಬೆಂಕಿಹತ್ತಿ ಉರಿಯುವಂತೆ ಕಿಡಿ ಇಡುತ್ತಿದ್ದಾಳೆ. "ಯಾರು ಏನು ಬೇಕಾದರೂ ಅನ್ನಲ್ಲಿ ನಾನು ನಿನ್ನ ಬಿಟ್ಟು ಬದುಕಲ್ಲಾ." ಅನ್ನುತ್ತಿದ್ದ ಹೊಸ ಚೈತನ್ಯದಂತಿದ್ದ ಮುಗ್ಧ ಮುಖದಿಂದ ಸಣ್ಣಗೆ ಕರುವಿನಂತೆ ಎದೆಗೆ ಅಪ್ಪಿ ಹೇಳುತ್ತಿದ್ದವಳು, ಇಂದು ಎರಡು ಅಡಿ ದೂರ ನಿಂತು ಕೈಕಟ್ಟಿ ಎಚ್ಚರಿಕೆ ನೀಡುತ್ತಿದ್ದಾಳೆ.
ಆವಾಗಿನ ಆಕೆಯ ಆ ಮಾತಲ್ಲಿ ಅಪಾರ ಪ್ರೀತಿಯಿತ್ತು, ಅನರ್ಘ ತುಂಬು ವಸಂತಗಳ ಸುಂದರ ಕನಸುಗಳಿದ್ದವು. ಇಬ್ಬರಿಗೂ ಜವಾಬ್ದಾರಿಗಳಿರಲಿಲ್ಲಾ. ಪ್ರೀತಿಯೊಂದೆ ಈ ಭೂಮಿ ಮೇಲಿರುವ ಅತ್ಯಂತ ಬೆಲೆಬಾಳುವ ವಜ್ರವೆಂದು ಸಂಭ್ರಮಿಸಿದೆವು. ಆದರೆ ಇಂದು ಆಕೆಗೆ ಕೆಲಸ ಸಿಕ್ಕಿದೆ. ಆಕೆ ಕೈ ತುಂಬಾ ಸಂಬಳ ಪಡೆಯುವ ಜವಾಬ್ದಾರಿ ಹೆಣ್ಣುಮಗಳು. ನಾನು ನಿರುದ್ಯೋಗ ಅಪ್ರಯೋಜಕ ಯುವಕ. ನಿಜಾ ಪ್ರೀತಿಗೆ ಕಣ್ಣಿಲ್ಲಾ, ಜಾತಿಯಿಲ್ಲಾ, ಆಸ್ತಿ ಅಂತಸ್ಥಿಲ್ಲಾ ಆದರೆ ಕನಸಿದೆ. ಆ ಕನಸಲ್ಲಿ ತನ್ನ ಗಂಡ, ಮನೆ, ಮಗು, ಸಂಸಾರದ ಬಗ್ಗೆ ಅಪಾರ ಕನಸುಗಳ ಬುತ್ತಿಯನ್ನು ಕಟ್ಟಿಟ್ಟಿರುತ್ತಾಳೆ. ಪ್ರೀತಿ ಮಾಡುವ ಆ ಮುಗ್ಧ 16 ವಯಸ್ಸಿನ ಕನಸು-ಮನಸ್ಸೆ ಬೇರೆ. ಜವಾಬ್ದಾರಿ ಬಂದ ಈ 20 ವಯೋಮಾನದ ಪ್ರೀತಿಯ ಕನಸು-ಮನಸೆ ಬೇರೆ. ಇಲ್ಲಿ ಸಮಾಜದ ಜೊತೆ ಸ್ಪರ್ಧೆಗೆ ಇಳಿಯಬೇಕು. ಪ್ರೀತಿ, ಪ್ರೇಮ ಎಂಬುದೆಲ್ಲವೂ ಪುಸ್ತಕಗಳಲ್ಲಿ ಸುಮಧುರ ಕಥೆಗಳಾಗಿ, ಸಿನೆಮಾಗಳಲ್ಲಿ ನಟ-ನಟಿಯರು ಕೈ-ಕೈ ಹಿಡಿದು ಹಾಡುವುದರಲ್ಲಿಯೆ ಚೆಂದವೆಂದು ಅನಿಸಿತ್ತು.
ಕೊನೆಗೆ ಆಕೆಯ ಎಚ್ಚರಿಕೆಗೆ "ದಯವಿಟ್ಟು ಮೂರು ವರ್ಷ ಕಾದುಬಿಡು. ನಾನು ಏನಾದರೂ ಮಾಡುತ್ತೇನೆ. ಸಮಾಜ ಮತ್ತು ನಿಮ್ಮ ಕುಟುಂಬ ಎರಡು ಒಪ್ಪುತ್ತಾರೆ ಮದುವೆ ಆಗೋಣ, ಕಾದುಬಿಡು." ಆಕೆಯ ಕೈ ಹಿಡಿದು ಕೇಳಿದೆ. "ಆಯ್ತು ಬೇಗ ಏನಾದರೂ ಮಾಡು" ಎಂದು ತನ್ನ ಗಡಿಯಾರ ನೋಡುತ್ತಾ "ಬರ್ತೆನೆ" ಎಂದು ಹೇಳಿ ತಿರುಗಿಯೂ ನೋಡದೆ ಹೊರಟು ಹೋದಳು. ಎಷ್ಟು ಚಂದವಿದ್ದವೂ ಆ ದಿನಗಳು. ಮುಂದೆ ನೊಡುವದಕ್ಕಿಂತ ಹೆಚ್ಚು ಹಿಂತಿರುಗಿನೆ ಜಾಸ್ತಿ ನೊಡುತ್ತಾ ಕುದುಲುಗಳಲ್ಲಿ ಕೈಯಾಡಿಸುತ್ತಾ ಹೋಗುತ್ತಿದ್ದಕ್ಕೂ, ಈಗ ತಿರುಗಿಯೂ ನೋಡದೆ ಹೋಗುವದಕ್ಕೂ ತುಂಬಾ ದೂರ ದೂರವಾಗಿದೆ. ಸಂಬಂಧ ಎಂಬ ಸಣ್ಣ ಅಘಾತದ ಸುಳಿವು ಮನಸ್ಸಿನ ಮೂಲೆಯಲ್ಲಿ ಸಣ್ಣಗೆ ಕೂಗಿ ಹೇಳಿತು.
******
ಆವತ್ತೆಕೊ ಬೆಳ-ಬೆಳಿಗ್ಗೆನೆ ಒಂದ ರೀತಿಯ ತುಮುುಲ. ಎಷ್ಟೋ ದಿನಗಳ ಹಿಂದಿನ ದಿನಗಳಲ್ಲಿ ಅನುಭವಿಸುತ್ತಿದ್ದ ನಿವೇದನೆ ಪುನಃ ಅನುಭವಿಸುತ್ತಿದ್ದೆನೆಂಬ ಅನುಭವ. ಅವತ್ತು ಬೆಳಗಿನ ವಾಕಿಂಗ ಕೂಡಾ ಹೋಗಲಿಲ್ಲ. ಸ್ನಾನಮಾಡಿ ಒಂದು ಗ್ಲಾಸ್ ಹಾಲು ಕುಡಿದು ಆಫೀಸಿಗೆ ನಡೆದೆ. ಅಮ್ಮ "ಟಿಫನ್" ಅಂದರೂ "ಬೇಡಾ ಯಾಕೊ ಹಸಿವಿಲ್ಲಾ" ಎಂದು ಧರ ಧರನೆ ಬ್ಯಾಗ ಹಿಡಿದು ಕಾರು ಹತ್ತಿದ್ದೆ. ಕಾರಿನ ಇಗ್ನೇಷಿಯರಗೆ ಕೀ ಹಾಕಿ ಪ್ರರಂಭಿಸಿ ಇನ್ನೇನು ಗಾಡಿ ಮುಂದಕ್ಕೆ ಹೋಗಬೇಕು, ಯಾಕೊ ಬಹಳ ದಿನದಿಂದ ಹಾಡು ಹಾಡು ಕೇಳಿರಲಿಲ್ಲ ಕೇಳೊಣ ಅನ್ನಿಸಿತ್ತು. ನನ್ನ ನೆಚ್ಚಿನ ಹಾಡು ಟೇಪ್ ರೆಕಾರ್ಡರನಲ್ಲಿ ಹಾಕಿದೆ ಅದು ಸುಮಧುರವಾಗಿ ಹಾಡಲು ಪ್ರಾರಂಭಿಸಿತ್ತು "ನೂರು ಜನ್ಮಕೂ ನೂರಾರು ಜನ್ಮಕೂ ಒಲವಾ ಧಾರೆಯೇ ಒಲಿದೊಲಿದು ಬಾರಲೆ, ನನ್ನ ಆತ್ಮ ನನ್ನ ಪ್ರಾಣ ನೀನೆಂದು ನೂರು ಜನ್ಮಕೂ......." ಆಗ ಆಕೆಯ ಕೈ ಹಿಡಿದು ಕೆರೆಯ ಮೇಲೆ ಈ ಹಾಡು ಹಾಡುತ್ತಾ "ಮದುವೆ ಆದಮೇಲೆ ಪ್ರತಿ ದಿನ ರಾತ್ರಿ ನನಗೆ ಈ ಹಾಡು ಹಾಡಿಯೆ ಮಲಗಿಸಬೇಕು ನೀವು" ಎಂದು ಆಕೆ ಪಡೆದ ಪ್ರೇಮದ ವಚನ ನೆನಪಾಗಿ ಮನಸ್ಸಿನ ಆಳದಲ್ಲೆಲ್ಲೊ ಮೊಳೆಯಿಂದ ಹೊಡೆದು ಮಳೆಯಿಂದ ನೆನಸಿದಂತಾಯ್ತು. ಹಾಡು ಕೇಳುತ್ತಾ ಆಫೀಸ್ ಬಂದಿದ್ದೆ ಗೊತ್ತಾಗಲಿಲ್ಲಾ.
ಆಫೀಸಿನೊಳಗೆ ಒಂದು ಕೇಸ್ ಫೈಲ್ ಸ್ಟಡಿ ಮಾಡ್ತಿರಬೇಕಾದರೆ ಬಾಗಿಲು ತಳ್ಳಿ ಒಂದು ದಂಪತಿ ಒಳ ಬಂದು ಎದುರಿಗೆ ಕುಳಿತರು. ನನ್ನೆದುರಿಗೆ ಕುಂತಾಗಲೆ ಗೊತ್ತಾಗಿದ್ದು. ಎಂಟು ವರ್ಷದ ಹಿಂದೆ ನನ್ನೇದುರಿಗೆ ನಿಂತು ಎಚ್ಚರಿಕೆ ಕೊಟ್ಟು ನನಗಾಗಿ ಕಾಯದೆ ಹೋದ ಆ ಪ್ರಾಣಸಖಿ ಬಂದಿದ್ದಾಳೆ. ಬೆಳಗ್ಗಿಂದ ಆದ ಆ ಎಲ್ಲಾ ಅನುಭವಕ್ಕೆ ಇವತ್ತು ಸಂಭವಿಸಲಿರುವ ಈ ಘಟನೆಯೆ ಮೂಲ ಕಾರಣ ಎಂದು ಗೋತ್ತಾಗೊಕೆ ಹೆಚ್ಚೇನು ಸಮಯ ಹಿಡಿಯಲಿಲ್ಲಾ. ಗಂಡ-ಹೆಂಡತಿಯರಲ್ಲಿ ಸಾಮರಸ್ಯ ಇಲ್ಲ, ಡೈವೊರ್ಸ ಅಪ್ಲೆ ಮಾಡಲು ಬಂದಿದ್ದರು. ಆಕೆಯ ಮುಖ ನೋಡಿದೆ, ಮುಜುಗರಕ್ಕೊಳಗಾದ ಆಕೆ ತಲೆತಗ್ಗಿಸಿ ಕುಳಿತಳು. ನಾನು ನಿಜವಾಗಲೂ ಅವತ್ತು ಗೆದ್ದಿದ್ದೆ. "ಹಣ-ಆಸ್ತಿಯ ಮುಂದೆ ಪ್ರೀತಿ ಗೊಡ್ಡು" ಎಂಬ ವಾಕ್ಯ ಸುಳ್ಳೆಂದು ಕಂಡುಕೊಂಡೆ. ಮೂರೆ ಮೂರು ವರ್ಷ ಕಾದಿದ್ದರೆ ಇಬ್ಬರು ಕೂಡಿಕಂಡ ಕನಸುಗಳ ಲೊಕದಲ್ಲಿ ತೆಲುತ್ತಿದ್ವಿ. ನಾನೀಗ ಇಡೀ ಜಿಲ್ಲೆಗೆ ದೊಡ್ಡ ಲಾಯರ್. ಆದರೆ ನೀನು ಯಕಶ್ಚಿತ ಒಬ್ಬ ಎರಡನೆ ದರ್ಜೆಯ ಅಧಿಕಾರಿಯ ಹೆಂಡತಿ. ಅಂದು ನನ್ನ ಕೈಬಿಟ್ಟು ಇನ್ನೊಬ್ಬನ ಕೈ ಹಿಡಿದು ಹೋದೆ, ಇಂದು ಅದೇ ಕೈಯಿಂದ ದೂರಾಗಲು ಮರಳಿ ಇವನ ಹತ್ತೀರನೆ ಬಂದೆ. ಒಂದು ಅನರ್ಘ ದಿರ್ಘಕಾಲದ ಸಿಟ್ಟು ಆಕ್ರೋಷ, ವಿಧಿಯಾಟದಲ್ಲಿ ಮಂಜಿನಂತೆ ಕರಗಿತು. ಒಂದ ಕಡೆ ಆಕೆಯ ಪ್ರತಿಷ್ಠೆಯನ್ನು ಗೆದ್ದೆ ಎಂಬ ಖುಷಿ. ಇನ್ನೊಂದು ಕಡೆ ನನ್ನ ಗೆಳತಿಯ ಬಾಳು ಹೀಗಾತಲ್ಲ ಎಂಬ ಮರುಕ.............
ರಾಜು ಪಾಟೀಲ(ಸಿಂದಗಿ)
9611042409


2 ಕಾಮೆಂಟ್ಗಳು
ಸೂಪರ್ ದೋಸ್ತ್
ಪ್ರತ್ಯುತ್ತರಅಳಿಸಿ🙃🙃🙃
ಪ್ರತ್ಯುತ್ತರಅಳಿಸಿ