ಕ್ಷಮಿಸಿಬಿಡು ಅಮ್ಮ, ನಿನೆಂದುಕೊಂಡ ಆ ದೊಡ್ಡ ಮನುಷ್ಯ ನಾನಾಗಲಿಲ್ಲ.
ರಾಜು ಪಾಟೀಲ
ಒಂದು ಕಾಲವಿತ್ತು ನಾನಿವತ್ತು ಒಂದು ಹೊಟೇಲಗೆ ಸ್ನೇಹಿತರ ಜೋತೆ ಊಟಕ್ಕೆ ಹೊದರೆ ಅಮ್ಮ ಆವಾಗ ಒಂದು ತಿಂಗಳ ದುಡಿದ ತರುತ್ತಿದ್ದ ಸಂಬಳ ಆ ಹೋಟೆಲ ಬಿಲ್ಲ ಆಗಿರುತ್ತೆ. ಹಾಗಂತ ಊಟ ಮಾಡದೆ ಇರೋಕ ಆಗುತ್ತಾ...? ಹೋಟೆಲ ಹೊಗದೆ ಇರೋಕ ಆಗುತ್ತಾ...! ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಇಂಥಹ ಹಲವಾರು ಕಥೆಗಳು ಮನಪಲ್ಲಟದಲ್ಲಿ ಆಗಾಗ ಚಲನಗೊಂಡು ಏನೊ ಒಂದು ಬ್ಯ್ಲಾಕ ಅಂಡ ವೈಟ ಮಜಾ ನಿಡುತ್ತೆ. ಆ ದಿನಗಳು, ಆ ಕಷ್ಟಗಳು ವ್ಹಾ ಸೂಪರ. ಆವಾಗೆಲ್ಲ ಸಾವಕಾರರ ಮಕ್ಕಳಿಗೆ ನೊಡಿದಾಗ ನೊಡುವಂತೆನೆ ಇರಬೇಕು ಅನಿಸುವ ಆಸೆ. ಅವರಂತೆ ಬಟ್ಟೆ ಹಾಕಿಕೊಳ್ಳೊ ಆಸೆ, ಅವರಂತೆ ಶೂ ಚಪ್ಪಲಿ ಹಾಕೊ ಆಸೆ, ಅವರಂತ ಮನೆಯಲ್ಲಿ ಇರೊವಾಸೆ. ಆದರೆ ಏನ ಮಾಡೋದು ಬಡತನ... ಹಾಗಂತ ನಾನು ದೇವರನ್ನ ಶಪಿಸಲ್ಲ. ಅದು ನನ್ನ ಮನೆಯ ಯಜಮಾನತನ ವಹಿಸಿಕೊಂಡ ಪುಣ್ಯಾತ್ಮ ನಮ್ಮನ್ನು ಆ ಬಾಳಿಗೆ ತಂದಿದ್ದು. ಅವನಿಗಿದ್ದ ಬೆಜವಾಬ್ದಾದಾರಿತನ, ಅವನ ಕುಡಿತದ ಚಟ, ಮಟಕಾ ಚಟ ನನ್ನನ್ನು ನನ್ನ ಕುಟುಂಬವನ್ನು ಆ ದಿಕ್ಕಿಗೆ ತಳ್ಳಿದ್ದು. ಅದು ಬೇರೆ ಯಾರೂ ಅಲ್ಲ ನನ್ನ ತಾಯಿಯ
ಕೂಡುಕ ಗಂಡ ಅಫಕೊರ್ಸ ನನ್ನ ತಂದೆ, ನಮ್ಮಪ್ಪ.
ಒಬ್ಬ ಕೂಲಿ ಮಾಡುವನೆ ಆಗಲಿ ಆತನಿಗೆ ಜವಾಬ್ದಾರಿತನ ಅನ್ನೊದ ಇದ್ದರೆ, ಆತನಿಗೆ ಕುಟುಂಬದ ಮೇಲೆ ಕಾಳಜಿಯಿದ್ದರೆ,
ಆತ ಖಂಡಿತವಾಗಿ ಮಕ್ಕಳ ಆಸೆಗಳನ್ನು ಪೂರೈಸ್ತಾನೆ. ಬೈಕ ತೆಗೆದುಕೊಳ್ಳೊಕ ಆಗದಿದ್ದರೂ ಸೈಕಲ ಮೇಲಾದರೂ ಸವಾರಿ ಮಾಡಸ್ತಾನೆ. ಅದು ಖುಷಿ ಕುಟುಂಬ. ಬಡತನದಲ್ಲೆ ಸಿರಿತನ ಕಾಣೊ ಕುಟುಂಬ. ಆದರೆ ನಮ್ಮ ಕುಟುಂಬದ ಥರ ಇರ್ತಾರಲ್ಲ ಕುಡುಕ ಶಿಖಾಮಣಿಗಳು ಇವರಿಂದ ದರಿದ್ರ ಎಂದಿಗೂ ಕೊನೆಯಾಗುವದಿಲ್ಲ. ಮುಂದೆ ಇವರ ಮಕ್ಕಳು ಕೂಡಾ ಅದೆ ದಾರಿ ಹಿಡಿದು ನಡೆಯುವ ಸಂಗತಿಗಳೆ ಹೆಚ್ಚು. ಅದಕ್ಕೆಲ್ಲಾ ಕಾರಣ ದಿನಾಲೂ ಮನೆಯಲ್ಲಿ ಸಾಮನ್ಯವಾಗಿ ಕಾಣುವ ಹಿಂಸೆ, ಅವಾಚ್ಛ ಶಬ್ದಗಳು, ದುಡ್ಡಿಗಾಗಿ ಪಿಡಿಸುವದು, ದುಶ್ಚಟಗಳು ದಿನದ ಟೂತಪ್ರೇಶನಂತೆ ಯೂಸ ಮಾಡೊಥರ ಮಾಡ್ತಾರಲ್ಲ, ಇದನ್ನೆಲ್ಲಾ ನೊಡಿ ನೊಡಿ ಮಕ್ಕಳಿಗೆ ಕೂಡಾ ಅದೆನೂ ಸಾಮಾನ್ಯವೆಂಬಂತೆ ನಾವೂ ಹೀಗೆ ಇರಬೇಕು ಎಂಬುದು ರೂಢಿಗತವಾಗಿ ಬಂದಬಿಡುತ್ತೆ. ಸಾಮಾನ್ಯವಾಗಿ ಅಂತಹ ಮಕ್ಕಳ ಬಾಯಲ್ಲಿ ದೇಹದ ಕೆಳಗಿಂದ ಎಲ್ಲಾ ಅಂಗಗಳ ಅಶ್ಲಿಲ ಪದಗಳು ಬಂದು ಸಲಿಸಾಗಿ ಹಾದುಹೊಗುತ್ತೆ.
ಅವರ ಸ್ನೇಹಿತರು ಕೂಡಾ ಅಂತಹವರೆ ಸಿಕ್ಕಿರುತ್ತಾರೆ.
ಆದರೆ ಇದಕ್ಕೆಲ್ಲಾ ಕಾರಣ ಮನೆಯ ಯಜಮಾನ ಅನ್ನಿಸಿಕೊಂಡವ ತನ್ನ ಜವಾಬ್ದಾರಿಯನ್ನು ಮರೆತು ದುಶ್ಚಟಗಳಿಗೆ ದಾಸನಾಗಿ ತಿರುಗುವದು.
ನಮ್ಮದ್ದು ಅದೇ ರೀತಿಯ ಕುಟುಂಬ ಆದರೆ ನನ್ನ ತಾಯಿ ಸಹಾನಾಮೂರ್ತಿ ದೇವನೆಂಬ ಕುಂಬಾರನಲ್ಲಿ ಮಣ್ಣೆಂಬ ನನ್ನ ತಾಯಿ ತಾನು ಬೆಂದು ಬೆಂದು ನಮ್ಮನ್ನ ಒಂದು ರೂಪು ಕೊಟ್ಟಳು. ಆ ಕೊಳಕು ಸಮಾಜದಿಂದ ಹೊರತೆಗೆದು ಹೊಸ ಬಾಳು ಕಲಿಸಿದಳು. ಯಜಮಾನ ಕುಡಿದು ತಿರುಗುವಾಗ ನನ್ನ ತಾಯಿ ಪ್ರೈವೆಟ್ ಶಾಲೆಯಲ್ಲಿ ವಸತಿ ಮಕ್ಕಳಿಗೆ ಮೂರು ಹೊತ್ತು ಅಡಿಗೆ ಮಾಡುವ ಕೆಲಸದಿಂದ ಮನೆಯನ್ನು ನಡೆಸಿಕೊಂಡು ಹೊದವಳು. ಮಕ್ಕಳು ಕಲಿಲಿ ಅಂತಾ ನಮ್ಮನ್ನ ಶಾಲೆಗೆ ಸೆರಿಸಿದಳು. ಸರಕಾರಿ ಶಾಲೆಯಲ್ಲ ಪ್ರೈವೇಟ್ ಸ್ಕೂಲ. ಮೆಚ್ಚಲೆ ಬೇಕೂ ನಮ್ಮಮ್ಮನ ಧೈರ್ಯಕ್ಕೆ ತಾನೂ ದುಡಿತಿರೊದು ಕೂಲಿ ಅದು ದಿನಕ್ಕೆ ಮೂವತ್ತು ರೂಪಾಯಿ ತಿಂಗಳಿಗೆ ಒಂಬೈನೂರ ರೂಪಾಯಿ ಅದರಲ್ಲಿ ನಂಗೆ ನನ್ನ ತಮ್ಮನಿಗೆ ಶಾಲೆ ಮನೆಯ ಸಂಸಾರ ಮತ್ತು ಅವಾಗ ಅವಾಗ ನಮ್ಮಪ್ಪನ ಬಾಯ ಚಟಕ್ಕೆ ಒಂದಿಷ್ಟು ದುಡ್ಡು ಇಷ್ಟೆಲ್ಲದರ ಮಧ್ಯ ದಿನಾಲೂ ಮನೆಲಿ ಕಿರಿ ಕಿರಿ ಅದರ ಜೋತೆಗೆ ಗಂಡನಿಂದ ನಮ್ಮ ತಾಯಿಗೆ ಏಟೂ. ಆದರೂ ಯಾರಿಗೂ ಹೆಳದೆ ಸಹಾನಾಮೂರ್ತಿಯಂತೆ ಈ ಜಗತ್ತಲ್ಲಿ ಎಲ್ಲರಂತೆ ನಾನು ಒಂದು ಜೀವ ಇವೆಲ್ಲ ಸರ್ವೆ ಸಾಮಾನ್ಯ ಎಂದು ಬದುಕನ್ನು ಸಾಗಿಸುತ್ತಿದ್ದಳು.
ಇವತ್ತಲ್ಲ ನಾಳೆ ನಮಗೂ ಒಳ್ಳೆಯದು ಆಗುತ್ತೆ ಎಂಬ ನಂಬಿಕೆಯೊಂದಿಗೆ. ಇಗಿನ ಹೆಣ್ಮಕ್ಕಳು ಗಂಡ ಸರಿಯಾಗಿ ಮಾತಾಡಿಸಿಲ್ಲ, ಅತ್ತೆ ಬೈದರೂ, ಅಂತೆಲ್ಲಾ ಆತ್ಮಹತ್ಯೆ ಮಾಡ್ಕೊಳತಾರಲ್ಲ ಅವರಿಗಂತೂ ಏನು ಹೇಳುವ ವ್ಯವಧಾನವೂ ಉಳಿದಿಲ್ಲಾ. ಯಾಕಂದರೆ ಹೆಳಿದರೆನೆ ಆತ್ಮಹತ್ಯೆ ಮಾಡಿಕೊಳ್ಳುವವರು ಇದಾರೆ. ಹಾಗಂತ ನಮ್ಮಮ್ಮನಿಗೆ ಆತ್ಮಹತ್ಯೆ ಮಾಡಿಕೊಳ್ಳೊ ಮನಸ್ಸು ಬಂದಿಲ್ಲ ಅಂತಿಲ್ಲ. ಬಂದಿದೆ ಆದರೆ ಆಕೆ ಗಟ್ಟಿಗಿತ್ತಿ, ಬದುಕಿ ತೋರಿಸಬೆಕು ಈ ಸಮಾಜದಿಂದ ಎದ್ದು ಹೊರಬಂದು ಮಕ್ಕಳ ಮುಖಾಂತರ ಭವಿಷ್ಯ ಕಾಣಬೆಕು ಎಂದವಳು. ಅಯ್ಯೊ ಹೆಳಬೆಕೆಂಬ ವಿಷಯ ಮರೆತು ತಾಯಿಯ ಕಷ್ಟವನ್ನೆ ಹೆಳ್ತಿದಿನಿ. ಅದು ತುಂಬಾ ದೊಡ್ಡದಿದೆ ಬಿಡಿ. ನಾನು ಹೆಳಬೆಕೆಂದಿರುವದು ಎನೆಂದರೆ ಒಂದಿನಾ ಶಾಲೆಯಲ್ಲಿ ಹೊಸ ಶೂ ತಗೊಬೆಕು ಎಲ್ಲರೂ ಅದನ್ನ ಹಾಕಿಕೊಂಡೆ ಶಾಲೆಗೆ ಬರಬೇಕು ಅಂತಾ strictly ಆರ್ಡರ ಮಾಡಿದ್ದರೂ. ಪಾಪ ಅವರಾದರೂ ಏನ ಮಾಡೋಕ ಆಗುತ್ತೆ ಅವರ ಸ್ಕೂಲ್ reputation. ಅದೊಂದ ಉದ್ಯೋಗ ಬೇರೆ ಅವರ ಉದ್ಯಮ ಚನ್ನಾಗಿ ನಡೆಯಬಕು ಅಂದರೆ ಇವೆಲ್ಲಾ ಫಾರ್ಮಲಿಟಿಸ ನಾವೂ ಒಪ್ಪಿಕೊಳ್ಳಲೆಬೆಕು.
ಅಷ್ಟಕ್ಕೂ ಅವರೆನು ನಮ್ಮ ಮನೆತನಕ ಬಂದಿದ್ದಾರ ಬನ್ನಿ ನಮ್ಮ ಶಾಲೆಗೆ ಅಂತಾ, ನಾವೆ ಹೊಗಿದ್ವಿ. ನಿಜಹೆಳಬೆಕೆಂದರೆ ನಾವೂ ಸರಕಾರಿ ಶಾಲೆಯಲ್ಲಿ ಕಲಿತು ಬಿಸಿಊಟ ತಿಂದರೂ ಅಷ್ಟೆ ಕಲಿತಿದ್ವಿ ಯಾಕಂದರೆ ನಮ್ಮ ಬುದ್ಧಿಮಟ್ಟವೆ ಅಂತದಿತ್ತು. ಆದರೆ ನನ್ನ ತಾಯಿಯ ಆಸೆ "ನನ್ನ ಮಕ್ಕಳಿಗಿ "ಚಲೊಸಾಲಿಗ ಹಚ್ಚದರ ಶಾಣ್ಯಾ ಆತಾರ" ಎಂಬ ಕಲ್ಪನೆ.
ಮನೆಗೆ ಬಂದು ಅಮ್ಮಂಗೆ ಹೆಳದೆ "ನಂಗ ಬೂಟ ಬೆಕು ಇಸಗೂಟದರ ಸಾಲಿಗ ಹೊಗ್ತಿನಿ ಇಲ್ಲ ಹೋಗಲ್ಲ". ಪಾಪ ಇಗಾಗಿದ್ದರೆ ಪರಸ್ಥಿತಿ ಅರ್ಥ ಆಗ್ತಿತ್ತು ಆವಾಗ ಮಗು ಮನಸ್ಸು ಹಟವೊಂದೆ ಇತ್ತು. ಪಾಪ ನನ್ನ ತಾಯಿ ತಿಂಗಳ ಒಂಬೈನೂರಲ್ಲಿ ಎನೆನೊ ಕಮೆಂಟಮೆಂಟ ಮಾಡಿ ಎನೆನೊ ಪ್ಲಾನ ಮಾಡಿ ಉಳಿಸಕೊಬೆಕಂತ ಸಾಕಷ್ಟು ಪ್ರಯತ್ನ ಪಡ್ತಿದ್ದಳು ಆದರೆ ಖರ್ಚ ಇರೊದೆ. "ಆತು ನಾಳೆ ಇಸ್ಕೊಟತಿನಿ ಅಂದಳು". ಸಾಯಂಕಾಲದ ಅಡಿಗೆ ಕೆಲಸ ಮುಗಿಸಿ ಆ ಶಾಲೆಯ ಮಾಲಿಕರ ಹತ್ತಿರ " ಸರ್ ನಂಗ ನಾಲ್ಕ ನೂರ ರೂಪಾಯಿ ಬೆಕಾಗಿತ್ತರಿ ನನ್ನ ಪಗಾರನಾಗ ಮೂರಾಕಾಕತ್ತಿರ" ಅಂದಳು. ಆಯ್ತು ಅಂದು ಅವನು ದುಡ್ಡು ಕೊಟ್ಟ ನನ್ನ ಕರಕೊಂಡು ಚಪ್ಪಲಿ ಅಂಗಡಿಗೆ ಹೊದಳು ನಮ್ಮನ್ನ ನೊಡಿದರೆ ಅಂಗಡಿಯವರಿಗೆ ಗೊತ್ತಾಗಿ ಬಿಡುತ್ತೆ ಇವರಿಗೆ ಯಾವ ಚಪ್ಪಲಿ ತೋರಿಸಬೆಕು ಅಂತಾ ಮತ್ತು ಅವರು ನಮಗೆ ಅಷ್ಟೊಂದ ಕೇರ ಮಾಡಿ ತೊರಿಸೊದು ಇಲ್ಲ ಯಾಕಂದರ ಬಡತನ ನೊಡಿ.... ಸಮಾಜ ಆಟ ಆಡಿಸುತ್ತೆ. ನಾವೆ ಅವರನ್ನ ಕೆಳಬೆಕು ತೊರಿಸಿ ತೊರಿಸಿ ಅಂತಾ. ಅವರಾ ಒಂದೆ ತೊರಿಸಿ ಇದೆ ಲಾಸ್ಟ ಪಿಸ ಮತ್ತೊಂದಿಲ್ಲ ತಗೊತಿರ ತಗೊರಿ ಇನ್ನೊಂದ ಇಲ್ಲಾ ಅನ್ನೊ ಅಂಗಡಿಯವರಿದ್ದಾರೆ. ನಂಗೆ ಹೊಸ ಬೂಟಿನ ಖುಷಿ ಅಮ್ಮನ ಮುಖದ ಮೆಲಿನ ಭಾವನೆನೆ ಗೊತ್ತಾಗಲಿಲ್ಲ. ಪಾಪ ಅವಳ ತೆಲೆಯಲ್ಲಿ ದುಡ್ಡೆಷ್ಟು ಆಗುತ್ತೆ ಇವನು ಚೌಕಾಸಿ ಮಾಡಿದರೆ ಕೊಡ್ತಾನ ಇಲ್ಲ ಹೆಂಗೆ ಅಂತಾ. ತುಂಬಾ ಬಡವಳು ರಿ ಅವಳು. ಅಂಥವರನ್ನ ಇಗ ಕಂಡರು ನನ್ನ ತಾಯಿ ಮೊದಲು ಹಿಗೆ ಇದ್ದಳು ಅಂತಾ ಅನಿಸುತ್ತೆ. ಸ್ವಲ್ಪ ಭಾವೂಕನಾಗ್ತಿನಿ ಆದರೆ ನಂಗೆ ಒಂದು ಮೂಲೆಯಲ್ಲಿ ಬರೆಯುವ ಅಭ್ಯಾಸ ಮಾಡಿಕೊಂಡಿದ್ದೆನೆ. ಎಲ್ಲರಿಗೂ ಇಂಥಹ ಹಳೆಯ ಭಾವನಾತ್ಮಕ ಕಥೆಗಳು ಇರ್ತಾವೆ ಒಬ್ಬರಿಗೆ ದುಖ ಆಗುತ್ತೆ, ಒಬ್ಬರಿಗೆ ಕಣ್ಣಿರು ಬರುತ್ತೆ, ನನ್ನಂಥವರಿಗೆ ಈ ಭಾವ ಒಂದೆನೊ ಫಿಲ್ ನಿಡುತ್ತೆ ಜೋತೆಗೆ ದೊಡ್ಡ ಸಾಹಿತಿಯಂತೆ ಬರೆಯಲು ಪ್ರೇರಣೆ ನೀಡಿ ಸಮಾಧಾನ ತರಿಸುತ್ತೆ. ಕಡೆಗೂ ಕೊಂಡಳು ನಾಲ್ಕ ನೂರಲ್ಲಿ ಎರಡು ಬಿಳಿಯ ಬೂಟು ಮತ್ತು ಅದರ ಜೋತೆಗೆ ಸಾಕ್ಸ. ನಂಗಂತೂ ತುಂಬಾ ಖುಷಿ ನನ್ನ ಮುಖದ ಮೆಲಿನ ಖುಷಿ ನೊಡಿ ಅವಳಿಗೂ ಖುಷಿ. ನಾಳೆ ನನ್ನ ಮಗ ನೌಕರಿ ಮಾಡ್ತಾನ, ಕಲಿತ ದೊಡ್ಡ ಮನುಷ್ಯ ಆಗ್ತನಂತ. ಆದರೆ ಇವತ್ತಿನ ವರೆಗೂ ನಾನವಳಿಗೆ ತಪ್ಪಾಯ್ತು ಅಮ್ಮ ಅಂತಾ ಕ್ಷಮೆ ಕೆಳಲೆಯಿಲ್ಲಾ. ಯಾಕಂದರೆ ಅವಳು ಅಂದುಕೊಂಡ ದೊಡ್ಡ ಮನುಷ್ಯ ನಾನು ಆಗಲೆಯಿಲ್ಲ...........




14 ಕಾಮೆಂಟ್ಗಳು
ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಘಟನೆ ಸಂಭವಿಸಿರುತ್ತೆ ಅಥವಾ ಬೇರೆ ರೀತಿಯಿಂದಲೂ ತಾಯಿ ಮಕ್ಕಳಿಗಾಗಿ ಕೆವಲ ಮಕ್ಕಳಿಗಾಗಿ ಮಾತ್ರ ತನ್ನೆಲ್ಲ ನೋವನ್ನ ಮರೆತು ನಮ್ಮ ಖುಷೀಯಲ್ಲಿ ಸಮಾಧಾನ ತಂದ್ಕೊತಾಳೆ ನಿಜವಾಗಲು ಅಮ್ಮ ನಿನ್ನ ತ್ಯಾಗಕ್ಕೆ
ಪ್ರತ್ಯುತ್ತರಅಳಿಸಿನಾನೆಷ್ಟು ಜನ್ಮ ಎತ್ತಿದರೂ ನಿನ್ನ ಋಣ ಮುಟ್ಟಿಸೊಕೆ ಆಗಲ್ಲ.
ಪದಗಳೇ ಸಾಲದಮ್ಮ ನಿನ್ನ ಮಮತೆಯ ಹೊಗಳಲು..ಮನ ಮುಟ್ಟುವ ಲೇಖನ ಅಣ್ಣ. ಪದಗಳಲ್ಲಿ ಭಾವ, ಭಾವನೆ ಎದ್ದು ಕಾಣುತ್ತೆ..👍🙏
ಪ್ರತ್ಯುತ್ತರಅಳಿಸಿಪ್ರತಿ ಮನುಷ್ಯನ ಅಂತಃರಾಳದ ಮಾತನ್ನು ಸವಿಸ್ತಾರವಾಗಿ ಬರೆದಿದ್ದಿರಿ ನೀಲ್ಲದಿರಲ್ಲಿ ನಿಮ್ಮ ಬರವಣಿಗೆ....
ಪ್ರತ್ಯುತ್ತರಅಳಿಸಿಕಷ್ಟಗಳು ಇದ್ದೇ ಇರುತ್ತವೆ ಈಗಲೂ ಅದೇ ತರದ ಕಷ್ಟಗಳು ನಮ್ಮನ್ನ ಬರುತ್ತಿರುತ್ತವೆ ನಾವು ಈಗ ಅದೇ ನಮ್ಮ ತಾಯಿಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂಬುವುದು ಅರಿವಿನಲ್ಲಿ ಇರಬೇಕು ಈಗಲೂ ತಪ್ಪು ಮಾಡಿದರೆ ಕ್ಷಮಿಸುವುದು ತಾಯಿನೆ ಹೊರತು ನಾವೆಲ್ಲ ..
ಪ್ರತ್ಯುತ್ತರಅಳಿಸಿತಾಯಿ ಕರುಣಾಮಯಿ .. ತಾಯಿಯಲ್ಲಿ ಶಿಕ್ಷೆನೆ ಇರುವುದಿಲ್ಲ ಅಣ್ಣ ಕ್ಷಮೆ ಯಾತಕ್ಕೆ ಅಣ್ಣ..
ಪ್ರತ್ಯುತ್ತರಅಳಿಸಿGood massage 👌👍
ಪ್ರತ್ಯುತ್ತರಅಳಿಸಿತಾಯಿ ಬಗ್ಗೆ ಹೇಳಲು
ಪ್ರತ್ಯುತ್ತರಅಳಿಸಿತಾಯಿಯ ಪ್ರೀತಿಯ ಬಗ್ಗೆ
ಅವಳು ಕಷ್ಟ ಪಟ್ಟು ನಮ್ಮನ್ನ ಸಾಕಿ ಸಲಹಿದ ಬಗ್ಗೆ
ಹೇಳಲು ಸಾಧ್ಯವಿಲ್ಲ
ತಾನು ಕಷ್ಟ ಪಟ್ಟರು ತನ್ನ ಮಕ್ಕಳು ಸುಖದಿಂದ ಬಾಳಲಿ ಎಂದು ಹಾರೈಸಿದ ಜೀವವೆ ನನ್ನ ಅಮ್ಮ
ನಿಮ್ಮ ಲೇಖನಕ್ಕೆ ಧನ್ಯವಾದಗಳು
🙏😍
ಅಳಿಸಿಧನ್ಯವಾದಗಳು ತಮ್ಮ ಅಭಿಪ್ರಾಯ ಮನಸ್ಸಿಗೆ ತುಂಬಾ ಹಿಡಿಸಿತು. ಒಬ್ಬ ಬರಹಗಾರನಿಗೆ ಪ್ರಶಂಸೆಯ ದೊಡ್ಡ ಪ್ರಶಸ್ತಿ ಇನ್ನಷ್ಟು ಬರೆಯುವಂತೆ ಪ್ರೆರಪಿಸುವದೆ ಇಂತಹ ಕಮೆಂಟಗಳು....
ಅಳಿಸಿಕಮೆಂಟ ಮಾಡಿದ ಎಲ್ಲರಿಗೂ ಧನ್ಯವಾದಗಳು. ಒಬ್ಬ ಬರಹಗಾರನಿಗೆ ಪ್ರಶಂಸೆಯ ದೊಡ್ಡ ಪ್ರಶಸ್ತಿ ಇನ್ನಷ್ಟು ಬರೆಯುವಂತೆ ಪ್ರೆರಪಿಸುವದೆ ಇಂತಹ ಕಮೆಂಟಗಳು
ಪ್ರತ್ಯುತ್ತರಅಳಿಸಿತಪಾಯಿತು ಅಮ್ಮ ಇನ್ನೊಮ್ಮೆ ನಿನಗೇ ನೋವು ಕೊಡುವುದಿಲ್ಲ ,
ಪ್ರತ್ಯುತ್ತರಅಳಿಸಿನಮ್ಮಳಗೊಬ್ಬ ಕವಿ ಹುಟ್ಟ್ಯಾನ ಅಂತ ಕುಸಿ 😘😘😍😍🙏🙏
ಪ್ರತ್ಯುತ್ತರಅಳಿಸಿRaju ninu dodda noukari togolika enaitu nimma tayiyannu channagi nodikondare saku edakkinta bere kushi enide? Obbatayige tannamaga olleyavnagidre saku adakkinta bere kushi yavudu illa
ಪ್ರತ್ಯುತ್ತರಅಳಿಸಿತಾಯಿಯನ್ನು ವರ್ಣನೆ ಮಾಡಲು ಪದಗಳು ಸಾಲದು ನಾವು ಯಷ್ಟೇ ಜನ್ಮ ಹೆತ್ತರು ತಾಯಿ ರುಣ ತಿರದು ಆದರೆ ಜಿವನ ಇರುವರೆಗು ತಾಯಿ ತಂದೆ ಸೆವಾ ಮಾಡೊಣ
ಪ್ರತ್ಯುತ್ತರಅಳಿಸಿ