ಜಗವಾ ತೋರಿಸಿದಾಕೆ
ಜನ್ಮವಾ ಕೊಟ್ಟಾಕೆ ನಮ್ಮವ್ವ.
ಉಣಿಸಿದಳು ಕಲಿಸಿದಳು
ಹೊಟ್ಟೆಯ ಬರಿಯನಿಟ್ಟು, ನೋವನ್ನ ಹೂತಿಟ್ಟು.
ನಗಿಸಿದಳು ನಲಿಸಿದಳು
ದು:ಖವಾ ಮರೆಮಾಚಿ, ಹರ್ಷದಿ ಕೈಚಾಚಿ
ಜಗವೆಲ್ಲಾ ಸುತ್ತಿದ್ದರೂ
ಸಿಗೋದಿಲ್ಲಾ ನಿನ್ನಷ್ಟು ಶ್ರೇಷ್ಠರೂ.
ನರಜನ್ಮ ನೀಡಿದ ಭಗವಂತ
ನಿನ್ನೆದುರಿಗೆ ಕೈಮುಗಿದು ನಿಂತ.
ಕೈ ಮುಗಿದೆ ಹುಡುಕಾಡಿ ದೇವರುಗಳನ್ನ ದೇಗುಲಲ್ಲಿ
ಕೈ ಮುಗಿಯಲಿಲ್ಲಾ ಕಣ್ಣೆದುರಿಗಿರುವ ಅವ್ವನಿಗೆ ಮನೆಯಲ್ಲಿ
ಅವಳ ಕೊನೆಗಾಲಕ್ಕೆ ಮರೆತ ನನ್ನಂಥ ಮೂಢನಿಗೆ
ನನ್ನ ಅಂತ್ಯಕ್ಕೆ, ನನ್ನ ಕೊನೆಗಾಲಕ್ಕೆ
ಹಾಡುತ್ತಿರುವೆ ಈ ಚರಮ ಗೀತೆಯ ಅವಳ ನೆನಪಲ್ಲೆ.......
ರಾಜು ಪಾಟೀಲ (ಸಿಂದಗಿ)
ಜನ್ಮವಾ ಕೊಟ್ಟಾಕೆ ನಮ್ಮವ್ವ.
ಉಣಿಸಿದಳು ಕಲಿಸಿದಳು
ಹೊಟ್ಟೆಯ ಬರಿಯನಿಟ್ಟು, ನೋವನ್ನ ಹೂತಿಟ್ಟು.
ನಗಿಸಿದಳು ನಲಿಸಿದಳು
ದು:ಖವಾ ಮರೆಮಾಚಿ, ಹರ್ಷದಿ ಕೈಚಾಚಿ
ಜಗವೆಲ್ಲಾ ಸುತ್ತಿದ್ದರೂ
ಸಿಗೋದಿಲ್ಲಾ ನಿನ್ನಷ್ಟು ಶ್ರೇಷ್ಠರೂ.
ನರಜನ್ಮ ನೀಡಿದ ಭಗವಂತ
ನಿನ್ನೆದುರಿಗೆ ಕೈಮುಗಿದು ನಿಂತ.
ಕೈ ಮುಗಿದೆ ಹುಡುಕಾಡಿ ದೇವರುಗಳನ್ನ ದೇಗುಲಲ್ಲಿ
ಕೈ ಮುಗಿಯಲಿಲ್ಲಾ ಕಣ್ಣೆದುರಿಗಿರುವ ಅವ್ವನಿಗೆ ಮನೆಯಲ್ಲಿ
ಅವಳ ಕೊನೆಗಾಲಕ್ಕೆ ಮರೆತ ನನ್ನಂಥ ಮೂಢನಿಗೆ
ನನ್ನ ಅಂತ್ಯಕ್ಕೆ, ನನ್ನ ಕೊನೆಗಾಲಕ್ಕೆ
ಹಾಡುತ್ತಿರುವೆ ಈ ಚರಮ ಗೀತೆಯ ಅವಳ ನೆನಪಲ್ಲೆ.......
ರಾಜು ಪಾಟೀಲ (ಸಿಂದಗಿ)

0 ಕಾಮೆಂಟ್‌ಗಳು